ಜಿಲ್ಲಾ ಸುದ್ದಿಗಳು ಪ್ರಮುಖ

ಕೇರಳ- ಕರ್ನಾಟಕ ಗಡಿಭಾಗದ ಜನರ ಗೋಳು ಕೇಳೋರಿಲ್ಲ… ಇನ್ನೆಷ್ಟು ದಿನ ಈ ಸಂಕಷ್ಟ…?

ಕೋವಿಡ್ ನೆಪದಲ್ಲಿ ಗಡಿ ಮುಚ್ಚುಗಡೆಯಿಂದ ಉಂಟಾದ ಸಮಸ್ಯೆಗಳು

ಕಾಸರಗೋಡು: ಕೇರಳ ಮತ್ತು ಕರ್ನಾಟಕದ ನಡುವಣ ಅಂತಾರಾಜ್ಯ ಗಡಿ ಮುಚ್ಚುಗಡೆಯಿಂದ ಕಾಸರಗೋಡಿನ ಜನತೆಯ ದೈನಂದಿನ ಜೀವನ ನಿರ್ವಹಣೆಗೆ ತೀವ್ರ ಸಂಕಷ್ಟ ಎದುರಾಗಿದೆ.

Advertisement
Advertisement

ಕೇರಳದಲ್ಲಿ ನೆಲೆಸಿರುವ ನೂರಾರು ಜನರು ಜೀವನೋಪಾಯಕ್ಕಾಗಿ ಕರ್ನಾಟಕವನ್ನು ಅವಲಂಬಿಸಿದ್ದಾರೆ. ಹಲವಾರು ಕೇರಳಿಗರು ಕರ್ನಾಟಕದ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗವನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ದಶಕಗಳಿಂದ ಅನೇಕ ಸ್ವಯಂ ಉದ್ಯೋಗಿಗಳು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಈ ಎಲ್ಲಾ ಉದ್ಯೋಗಿಗಳ ಬದುಕಿನ ಮೇಲೆ ಗಡಿ ಮುಚ್ಚುಗಡೆ ಕೆಟ್ಟ ಪರಿಣಾಮವನ್ನು ಬೀರುತ್ತಿದೆ.

ಅಲ್ಲದೇ, ಗಡಿಪ್ರದೇಶದಲ್ಲಿ ವಾಸಿಸುವ ನಾಗರಿಕರ ಆರೋಗ್ಯದ ವಿಚಾರದಲ್ಲೂ ಗಡಿ ಮುಚ್ಚುಗಡೆ ಕಂಟಕವಾಗಿದೆ. ಅಗತ್ಯವಿರುವ ಔಷಧಿಗಳನ್ನು ಕೊಂಡುಕೊಳ್ಳಲು ಗಡಿಪ್ರದೇಶದ ಜನರು ಸುಲಭವಾಗಿ ಕೈಗೆಟುಕುವ ಮತ್ತು ಅನುಕೂಲಕರ ಆಯ್ಕೆಯಾದ ದೇರಳಕಟ್ಟೆ ಸೇರಿದಂತೆ ಮಂಗಳೂರಿನ ಹಲವು ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ.

ಗಡಿಭಾಗದಲ್ಲಿರುವ ಆಸ್ಪತ್ರೆಯಲ್ಲಿ ಕರ್ನಾಟಕದ ತಜ್ಞ ವೈದ್ಯರು ಈ ಸಂದರ್ಭದಲ್ಲಿ ಲಭ್ಯವಿಲ್ಲ. ಜೊತೆಗೆ ಪಿ.ಪಿ.ಎಲ್. ವೈದ್ಯರಿಗೂ ಪ್ರವೇಶವಿಲ್ಲ. ಕೇರಳ-ಕರ್ನಾಟಕ ಗಡಿಯಲ್ಲಿರುವ ಪೆರಿಯಾರಂ ಆಸ್ಪತ್ರೆ ರೋಗಿಗಳಿಂದ ತುಂಬಿದೆ. ಕರ್ನಾಟಕ-ಕೇರಳ ಗಡಿ ಮುಚ್ಚಲಾಗಿದ್ದು ಗಡಿಪ್ರದೇಶದ ಜನರು ಚಿಕಿತ್ಸೆಗಾಗಿ, ಪಿ.ಪಿ.ಎಲ್. ಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ಕೃಷಿ ವಿಚಾರದಲ್ಲೂ ಗಡಿಪ್ರದೇಶದ ಕೃಷಿಕರು ಗೋಳಾಡುವ ಸ್ಥಿತಿ ಉಂಟಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಗಡಿಯಲ್ಲಿ ಅಡಕೆ ಧಾರಣೆ ಲಾಭದಾಯಕವಾಗಿಲ್ಲ. ಕರ್ನಾಟಕದಲ್ಲಿ ಮಾರುಕಟ್ಟೆ ಉತ್ತಮವಾಗಿದ್ದರೂ ಗಡಿಭಾಗದ ಜನರಿಗೆ ಮಾತ್ರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ‌.

