ಸ್ಥಳೀಯ

ಕಾವು ನವೋದಯ ಒಕ್ಕೂಟ ಮಾಸಿಕ ಸಭೆ ಮತ್ತು ಕಟ್ಟಡ ಕಾರ್ಮಿಕರಿಗೆ ಮಾಹಿತಿ ಕಾರ್ಯಕ್ರಮ

ಪುತ್ತೂರು:  ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜ.5 ರಂದು

ನಡೆದ ಕಾವು ನವೋದಯ ಒಕ್ಕೂಟದ ಮಾಸಿಕ ಸಭೆಯಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಮಾಹಿತಿ ಕಾರ್ಯಕ್ರಮ ನಡೆಯಿತು.

ಒಂದು ಕಟ್ಟಡದ ಕೆಲಸ ಕಾರ್ಯದಲ್ಲಿ ಬರುವ ಎಲ್ಲಾ ವಿಧದ ಮೇಸ್ತ್ರಿಗಳೂ ಕೆಲಸಗಾರರೂ,ಸಹಾಯಕರೂ ಸೇರಿದಂತೆ ಎಲ್ಲಾ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಪುತ್ತೂರು ಗ್ರಾಮಾಂತರ BMS ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ  ಪುರಂದರ ರೈಯವರು ತಿಳಿಸಿದರು.

ಕಾವು ನವೋದಯ ಒಕ್ಕೂಟದ ಅಧ್ಯಕ್ಷ ಚಿದಾನಂದ ಆಚಾರ್ಯರವರು ಮಾತನಾಡಿ ನಮ್ಮ ಒಕ್ಕೂಟದ ಅನೇಕ ಸದಸ್ಯರು ಮತ್ತು ಅವರ ಮನೆಯವರು ಕಟ್ಟಡ ನಿರ್ಮಾಣ ಕೆಲಸವನ್ನು ಮಾಡುವವರಿದ್ದು ಹೆಚ್ಚಿನವರು ಮಾಹಿತಿಯ ಕೊರತೆಯಿಂದ ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು ಅವರೆಲ್ಲರನ್ನು ನೋಂದಣಿ ಮಾಡಿಸಿ ಸರಕಾರದ ಸವಲತ್ತುಗಳು ಸಿಗುವಂತೆ ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ನವೋದಯದ ಮೇಲ್ವಿಚಾರಕ ಚಂದ್ರಶೇಖರ್ ಮಾತನಾಡಿದರು. ಸಿದ್ಧಿವಿನಾಯಕ ಗುಂಪಿನ ಸದಸ್ಯರು ಜವಾಬ್ದಾರಿ ವಹಿಸಿದ್ದರು.

ಹಾಗೆ ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ನಿರ್ಮಲಾ ರೈ, ಕಾರ್ಯದರ್ಶಿ ಹರಿಣಾಕ್ಷಿ, ಗೌರವಾಧ್ಯಕ್ಷ  ಅಮ್ಮುಪೂಂಜ ಮತ್ತು ಗುಂಪಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ವಿವೇಕಾನಂದ ಕಾಲೇಜಿನಲ್ಲಿ ‘ವಾಯ್ಸ್ ಆಕ್ಟಿಂಗ್’ ಕಾರ್ಯಾಗಾರ

Upayuktha

ಸುರತ್ಕಲ್: ನೂತನ ರೈತ ಕೇಂದ್ರ ಉದ್ಘಾಟನೆ, ರೈತರಿಗೆ ಸವಲತ್ತು ವಿತರಣೆ

Upayuktha

ಅಂಗನವಾಡಿಗಳಲ್ಲಿ ಉತ್ಕೃಷ್ಟ ಪೌಷ್ಠಿಕ ಆಹಾರ ನೀಡಿ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್

Upayuktha