ಜಿಲ್ಲಾ ಸುದ್ದಿಗಳು

ಸ್ಥಳೀಯ ಚುನಾವಣೆಗಳಿಗೆ ಕನ್ನಡದಲ್ಲೇ ಮತದಾರ ಪಟ್ಟಿ, ಚೀಟಿ, ಸೂಚನಾಪತ್ರ ನೀಡಲು ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಮನವಿ

ಪ್ರಾತಿನಿಧಿಕ ಚಿತ್ರ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆ- 2020ರಲ್ಲಿ ಭಾಷಾ ಅಲ್ಪಸಂಖ್ಯಾಕ ಕನ್ನಡ ಪ್ರದೇಶಗಳಾದ ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಮತದಾರ ಪಟ್ಟಿ, ಮತದಾನ ಚೀಟಿ, ಮತಗಟ್ಟೆಗಳಲ್ಲಿ ಸಲಹೆ ಸೂಚನೆಗಳು ಮೊದಲಾದ ಎಲ್ಲ ಮಾಹಿತಿ ಸೂಚನೆಗಳನ್ನು ಕನ್ನಡದಲ್ಲೂ ಒದಗಿಸಬೇಕು ಹಾಗೂ ಕನ್ನಡ ತಿಳಿದ ಚುನಾವಣಾ ಸಿಬಂದಿಗಳನ್ನು ಕರ್ತವ್ಯಕ್ಕೆ ನೇಮಿಸಬೇಕು ಎಂದು ಕೋರಿ ಕನ್ನಡಿಗರು ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳು ಭಾಷಾ ಅಲ್ಪಸಂಖ್ಯಾಕ ಕನ್ನಡ ಪ್ರದೇಶಗಳೆಂದು ಕೇರಳ ಸರಕಾರದಿಂದ ಮಾನ್ಯತೆ ಪಡೆದಿದ್ದು ಈ ಪ್ರದೇಶಗಳಲ್ಲಿ ಮತದಾರ ಪಟ್ಟಿ ಸಹಿತ ಎಲ್ಲ ಸಾರ್ವಜನಿಕ ಮಾಹಿತಿಗಳನ್ನು ಕನ್ನಡದಲ್ಲೂ ಒದಗಿಸಬೇಕು/ ಪ್ರಕಟಿಸಬೇಕು/ ಪ್ರದರ್ಶಿಸಬೇಕು ಎಂದು ಸರಕಾರಿ ಆದೇಶವಿರುವುದು ತಮಗೆ ತಿಳಿದೇ ಇದೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಮತದಾರ ಪಟ್ಟಿ, ಮತದಾನ ಚೀಟಿ, ಮತಗಟ್ಟೆಯ ಸೂಚನೆಗಳು ಮೊದಲಾದವುಗಳನ್ನು ಮಲಯಾಳ ಭಾಷೆಯಲ್ಲಿ ಮಾತ್ರ ಒದಗಿಸಲಾಗುತ್ತಿದ್ದು ಭಾಷಾ ಅಲ್ಪಸಂಖ್ಯಾಕ ಮತದಾರರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಮತಗಟ್ಟೆಗಳಲ್ಲಿ ನೇಮಕಗೊಂಡ ಚುನಾವಣಾ ಸಿಬಂದಿಗಳು ಕನ್ನಡ ಅರಿಯದವರಾಗಿದ್ದು ಕನ್ನಡದಲ್ಲಿ ನೋಟೀಸು ಪ್ರದರ್ಶಿಸುವ ಅಥವಾ ಮಾಹಿತಿ ನೀಡುವ ಕಾಳಜಿಯನ್ನು ತೋರುತ್ತಿಲ್ಲ. ಈ ಬಗ್ಗೆ ಪತ್ರಿಕಾ ವರದಿಗಳ ಜತೆಗೆ ಹಲವಾರು ದೂರುಗಳನ್ನು ತಮಗೆ ಈ ಹಿಂದೆ ಸಲ್ಲಿಸಿರುತ್ತೇವೆ. ಆದರೂ ಈ ತೊಂದರೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ವಿಷಾದಕರವಾಗಿದೆ.

ಆದುದರಿಂದ ಬರುವ ಸ್ಥಳೀಯಾಡಳಿತ ಸಂಸ್ಥೆಗಳ (ತ್ರಿಸ್ತರ ಪಂಚಾಯತ್) ಚುನಾವಣೆಯಿಂದ ಪ್ರಾರಂಭಿಸಿ ಮುಂದಿನ ಎಲ್ಲ ಚುನಾವಣೆಗಳಲ್ಲೂ ಮತದಾರ ಪಟ್ಟಿ, ಮತದಾನ ಚೀಟಿ, ಮತಗಟ್ಟೆಯ ಸೂಚನೆಗಳು ಮೊದಲಾದ ಚುನಾವಣೆಯ ಸಂಬಂಧದ ಎಲ್ಲ ಮಾಹಿತಿಗಳನ್ನೂ ಕನ್ನಡದಲ್ಲೂ ಒದಗಿಸಬೇಕು, ಕನ್ನಡ ಪ್ರದೇಶಗಳ ಮತಗಟ್ಟೆಗಳಲ್ಲಿ ಕನ್ನಡಬಲ್ಲ ಚುನಾವಣಾ ಸಿಬಂದಿಗಳನ್ನು ಕರ್ತವ್ಯಕ್ಕೆ ನೇಮಿಸಬೇಕು ಎಂದು ಕನ್ವಿನಡಿಗರ ಸಂಘಟನೆಗಳು ಒತ್ತಾಯಿಸಿವೆ.

Related posts

ಕೊಪ್ಪಳ: ವೃದ್ಧಾಶ್ರಮದಲ್ಲಿ ಮೃತಪಟ್ಟ ಅನಾಥ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ ಸ್ಥಳೀಯರು

Upayuktha

65ನೇ ಕರ್ನಾಟಕ ರಾಜ್ಯೋತ್ಸವ: ದ.ಕ ಜಿಲ್ಲಾಡಳಿತದಿಂದ 38 ಮಂದಿಗೆ ಪುರಸ್ಕಾರ, ಕರುನಾಡ ಹಿರಿಮೆಯ ಸ್ಮರಣೆ

Upayuktha

ಮಾಸ್ಕ್ ಕಡ್ಡಾಯ, ಧರಿಸದಿದ್ದರೆ ದಂಡ: ದ.ಕ ಡಿಸಿ

Upayuktha