ಜಿಲ್ಲಾ ಸುದ್ದಿಗಳು ಧರ್ಮ-ಅಧ್ಯಾತ್ಮ ಸಮುದಾಯ ಸುದ್ದಿ

ಕಾಶೀ ಮಠಾಧೀಶರ ಚಾತುರ್ಮಾಸ ಸಂಪನ್ನ

ಮಂಗಳೂರು: ಶಾರ್ವರಿ ನಾಮ ಸಂವತ್ಸರದ ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತವು ಇಂದು ಕೊಂಚಾಡಿ ಕಾಶೀ ಮಠದಲ್ಲಿ ಮೃತ್ತಿಕಾ ವಿಸರ್ಜನೆಯ ಬಳಿಕ ಸಂಪನ್ನಗೊಂಡಿತು.

ಬಳಿಕ ಶ್ರೀಗಳವರು ಸೀಮೋಲಂಘನ ಪ್ರಯುಕ್ತ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳಕ್ಕೆ ಭೇಟಿ ಇತ್ತು. ಶ್ರೀ ದೇವರ ದರ್ಶನ ಪಡೆದರು, ನಂತರ ಮಂಗಳೂರು ಸಮಾಜ ಬಾಂಧವರ ಪರವಾಗಿ ಶ್ರೀ ದೇವಳದ ಆಡಳಿತ ಮಂಡಳಿಯವರಿಂದ ಪಾದ ಪೂಜೆ ಹಾಗೂ ನೆರೆದ ಸಮಾಜ ಬಾಂಧವರಿಗೆ ಶ್ರೀಗಳವರಿಂದ ಆಶೀರ್ವಚನ ನೆರವೇರಿತು.

ಈ ಸಂದರ್ಭದಲ್ಲಿ ಮೊಕ್ತೇಸರರಾದ ಸಿ ಎಲ್ ಶೆಣೈ, ಪ್ರಶಾಂತ್ ರಾವ್, ರಾಮಚಂದ್ರ ಕಾಮತ್, ಲೆಕ್ಕ ಪರಿಶೋಧಕ ಜಗನ್ನಾಥ್ ಕಾಮತ್, ಕೊಂಚಾಡಿ ಕಾಶೀ ಮಠದ ವಾಸುದೇವ್ ಕಾಮತ್, ಕಸ್ತೂರಿ ಸದಾಶಿವ ಪೈ, ರತ್ನಾಕರ್ ಕಾಮತ್ ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ದಕ್ಷಿಣ ಕನ್ನಡ ಕೇರಳ ಸಂಚಾರಕ್ಕೆ ಗಡಿ ಓಪನ್, ಷರತ್ತುಗಳು ಅನ್ವಯ

Harshitha Harish

ನವರಾತ್ರಿ ವಿಶೇಷ: ಕುಮಾರಿ ಪೂಜೆ- ವೈಶಿಷ್ಟ್ಯ ಮತ್ತು ವಿಧಾನ

Upayuktha

ಕೋವಿಡ್-19 ಪರೀಕ್ಷಿಸಿಕೊಳ್ಳಿ, ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಉಡುಪಿ ಜಿಲ್ಲಾದಿಕಾರಿ ಜಿ.ಜಗದೀಶ್

Upayuktha

Leave a Comment

error: Copying Content is Prohibited !!