ಕತೆ-ಕವನಗಳು

*ಕವನ: ದ್ವಿತನು ಏಕಾತ್ಮದಂತೆ…!*

ಅರೆಕ್ಷಣಮಾತ್ರವೂ ಬಿಟ್ಟಿರಲಾರದ ಸ್ನೇಹವು
ಗೆಳೆಯನಿರದಿರೆ ನಾ ಶೂನ್ಯವೆಂಬಂತೆ ಭಾಸವು
ಜನ್ಮಜನ್ಮಾಂತರದ ಅಳಿಸಲಾಗದ ಬಂಧವು
ಯಾರೂನೆನೆಸಲಾರದಷ್ಟು ಸ್ನೇಹವಿದು ಗಾಢವು
ಗೌಪ್ಯವಾದ ಬ್ರಹ್ಮಜ್ಞಾನದಷ್ಟೇ ಪರಮ ಸತ್ಯವು!
ಹೃದಯದಿo ಇನನಂತೆ ಪ್ರಕಾಶವು,ನಿಖರವು
ತನುಸತ್ತರೂ ಒಟ್ಟಾಗಿರುವೆವು ಪ್ರತಿಕ್ಷಣವು
ಪರಮಸತ್ಯ ಸ್ನೇಹವಿದು ನಿತ್ಯನಿರಂತರವು

ಸ್ನೇಹಸೇತುವೆದಿo ನಾವಿಬ್ಬರೇ ಪಯಣಿಗರಂತೆ
ಬೆಲೆಕಟ್ಟಲಾರದ ಹೊಳೆಯುವ ಮಾಣಿಕ್ಯದಂತೆ
ಕಗ್ಗತ್ತಲೆಯ ಹೊಡೆದೋಡಿಸುವ ಹಣತೆಯಂತೆ
ಅವಳಿಯಲ್ಲದಿದ್ದರೂ ಕೂಡಾ ಅವಳಿಯಿದ್ದಂತೆ
ಸಲಿಲದಿಂ ಪಾಲುಸೇರಿ,ಅವುಗಳು ಒಂದಾದಂತೆ
ಕೊಳಲನಾದ,ಜೇನಹನಿಯಂತೆ ಮಧುರದಂತೆ
ಗಾಢವಾದನಮ್ಮ ಸ್ನೇಹ ಶ್ರೀಕೃಷ್ಣಾರ್ಜುನರಂತೆ
ಪರಮಾಚ್ಚರಿಯಿದುವೇ *,ದ್ವಿತನುಏಕಾತ್ಮದಂತೆ !*

✍🏻 *ರಂಜನ್ ಸಾಧಿತ್*

Related posts

ಅಮೃತ ಕಾಲೇಜು

Harshitha Harish

ಕವನ: ತಾಯಿ ಪಾಠ

Upayuktha

ಹನಿಗವನ: ಮಾತೃ ಹೃದಯ

Upayuktha

Leave a Comment