ಜಿಲ್ಲಾ ಸುದ್ದಿಗಳು

ಕಾಸರಗೋಡು ಜಿಲ್ಲೆಯ 5 ಗಡಿ ರಸ್ತೆಗಳಲ್ಲಿ ಆಂಟಿಜೆನ್ ಟೆಸ್ಟ್ ಸೌಲಭ್ಯ ಜಾರಿ

ಕಾಸರಗೋಡು: ಕರ್ನಾಟಕದಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವ 17 ಗಡಿ ರಸ್ತೆಗಳಲ್ಲಿ 5 ಗಡಿ ರಸ್ತೆಗಳ ಚೆಕ್ ಪೋಸ್ಟ್ ವ್ಯವಸ್ಥೆ ಸಜ್ಜುಗೊಳಿಸಲಾಗಿದೆ. ಇತರ ರಾಜ್ಯಗಳಿಂದ ಕೇರಳ ಪ್ರವೇಶಿಸುವ ಮಂದಿಯಲ್ಲಿ ಕೋವಿಡ್ ನೆಗೆಟಿವ್ ಆಗಿರುವ ಸರ್ಟಿಫಿಕೆಟ್ ಇಲ್ಲದ ಮಂದಿಗೆ ಆಂಟಿಜೆನ್ ಟೆಸ್ಟ್ ನಡೆಸಲು ಸೌಲಭ್ಯ ಒದಗಿಸಲಾಗುವುದು.

ವೀಡಿಯೋ ಕಾನ್ ಫೆರೆನ್ಸ್ ಮೂಲಕ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.

ತಲಪ್ಪಾಡಿ ಚೆಕ್ ಪೋಸ್ಟ್ (ಎನ್.ಎಚ್.66), ಅಡ್ಕಸ್ಥಳ, ಅಡ್ಯನಡ್ಕರಸ್ತೆ(ಎಸ್.ಎಚ್.55), ಆದೂರು-ಕೊಟ್ಯಾಡಿ-ಸುಳ್ಯ ರಾಜ್ಯ ಹೆದ್ದಾರಿ (ಎಸ್.ಎಚ್.55), ಪಾಣತ್ತೂರು-ಚೆಂಬೇರಿ-ಮಡಿಕೇರಿ (ಎಸ್.ಎಚ್.56), ಮಾಣಿಮೂಲೆ-ಸುಳ್ಯ ಎಂಬ ರಸ್ತೆಗಳಲ್ಲಿ ಚೆಕ್ ಪೋಸ್ಟ್ ಸಜ್ಜುಗೊಳಿಸಿ, ಆಂಟಿಜೆನ್ ಟೆಸ್ಟ್ ಗೆ ಸೌಲಭ್ಯ ಜಾರಿಗೊಳಿಸಲಾಗುವುದು. ಈ ಚೆಕ್ ಪೋಸ್ಟ್ ಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಆಂಟಿಜೆನ್ ಟೆಸ್ಟ್ ಸೌಲಭ್ಯ ಇರುವುದು. ಈ ಚೆಕ್ ಪೋಸ್ಟ್ ಗಳ ಮೂಲಕ ಸಂಜೆ 6 ಗಂಟೆಯ ನಂತರ ಬೆಳಗ್ಗೆ 6 ಗಂಟೆ ವರೆಗೆ ಇತರ ರಾಜ್ಯಗಳಿಮದ ಆಗಮಿಸುವ ಯಾತ್ರಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು.

