ಕಲೆ ಸಂಸ್ಕೃತಿ ನಗರ ಸ್ಥಳೀಯ

ಜ. 12: ಕಾಸರಗೋಡಿನಲ್ಲಿ ಅಭಿಲಾಷ್ ಗಿರಿಪ್ರಸಾದ್ ಚೆನ್ನೈ ಸಂಗೀತ ಕಚೇರಿ

ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯದ ಇದರ 23ನೇ ವಾರ್ಷಿಕೋತ್ಸವ

ಕಾಸರಗೋಡು ಲಲಿತಕಲಾಸದನದಲ್ಲಿ ಕಾರ್ಯಕ್ರಮ

ಕಾಸರಗೋಡು: ಯುವ ಪ್ರತಿಭಾವಂತ ಗಾಯಕ ಅಭಿಲಾಷ್‌ ಗಿರಿಪ್ರಸಾದ್ ಚೆನ್ನೈ ಅವರ ಸಂಗೀತ ಕಚೇರಿ ಜನವರಿ 12ರಂದು ಭಾನುವಾರ ಕಾಸರಗೋಡಿನ ಲಲಿತಕಲಾ ಸದನದಲ್ಲಿಸಂಜೆ 4 ಗಂಟೆಗೆ ನಡೆಯಲಿದೆ. ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯ ಕಾಸರಗೋಡು ಇದರ 23ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಸಂಗೀತ ಕಚೇರಿ ಆಯೋಜಿಸಲಾಗಿದೆ.

ಪರಿಚಯ:
ಪ್ರಸ್ತುತ 24ರ ಹರೆಯದ ಅಭಿಲಾಷ್ ಗಿರಿಪ್ರಸಾದ್‌, ತನ್ನ 7ನೆಯ ವಯಸ್ಸಿನಲ್ಲೇ ಪೂರ್ಣ ಪ್ರಮಾಣದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯನ್ನು ನೀಡಿ ವಿದ್ವಾಂಸರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ತನ್ನ 4ನೆಯ ವಯಸ್ಸಿನಲ್ಲಿ ಪ್ರಸಿದ್ಧ ಸಂಗೀತಜ್ಞ, ಕಲಾಕ್ಷೇತ್ರ ಚೆನೈನ ಪ್ರಚಾರಕರಾದ ವಿದ್ವಾನ್ ಎ. ಮುರಳಿ ಇವರಲ್ಲಿ ಶಿಷ್ಯತ್ವವನ್ನು ಪಡೆದು, ಅಭ್ಯಸಿಸಿದರು. ಬಳಿಕ ಸಂಗೀತ ಚೂಡಾಮಣಿ ಶ್ರೀಮುಷ್ಣಂ ವಿ. ರಾಜಾರಾವ್‍ವರಲ್ಲಿ ವಿಶೇಷ ಆಧ್ಯಯನ ನಡೆಸಿದ್ದಾರೆ.

ದೇಶ ಮತ್ತು ವಿದೇಶಗಳಲ್ಲಿ ನೂರಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿ ಪ್ರಸಿದ್ಧರಾದ ಇವರು ಹಿಂದೂಸ್ಥಾನಿ ಸಂಗೀತದಲ್ಲೂ ಪ್ರಾವೀಣ್ಯತೆಯನ್ನು ಪಡೆದಿದ್ದು, ಪ್ರಸಿದ್ಧ ಗಾಯಕ ಭೀಮಸೇನ ಜೋಷಿಯವರ ಶಿಷ್ಯ ಪ್ರೊಫೆಸರ್ ರಾಮಮೂರ್ತಿ ಅವರಲ್ಲಿ ಸಂಗೀತಾಭ್ಯಾಸ ಮಾಡಿದರು. ಅಮೆರಿಕ, ಕೆನಡ, ದಕ್ಷಿಣ ಆಫ್ರಿಕಾ, ಸಿಂಗಾಪುರ, ಮಾರಿಷಸ್ ಮುಂತಾದ ದೇಶಗಳಲ್ಲಿ ಹಲವಾರು ಬಾರಿ ಆಹ್ವಾನಿಕರಾಗಿ ಜನ ಮನ್ನಣೆ ಗಳಿಸಿದ್ದಾರೆ.

ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಸಂಗೀತದಲ್ಲಿ ಆಕಾಶವಾಣಿಯಿಂದ ಶ್ರೇಣೀಕೃತ ಕಲಾವಿದರಾಗಿದ್ದಾರೆ. ಹಲವಾರು ಗೌರವ ಮತ್ತು ಪುರಸ್ಕಾರಗಳಿಂದ ಸಮ್ಮಾನಿತರಾಗಿದ್ದು. 2006ರ `ರೋಹಿಣಿಕೃಷ್ಣ’ ಪುರಸ್ಕಾರ ಕೃಷ್ಣಗಾನ ಸಭಾ ಚೆನೈ, 2008 `ಯೂತ್ ಎಕ್ಸಲೆನ್ಸ್’ ಪುರಸ್ಕಾರ, `ಭಾವನ್ಸ್’ ಕಲ್ಚರಲ್ ಅವಾರ್ಡ್, 2012 `ಬಾಲಪುರಸ್ಕಾರ’ ವಿ.ಡಿ.ಎಸ್.ಆರ್ಟ್ಸ್‌ ಆಕಾಡಮಿ ಚೆನೈ, 2013 `ಕಲೈ ಇಳಾಮಣಿ’ ಸಂಸ್ಕೃತಿ ಇಲಾಖೆ ಚೆನ್ನೆ,, ಶ್ರೇಷ್ಠ ಯುವ ಕಲಾವಿದ ತ್ಯಾಗಬ್ರಹ್ಮ ಗಾನಸಭಾ ಚೆನೈ, 2013 `ಯುವಕಲಾಭಾರತಿ’ ಭಾರತ್ ಕಲಾಚಾರ ಚೆನೈ, 2014 `ಬಾಲಕಲಾರತ್ನ’ ಬಾಲ ಕಲಾ ಸಂಗಮ ಮತ್ತು ಐಟಿಸಿ ಮತ್ತು ಸಂಗೀತ ಕಲಾಜ್ಯೋತಿ ಪುರಸ್ಕಾರವನ್ನು ವರಸಿದ್ದಿ ವಿನಾಯಕ ಸಭಾ ಟೊರೆಂಟೋ ಕೆನಡದಿಂದ ಪಡೆದಿದ್ದಾರೆ.

ಅಂತೆಯೇ, ಎಂ.ಎಸ್ ಸುಬ್ಬಲಕ್ಷಿ, ಆರಿಯಾಕ್ಕುಡಿ ಮುಂತಾದ ಹತ್ತು ಹಲವು ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್‍ಗಳು ಇವರಿಗೆ ಲಭಿಸಿವೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಧರ್ಮಸ್ಥಳದಲ್ಲಿ ಭಜನಾ ಸಾಮ್ರಾಟ್ ಸ್ಪರ್ಧೆ 6ನೇ ಸೀಸನ್ ಉದ್ಘಾಟನೆ

Upayuktha

ಪುಂಜಾಲಕಟ್ಟೆ: ಕನ್ನಡದೊಲವು- ರಾಜ್ಯ ಮಟ್ಟದ ಜಾಲಗೋಷ್ಠಿ, ವಿಶೇಷ ಉಪನ್ಯಾಸ

Upayuktha

ಧಾರ್ಮಿಕ ಕ್ಷೇತ್ರಗಳ ಸಮಾಜಮುಖೀ ಚಿಂತನೆಯಿಂದ ನಾಡು ಅಭಿವೃದ್ಧಿ: ಆನೆಮಜಲು ವಿಷ್ಣು ಭಟ್

Upayuktha