ಆರೋಗ್ಯ ಗ್ರಾಮಾಂತರ ಸ್ಥಳೀಯ

ದಂತ ಆರೋಗ್ಯ ಕಾಪಾಡಿಕೊಳ್ಳಿ: ಡಾ|| ರಾಜಶ್ರೀ

ಹೊಸಂಗಡಿ: ಶೇಕಡಾ 80ರಷ್ಟು ದಂತ ಸಂಬಂಧಿ ರೋಗಗಳನ್ನು ತಡೆಗಟ್ಟಬಹುದಾಗಿದ್ದು, ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ದಂತ ಚಿಕಿತ್ಸೆ ದುಬಾರಿಯಾಗುವುದಿಲ್ಲ. ನಿರಂತರ ದಂತ ವೈದ್ಯರ ಸಂದರ್ಶನ ಸಲಹೆ ಮತ್ತು ಮಾರ್ಗದರ್ಶನದಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಬಾಯಿ ಸ್ವಚ್ಛತೆ ಇರುವವರಿಗೆ ಹೃದಯಾಘಾತ ಮತ್ತು ಮರೆಗುಳಿತನ ರೋಗ ಬರುವ ಸಾಧ್ಯತೆ ಕ್ಷೀಣಿಸುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ ಎಂದು ಸುರಕ್ಷಾ ದಂತ ಚಿಕಿತ್ಸಾಲಯದ ದಂತ ವೈದ್ಯರಾದ ಡಾ|| ರಾಜಶ್ರೀ ಮೋಹನ್ ಅಭಿಪ್ರಾಯಪಟ್ಟರು.

ಇಂದು (ಮಾ.6) ವಿಶ್ವ ದಂತ ವೈದ್ಯರ ದಿನಾಚರಣೆ ಅಂಗವಾಗಿ ಚೂಂತಾರು ಸರೋಜಿನಿ ಪ್ರತಿಷ್ಠಾನದ ವತಿಯಿಂದ ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ ಇಲ್ಲಿ ದಂತ ಆರೋಗ್ಯ ಮಾಹಿತಿ ಶಿಬಿರ ನಡೆಯಿತು.

ಈ ದಿನದಂದು ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಎಲ್ಲಾ ರೋಗಿಗಳಿಗೆ ಡಾ|| ಮುರಲೀಮೋಹನ್ ಚೂಂತಾರು ಇವರು ಬರೆದ “ಸುಮುಖ” ದಂತ ಆರೋಗ್ಯ ಮಾರ್ಗದರ್ಶನ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಚಿಕಿತ್ಸಾಲಯದ ವೈದ್ಯರಾದ ಡಾ|| ಮುರಲೀ ಮೋಹನ್ ಚೂಂತಾರು, ಡಾ|| ನೇಹಾ ಮುರಲೀಧರನ್, ಸಹಾಯಕಿಯರಾದ ರಮ್ಯಾ, ಶ್ವೇತಾ, ಚೈತ್ರಾ, ಸುಸ್ಮಿತಾ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಶುಳುವಾಲಮೂಲೆಯಲ್ಲಿ ರಂಗಸಿರಿ ದಸರಾ ಯಕ್ಷಪಯಣ

Upayuktha

ಫಿಲೋಮಿನಾ ಎಂಸ್‍ಡಬ್ಲ್ಯೂ ವಿಭಾಗದಿಂದ ಜಲ ಸಂರಕ್ಷಣಾ ಕಾರ್ಯಕ್ರಮ

Upayuktha

ಉಡುಪಿಯಲ್ಲಿ ಇಂದು ಮತ್ತೊಂದು ಅಸ್ವಸ್ಥ ಹದ್ದು ಪತ್ತೆ

Upayuktha