12 ಪಾಯಿಂಟ್ ಗಳಲ್ಲಿ ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು.
ತೂಮಿನಾಡ್ ರಸ್ತೆ, ಕೆದಂಪಾಡಿ ಪದವು ರಸ್ತೆ, ಸುಂಕದಕಟ್ಟೆ =ಮುಡಿಪು ರಸ್ತೆ, ಕುರುಡಪದವು ರಸ್ತೆ, ಮುಳಿಗದ್ದೆ ರಸ್ತೆ, ಬೆರಿಪದವು, ಸ್ವರ್ಗ-ಆರ್ಲಪದವು ರಸ್ತೆ, ಕೊಟ್ಯಾಡಿ-ಪಳ್ಳತ್ತೂರು-ಈಶ್ವರಮಂಗಲ ರಸ್ತೆ, ಕೊಟ್ಯಾಡಿ-ಅಡೂರು-ದೇವರಡ್ಕ ರಸ್ತೆ, ಗಾಳಿಮುಖ-ಈಶ್ವರಮಂಗಲ-ದೇಲಂಪಾಡಿ ರಸ್ತೆ, ನಾಟೆಕಲ್ಲು-ಸುಳ್ಯಪದವು ರಸ್ತೆ, ಚೆನ್ನಂಕುಂಡ್-ಚಾಮಕೊಚ್ಚಿ ರಸ್ತೆ ಎಂಬ 12 ಪಾಯಿಂಟ್ ಗಳಲ್ಲಿ ಕರ್ನಾಟಕದಿಂದ ಜಿಲ್ಲೆಗೆ ಪ್ರವೇಶಿಸುವ ಯಾತ್ರಿಕರು ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸಬೇಕು.

ಒಂದೇ ದಿನ ಆಗಮಿಸಿ ಮರಳುವ, ದಿನನಿತ್ಯ ಪ್ರಯಾಣ ನಡೆಸುವವರು ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಯಾ ಗಡಿಪ್ರದೇಶದ ಆಂಟಿಜೆನ್ ಟೆಸ್ಟ್ ಗೆ ಒಳಗಾಗುವುದು ಅಗತ್ಯವಿಲ್ಲ.

ಚಿಕಿತ್ಸೆ ಯಾ ತುರ್ತು ಅಗತ್ಯಗಳಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಅದೇ ದಿನ ಮರಳುವ ಮಂದಿಗೆ, ದಿನನಿತ್ಯ ಯಾತ್ರೆ ನಡೆಸುವ ಮಂದಿಗೆ ನೆಗೆಟಿವ್ ಸರ್ಟಿಫಿಕೆಟ್ ಹಾಜರುಪಡಿಸುವುದು ಯಾ ಗಡಿಪ್ರದೇಶದ ಆಂಟಿಜೆನ್ ಟೆಸ್ಟ್ ಗೆ ಒಳಗಾಗುವುದು ಅಗತ್ಯವಿಲ್ಲ.

ಕರ್ನಾಟಕದ ಸಮೀಪದ ಗ್ರಾಮ ಪಂಚಾಯತ್ ಗಳಿಗೆ ಮಾತ್ರ ಗಡಿ ದಾಟಿ ಬರುವ ಮಂದಿಗೆ ನೋಂದಣಿಯಿಲ್ಲದೆ ಪ್ರಯಾಣಿಸಲು ಮಂಜೂರಾತಿ ಇರುವುದು. ಅವರು ಈ ಗಡಿ ಮೀರಿ ಸಂಚಾರ ನಡೆಸುವುದಿಲ್ಲ ಎಂಬ ಸಂಬಮಧಿಸಿದ ಗ್ರಾಮ ಪಂಚಾಯತ್ ನ ದೃಡೀಕರಣ ಪಡೆದಿರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಸುಳ್ಯಪದವು ಗಡಿ ಮೂಲಕ ನಾಟೆಕಲ್ಲಿಗೆ ಅಕ್ರಮವಾಗಿ ಕರ್ನಾಟಕದ ಟ್ಯಾಕ್ಸಿಗಳು ಸಂಚಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಆರ್.ಟಿ.ಒ.ಗೆ ಸಭೆ ಆದೇಶ ನೀಡಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಹಾವೇರಿ :ಶಾಲಾ ಕಾಮಾಗಾರಿಗಾಗಿ ತೋಡಿದ್ದ ಗುಂಡಿಗೆ ಬಿದ್ದು 3 ಮಕ್ಕಳು ಸಾವು

Harshitha Harish

ದ.ಕ ಜಿಲ್ಲಾಧಿಕಾರಿಯಾಗಿ ಡಾ. ರಾಜೇಂದ್ರ ಕೆ.ವಿ ಅಧಿಕಾರ ಸ್ವೀಕಾರ

Upayuktha

ದ.ಕ. ಜಿಲ್ಲೆಯಲ್ಲಿ ಇಂದು ಕೊರೊನಾ ಪಾಸಿಟಿವ್ ಇಲ್ಲ

Upayuktha

Leave a Comment