ಕೋಳಿ ಸಾಕಾಣಿಕೆಯಂತಹ ಇತರ ಉಪಭೋಗ್ಯ ವಸ್ತುಗಳು ಕರ್ನಾಟಕದಲ್ಲಿ ವ್ಯಾಪಕ ಮಾರುಕಟ್ಟೆಯನ್ನು ಹೊಂದಿವೆ. ಕೇರಳದಲ್ಲಿ ಇಂತಹ ಕಸುಬುಗಳು ಲಾಭದಾಯಕವಾಗಿಲ್ಲದ ಕಾರಣ ಈಗಾಗಲೇ ಹಲವು ಕೋಳಿ ಸಾಕಾಣಿಕಾ ಕೇಂದ್ರಗಳು ಮುಚ್ಚಲ್ಪಟ್ಟಿವೆ.

ಗಡಿಭಾಗದ ದೈನಂದಿನ ಕಾರ್ಮಿಕರು ಮತ್ತು ನುರಿತ ಕೆಲಸಗಾರರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಾಕಷ್ಟು ಕೆಲಸಗಳಿದ್ದರೂ ಗಡಿ ಮುಚ್ಚಿದ ಕಾರಣದಿಂದಾಗಿ ಕೂಲಿ ಕೆಲಸಗಾರರು ಮತ್ತು ಅವರ ಕುಟುಂಬವು ಆರ್ಥಿಕ ಸಮಸ್ಯೆಯಿಂದಾಗಿ ಹಸಿವಿನಿಂದ ಬಳಲುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಮಧ್ಯೆ ಕಟ್ಟಡ ನಿರ್ಮಾಣಗಳಲ್ಲಿ ಮರಳಿನ ಅಲಭ್ಯತೆಯಾಗಿದ್ದು ಎಲ್ಲಾ ರೀತಿಯ ಕಟ್ಟಡ ನಿರ್ಮಾಣ ಕಾರ್ಯಗಳು ಅರ್ಧಕ್ಕೆ ನಿಂತಿವೆ.

ಕೇರಳ ಕರ್ನಾಟಕ ಗಡಿಪ್ರದೇಶದ ಜನರು ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಕೇರಳ ಮತ್ತು ಕರ್ನಾಟಕದ ನಡುವಿನ ಅಂತರರಾಜ್ಯ ಪ್ರಯಾಣ ನಿರ್ಬಂಧ ನಿಯಮವೇ ಮುಖ್ಯ ಕಾರಣ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ನಿಯಮವನ್ನು ಸಡಿಲಗೊಳಿಸಿ ಜನರ ಜೀವನಕ್ಕೆ ದಾರಿ ಮಾಡಿಕೊಡಬೇಕು ಎಂಬುದು ಗಡಿಭಾಗದ ಜನರ ಮನವಿಯಾಗಿದೆ.

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Advertisement
Advertisement

Related posts

80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಣೆ ದೀಪಾವಳಿ ವರೆಗೂ ವಿಸ್ತರಣೆ: ಪ್ರಧಾನಿ ಮೋದಿ ಘೋಷಣೆ

Upayuktha

ನ್ಯಾಯವನ್ನು ಪ್ರತೀಕಾರವಾಗಿ ಪರಿಗಣಿಸಬಾರದು: ಸಿಜೆಐ ಎಸ್‌ಎ ಬೊಬ್ಡೆ

Upayuktha

ಪೇಜಾವರ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ ಚಿಕಿತ್ಸೆಗೆ ಸ್ಪಂದನೆ: ವೈದ್ಯರ ಹೇಳಿಕೆ

Upayuktha
error: Copying Content is Prohibited !!