ದೇಶ-ವಿದೇಶ

ಇಳಿಕೆ ಕಂಡ ಕಾಶ್ಮೀರ ದ ಸೇಬು ಬೆಲೆ

ಶ್ರೀನಗರ: ಉತ್ಪಾದನೆ ಹಾಗೂ ಗುಣಮಟ್ಟ ಕುಸಿದಿರುವುದರಿಂದ ಕಾಶ್ಮೀರದ ₹8,000 ಕೋಟಿ ವಹಿವಾಟಿನ ಸೇಬು ಉದ್ಯಮಕ್ಕೆ ಭಾರಿ ನಷ್ಟ ಸಂಭವವಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ನಡೆದ ಪ್ರತಿಭಟನೆಗಳು ಹಾಗೂ ಸರ್ಕಾರ ಹೇರಿದ ನಿರ್ಬಂಧಗಳಿಂದಾಗಿ ಕಳೆದ ವರ್ಷ ಸೇಬು ರಫ್ತಿನಲ್ಲಿ ಅಂದಾಜು ಒಂದು ಲಕ್ಷ ಮೆಟ್ರಿಕ್‌ ಟನ್‌ನಷ್ಟು ಕುಸಿತವಾಗಿತ್ತು.

ಹವಾಮಾನ ವೈಪರೀತ್ಯ ಹಾಗೂ ಇತರ ಹಲವು ಕಾರಣಗಳಿಂದಾಗಿ ಸೇಬು ಉತ್ಪಾದನೆ ಕುಸಿತವಾಗುತ್ತಿದ್ದು, ಇದರಿಂದ ಸೇಬು ಬೆಳೆಗಾರರು ಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಬೆಳೆ ವಿಮೆ ಯೋಜನೆ ಜಾರಿಗೊಳಿಸುವಂತೆ ಬೆಳೆಗಾರರು ಒತ್ತಾಯಿಸುತ್ತಲೇ ಇದ್ದಾರೆ.

ಇದೀಗ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಾಶ್ಮೀರದಿಂದ ಪ್ರತಿವರ್ಷವೂ ಅಂದಾಜು 20 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಸೇಬು ರಫ್ತಾಗುತ್ತದೆ. ಇದರಿಂದಾಗಿ ತೋಟಗಾರಿಕೆ ಇಲಾಖೆಗೆ ಸುಮಾರು ₹8,000ರಿಂದ ₹9,000 ಕೋಟಿ ಆದಾಯ ಹರಿದು ಬ,ರುತ್ತದೆ.

Related posts

ಲೆಬನಾನ್‌ ಬಂದರು ಪ್ರದೇಶದಲ್ಲಿ ಭಾರೀ ಸ್ಫೋಟ; 10 ಮಂದಿ ಸಾವು, ನೂರಾರು ಜನರಿಗೆ ಗಾಯ

Harshitha Harish

ಜಯಾ ಜೇಟ್ಲಿ, ಸಂಗಡಿಗರಿಗೆ 4 ವರ್ಷ ಜೈಲು, 1 ಲಕ್ಷ ರೂ ದಂಡ ವಿಧಿಸಿದ ದಿಲ್ಲಿ ವಿಶೇಷ ನ್ಯಾಯಾಲಯ

Harshitha Harish

ಡಿಡಿ ನ್ಯಾಷನಲ್‌: ನಾಳೆಯಿಂದ ಮತ್ತೆ ಮೂಡಿಬರಲಿದೆ ಜನಪ್ರಿಯ ‘ರಾಮಾಯಣ’ ಧಾರಾವಾಹಿ

Upayuktha

Leave a Comment

error: Copying Content is Prohibited !!