ರಾಜ್ಯ

ಕಟೀಲು ಮೇಳದ ವಿವಾದಕ್ಕೆ ಬಲಿಪರ ಹೆಸರು ಎಳೆದು ತಂದ ಪತ್ರಕರ್ತ

ಜಾತಿಯ ಬಣ್ಣ ಹಚ್ಚಿ ಬರೆದ ಲೇಖನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ

ಮಂಗಳೂರು: ಕಟೀಲು ಮೇಳದ ವಿವಾದಕ್ಕೆ ಸಂಬಂಧಿಸಿದಂತೆ ಜಾತಿಯ ಲೇಪ ಹಚ್ಚುವ ಪ್ರಯತ್ನವೊಂದನ್ನು ಪತ್ರಕರ್ತರೊಬ್ಬರು ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಕಟೀಲು ಮೇಳದ ಪ್ರಥಮ ಸೇವೆಯಾಟದ ದಿನ ಭಾಗವತಿಕೆ ಮಾಡಲು ಬಂದ ಪಟ್ಲ ಸತೀಶ್ ಶೆಟ್ಟಿ ಅವರನ್ನು ವೇದಿಕೆಯಿಂದ ಇಳಿಸಿದ ಪ್ರಕರಣ ಹಳೆಯ ವಿವಾದಕ್ಕೆ ಹೊಸ ತಿರುವು ನೀಡಿದೆ. ಘಟನೆಯ ಕುರಿತಂತೆ ಕಟೀಲು ಮೇಳದ ವ್ಯವಸ್ಥಾಪಕರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆಗಳನ್ನು ನೀಡಿಯೂ ಆಗಿದೆ.

ಆ ಬಳಿಕ ಜಾತಿ ಹೆಸರಿನಲ್ಲಿ ವಿವಾದಿತ ಬರಹಗಳನ್ನು ಆಗಾಗ್ಗೆ ಬರೆಯುವ ಪತ್ರಕರ್ತರೊಬ್ಬರು ಖ್ಯಾತ ಭಾಗವತರಾದ ಬಲಿಪ ನಾರಾಯಣ ಭಾಗವತರ ಹೆಸರನ್ನು ಎಳೆದು ತಂದು ಬ್ರಾಹ್ಮಣ-ಶೂದ್ರ, ಜನಿವಾರಧಾರಿ ಇತ್ಯಾದಿ ಪದಗಳನ್ನು ಬಳಸಿ ಆಕ್ಷೇಪಾರ್ಹ ರೀತಿಯಲ್ಲಿ ತಮ್ಮ ಜಾಲತಾಣದಲ್ಲಿ ಬರೆದುಕೊಂಡಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಬಲಿಪ ಭಾಗವತರು ತಮ್ಮ ಜಾತಿಯ ಹೆಸರಿನಿಂದ ಗುರುತಿಸಿಕೊಂಡವರಲ್ಲ; ಬದಲಿಗೆ ಪ್ರತಿಭೆಯಿಂದ ಹೆಸರಾದವರು. ಪಟ್ಲ ಸತೀಶ್ ಶೆಟ್ಟರ ಪ್ರಕರಣಕ್ಕೂ ಬಲಿಪ ಭಾಗವತರ ಕಾಲಕ್ಕೂ ಯಾವುದೇ ಸಂಬಂಧವಿಲ್ಲದಿದ್ದರೂ ಅವರ ಹೆಸರನ್ನು ಎಳೆದು ತಂದು ಆ ಮೂಲಕ ಬ್ರಾಹ್ಮಣ ವಿರೋಧಿ ಮನಸ್ಥಿತಿಯನ್ನು ಮತ್ತೆ ಮತ್ತೆ ಪ್ರದರ್ಶಿಸುವ ನಡವಳಿಕೆಗೆ ಜಾಲತಾಣಗಳಲ್ಲಿ ವ್ಯಾಪಕ ಖಂಡನೆಗಳು ವ್ಯಕ್ತವಾಗುತ್ತಿವೆ.

ಏನಿದು ವಿವಾದಿತ ಬರಹ?

 

 

 

 

 

 

 

Related posts

ಬಿಎಸ್‌ವೈ ಸಂಪುಟದಲ್ಲಿ ಯಾರ್ಯಾರಿಗೆ ಸಿಕ್ತು ಮಂತ್ರಿಗಿರಿ?

Upayuktha

ಪರಿಸರ ಸ್ನೇಹಿ ಗೋಮಯ ಗಣಪತಿ ತಯಾರಿ: ನಾಳೆ ಉಚಿತ ವೆಬಿನಾರ್

Upayuktha

ನಿಷ್ಠೆ ಮತ್ತು ಜ್ಞಾನದ ಜತೆಗೆ ರಾಷ್ಟ್ರ ನಿರ್ಮಾಣ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರಿ

Upayuktha