ಕ್ಷೇತ್ರಗಳ ವಿಶೇಷ ದೇಶ-ವಿದೇಶ ಪ್ರಮುಖ

ಅತಿ ಎತ್ತರದ ಶಿವಲಿಂಗ ಆಕಾರದ ದೇವಾಲಯ ಫೆ.22ರಂದು ಲೋಕಾರ್ಪಣೆ: ಕಾಸರಗೋಡಿನ ವಿಷ್ಣು ಪ್ರಸಾದ್ ಹೆಬ್ಬಾರ್ ನೇತೃತ್ವದಲ್ಲಿ ಪ್ರತಿಷ್ಠಾ ಕಾರ್ಯ

ಅಸ್ಸಾಂನ ನಾಗಾಂವ್‌ನ ಪುರಾನಿಗುಡಂನಲ್ಲಿ ನಿರ್ಮಾಣಗೊಂಡ 136 ಅಡಿ ಎತ್ತರದ ದೇಗುಲ


ಹಿರಣ್ಯಕಶಿಪು ತಪಸ್ಸು ಮಾಡಿದ ಸ್ಥಳವೆಂಬ ಪುರಾಣ ಐತಿಹ್ಯ

ಕಾಸರಗೋಡು: ವಿಶ್ವದ ಅತಿ ಎತ್ತರದ ಶಿವಲಿಂಗ ಆಕಾರದ ಮಹಾ ಮೃತ್ಯುಂಜಯ ದೇವಾಲಯವನ್ನು ಅಸ್ಸಾಂನ ನಾಗಾಂವ್‌ನ ಪುರಾನಿಗುಡಂನಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯದ ಪ್ರತಿಷ್ಠಾ ಸಮಾರಂಭವು ಫೆಬ್ರವರಿ 22 ರಿಂದ ಮಾರ್ಚ್ 3 ರವರೆಗೆ ನಡೆಯಲಿದ್ದು, ಕಾಸರಗೋಡಿನ ಪೆರಿಯಾ ನಿವಾಸಿ ಹಾಗೂ ಗೋಕುಲಂ ಗೋಶಾಲೆಯ ಮುಖ್ಯಸ್ಥರಾಗಿರುವ ವಿಷ್ಣು ಪ್ರಸಾದ್ ಹೆಬ್ಬಾರ್ ಅವರು ಈ ಎಲ್ಲ ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ.

ಫೆಬ್ರವರಿ 22ನೆ ದಿನಾಂಕದಿಂದ ಮಾರ್ಚ್ 3ರ ವರೆಗೆ ನಡೆಯುವ ಪ್ರತಿಷ್ಠಾ ಕಾರ್ಯಕ್ರಮಗಳು ಕಾಸರಗೋಡಿನ ಪೆರಿಯ ಸಮೀಪದ ಗೋಕುಲಮ್ ಗೋಶಾಲೆಯ ಸಂಚಾಲಕರಾಗಿರುವ ಶ್ರೀ ವಿಷ್ಣು ಪ್ರಸಾದ್ ಹೆಬ್ಬಾರ್ ಪೂಚಕ್ಕಾಡ್ ಅವರ ನೇತೃತ್ವದಲ್ಲಿ ನಡೆಯಲಿದೆ.

ತಿರುವನಂತಪುರ ಪದ್ಮನಾಭ ಸ್ವಾಮೀ ಕ್ಷೇತ್ರದ ಪ್ರಧಾನ ಅರ್ಚಕರು, ನೀಲೇಶ್ವರ ಕಕ್ಕಟ್ಟಿಲ್ಲಮ್ ಇಲ್ಲಿನ ವಿನೀತ್ ಪಟ್ಟೇರಿ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ನರಸಿಂಹ ಅಡಿಗ ಮೊದಲಾದವರು ನೇತೃತ್ವ ವಹಿಸುತ್ತಾರೆ. 250 ಮಂದಿ ವೈದಿಕ ಶ್ರೇಷ್ಠರು ಪ್ರತಿಷ್ಠಾ ಕಾರ್ಯ ನಡೆಸಲು ಅಸ್ಸಾಮಿಗೆ ಈಗಾಗಲೇ ತೆರಳಿರುತ್ತಾರೆ. 136 ಅಡಿ ಎತ್ತರವಿರುವ ಶಿವಲಿಂಗದ ಆಕೃತಿಯಲ್ಲಿರುವ ಕ್ಷೇತ್ರದಲ್ಲಿ ಮಹಾ ಮೃತ್ಯುಂಜಯ ದೇವರ ಮೂರ್ತಿಯನ್ನು ಪ್ರತಿಷ್ಠೆ ಮಾಡಲಾಗುತ್ತದೆ.

