ಯೋಗ- ವ್ಯಾಯಾಮ ರಾಜ್ಯ

ಮಾ.11ರಿಂದ 14ರ ವರೆಗೆ ಕರ್ನಾಟಕ ರಾಜ್ಯ ಆನ್‍ಲೈನ್ ಯೋಗಾಸನ ಕ್ರೀಡಾ ಚಾಂಪಿಯನ್‍ಶಿಪ್ -2021

(ಸಾಂದರ್ಭಿಕ ಚಿತ್ರ- ಕೃಪೆ: ಅರ್ಬನ್ ಬ್ಯಾಲೆನ್ಸ್)

ಮಂಗಳೂರು:

ಇದೇ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಯೋಗಾಸನ ಕ್ರೀಡಾ ಸ್ಪರ್ಧೆಗೆ ರಾಜ್ಯ ಯೋಗಪಟುಗಳ ತಂಡವನ್ನು ಆಯ್ಕೆ ಮಾಡಲು ಮಾರ್ಚ್‌ 11 ರಿಂದ 14 ರ ವರೆಗೆ ಆನ್‍ಲೈನ್ ಯೋಗಾಸನ ಚಾಂಪಿಯನ್ಸ್ ಶಿಪ್ಸ್ ಅನ್ನು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದೆ.

ರಾಷ್ಟ್ರೀಯ ಯೋಗಾಸನ ಕ್ರೀಡಾ ಸಂಸ್ಥೆಯು ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಕ್ಕೆ ನೋಂದಾಯಿತವಾಗಿದೆ. ಈ ರಾಷ್ಟ್ರೀಯ ಯೋಗಾಸನ ಕ್ರೀಡಾ ಸಂಸ್ಥೆಗೆ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು ನೋಂದಾಯಿತವಾಗಿದೆ. ಈ ಕ್ರೀಡಾ ಸಂಸ್ಥೆಯಿಂದ ಈ ಯೋಗಾಸನ ಸ್ಪರ್ಧೆಯನ್ನು ಸಬ್ ಜ್ಯೂನಿಯರ್, ಜ್ಯೂನಿಯರ್ ಹಾಗೂ ಸೀನಿಯರ್ ಈ ಮೂರು ವಿಭಾಗಗಳಲ್ಲಿ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ನಡೆಸಲಾಗುತ್ತದೆ.

ಇತ್ತೀಚೆಗೆ ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸಚಿವರು ಯೋಗಾಸನವನ್ನು ಕ್ರೀಡೆ ಎಂದು ಘೋಷಣೆ ಮಾಡಿದ್ದಾರೆ.

ವಿಜೇತರಾದ ಪ್ರಥಮ ಮೂರು ಯೋಗಪಟುಗಳನ್ನು ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದೆಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಂ. ನಿರಂಜನ ಮೂರ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ಯೋಗಪಟುಗಳು ಮಾರ್ಚ್‌ 8ರ ಸಂಜೆ 5 ಗಂಟೆಯ ಒಳಗಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಳ್ಳಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಕಂಡವರನ್ನು ಸಂಪರ್ಕಿಸಲು ಕೋರಲಾಗಿದೆ..

ಗೋಪಾಲಕೃಷ್ಣ ದೇಲಂಪಾಡಿ (ಮೊ : 9448394987), ಮಂಜುನಾಥ್ ಡಿ.ಡಿ. 8050024582

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕೂಡ್ಲಿ ಗುರುರಾಜ್ ಅವರ ‘ಸುದ್ದಿ ಬರಹ ಮತ್ತು ವರದಿಗಾರಿಕೆ’ ಬಿಡುಗಡೆಗೆ ಸಿದ್ಧ

Upayuktha

ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ನಿಧನ

Harshitha Harish

‘ಕಡಲತಡಿಯಿಂದ ಹಿಮಗಿರಿಯ ತನಕ’: ಹರಿದ್ವಾರದಲ್ಲಿ ಲೋಕಾರ್ಪಣೆ

Upayuktha