ಈ ಸ್ಥಳವು ಹಿರಣ್ಯಕಶಿಪು ತಪಸ್ಸು ಮಾಡಿರುವುದಾಗಿ ನಂಬಿಕೆ ಇರುವ ಪುರಾಣ ಪ್ರಸಿದ್ಧ ಸ್ಥಳವಾಗಿರುತ್ತದೆ. ಶತ ಚಂಡಿಕಾ ಹೋಮ, ಚತುರ್ವೇದ ಪಾರಾಯಣ, ದಶಲಕ್ಷ ಮೃತ್ಯುಂಜಯ ಜಪ, ಒಂದು ಲಕ್ಷ ಮಹಾ ಮೃತ್ಯುಂಜಯ ಹೋಮ, ಮಹಾ ರುದ್ರ, ಸಹಸ್ರ ಕಲಶಾಭಿಶೇಕ ಮೊದಲಾದ ಕೇರಳೀಯ ತಾಂತ್ರಿಕ ಕ್ರಿಯೆಗಳು ಜರಗಲಿವೆ.

Home

ಹದಿನೈದರಷ್ಟು ವಾದ್ಯಘೋಷ ಕಲಾವಿದರು ಕೇರಳ ಕರ್ನಾಟಕ ತಮಿಳುನಾಡು ಗೋವಾ ರಾಜ್ಯಗಳಿಂದ ವೇದಪಂಡಿತರು ಪ್ರತಿಷ್ಠಾ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ.

ಶ್ರೀಯುತ ವಿಷ್ಣು ಹೆಬ್ಬಾರ್ ಇವರು ಕಳೆದ 10 ವರ್ಷಗಳಿಂದ ಅಸ್ಸಾಂ ಹಣಕಾಸು ಸಚಿವ ಹಿಮಂತ ವಿಶ್ವಶರ್ಮ ಇವರ ಆಧ್ಯಾತ್ಮಿಕ ಗುರು ಹಾಗೂ ಜ್ಯೋತಿಷಿಗಳಾಗಿದ್ದಾರೆ. ಸಚಿವರ ಅಧ್ಯಕ್ಷತೆಯ ಕಾರ್ಯಕಾರಿ ಸಮಿತಿ ರಚಿಸಲಾಗಿದ್ದು, ಪ್ರತಿಷ್ಠಾ ಕಾರ್ಯಗಳಿಗೆ ನೇತೃತ್ವ ವಹಿಸುತ್ತದೆ.

ಕೇರಳೀಯ ಶೈಲಿಯ ವಾದ್ಯ ಘೋಷಗಳಾದ ಚೆಂಡೆ ಮೇಳ, ಪಂಚ ವಾದ್ಯ, ಸೋಪಾನ ಸಂಗೀತ ಇವೆಲ್ಲ ಪ್ರತಿಷ್ಠಾ ಮಹೋತ್ಸವದಲ್ಲಿ ಪ್ರಸ್ತುತಿಗೊಳ್ಳಲಿವೆ. ಫೆ. 27ಕ್ಕೆ ಪ್ರತಿಷ್ಠಾ ಮಹೋತ್ಸವ ಜರಗಲಿದ್ದು ಈ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಅನ್ನದಾನವನ್ನೂ ನಡೆಸಲು ಆಯೋಜಿಸಲಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಕಟ್ಟಡ ಕುಸಿತ 10 ಸಾವು; ಹಲವರಿಗೆ ಗಾಯ

Harshitha Harish

13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆಗೆ ಮುಖ್ಯಮಂತ್ರಿ ಸಮ್ಮತಿ

Upayuktha

ಗಾಯಕ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯಸ್ಥಿತಿ ಗಂಭೀರ; ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದ ವೈದ್ಯರು

Upayuktha