ಜಿಲ್ಲಾ ಸುದ್ದಿಗಳು

ಕಾಸರಗೋಡು-ಮಂಗಳೂರು ಕೆಎಸ್ಆರ್‌ಟಿಸಿ ಬಸ್ ಟಿಕೆಟ್ ದರ ಭಾರೀ ಹೆಚ್ಚಳ: ಕೊರೊನಾ ಕಾಲದಲ್ಲಿ ಕೇರಳ ಸರಕಾರದ ಹಗಲು ದರೋಡೆ

ಕಾಸರಗೋಡು: ಈ ಕರೋನಾ ಕಾಲದಲ್ಲಿ‌ ಜನಸಾಮಾನ್ಯರು ಬಹಳ ಸಂಕಷ್ಟಗಳಿಗೆ ಸಿಲುಕಿದ್ದಾರೆ. ಆರ್ಥಿಕ ನಷ್ಟ, ಉದ್ಯೋಗ ನಷ್ಟ ಮೊದಲಾದ ಸಮಸ್ಯೆಗಳಿಂದಾಗಿ ಜನರು ಬಳಲುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಸರಗೋಡು ಮಂಗಳೂರು ನಡುವೆ ಓಡಾಡುವ ಕೆಎಸ್ಆರ್ಟಿಸಿ ಬಸ್ ಗಳ ಟಿಕೇಟು ದರವನ್ನು ಕೇರಳ ಸರಕಾರವು ಬರೋಬ್ಬರಿ 11 ರುಪಾಯಿಗಳಷ್ಟು ಏರಿಸಿರುವುದು ಜನರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಮೊದಲು ಕಾಸರಗೋಡು ಮಂಗಳೂರು ನಡುವಿನ ಪ್ರಯಾಣದ ಟಿಕೆಟ್ ದರ 57 ರುಪಾಯಿಗಳಿದ್ದು ಅದನ್ನು ಈಗ ಏಕಾಏಕಿ ರುಪಾಯಿ 68ಕ್ಕೆ ಏರಿಸಲಾಗಿದೆ. ಈ ಮೂಲಕ‌ ಟಿಕೆಟ್ ದರವನ್ನು ಸರಿಸುಮಾರು 20% ರಷ್ಟು ಏರಿಸಿದಂತಾಗಿದೆ. ಟಿಕೆಟ್ ದರವನ್ನು ಏರಿಸಿರುವುದರ ವಿರುದ್ಧವಾಗಿ ಕೇರಳ ಹಾಗೂ ಕರ್ನಾಟಕ ಗಳ ಸಾರಿಗೆ ಸಂಸ್ಥೆಗಳಿಗೆ ಸಹಯಾತ್ರಿ ಸಂಘಟನೆಯು ಟ್ವಿಟರ್ ಮೂಲಕ ಆಕ್ಷೇಪವನ್ನು ಸಲ್ಲಿಸಿದಾಗ ಕರ್ನಾಟಕ ಕೆ ಎಸ್ ಆರ್ ಟಿ ಸಿ ಯು ಉತ್ತರಿಸಿ, ಬೆಲೆಯನ್ನು ಏರಿಸಿರುವುದು ಕೇರಳ ಕೆಎಸ್ಆರ್‌ಟಿಸಿ ಯಾಗಿದೆ; ಹೀಗಾಗಿ ಕೇರಳ ಕೆಎಸ್ಆರ್‌ಟಿಸಿ ಜೊತೆಗಿನ ಒಪ್ಪಂದದ ಅನ್ವಯ ಕರ್ನಾಟಕ ಸಾರಿಗೆಯೂ ಬಸ್ ಟಿಕೇಟ್ ದರವನ್ನು ಏರಿಸಬೇಕಾಗಿದೆ ಎಂದು ಹೇಳಿದೆ.

ಟಿಕೇಟ್ ದರ ಹೆಚ್ಚು ಮಾಡಿರುವುದು‌ ಕೇರಳ ಸರಕಾರ ಎಂಬುದು ಇದರಿಂದ ಸ್ಪಷ್ಟವಾಗಿದೆ. ಕೇರಳ ಸರಕಾರವು ಬಸ್ ಟಿಕೇಟ್ ಬೆಲೆ ಏರಿಸಿರುವುದರಿಂದ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಆಧಾರವಾಗಿದ್ದ ರೈಲು ಸೇವೆಯೂ ಆರಂಭವಾಗಿಲ್ಲ. ಕರೋನಾ ಕಷ್ಟದ ಕಾಲದಲ್ಲಿ ಸರಕಾರೀ ಬಸ್ ಟಿಕೇಟಿನ‌ ದರ ಹೆಚ್ಚಿಸುವ ಕೇರಳ ಸರಕಾರದ ನಡೆಯನ್ನು ಸಹಯಾತ್ರಿ ಸಂಘಟನೆಯು ಖಂಡಿಸಿ ದರ ಏರಿಕೆಯನ್ನು ಶೀಘ್ರವೇ ಹಿಂದೆಗೆಯಬೇಕೆಂದು ಆಗ್ರಹಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಪ್ರತಿಭಾವಂತ ಶಿಕ್ಷಣ ವಂಚಿತ ವಿದ್ಯಾರ್ಥಿಗಳಿಗೆ ಮಂಗಳಾ ಸಮೂಹ ಸಂಸ್ಥೆಯಲ್ಲಿ ಸುವರ್ಣಾವಕಾಶ

Upayuktha

ಶಾಲಾ ಫೀಸು ಕಟ್ಟಲು ಒತ್ತಡ ಹೇರಿದರೆ ನಿರ್ದಾಕ್ಷಿಣ್ಯ ಕ್ರಮ: ಡಿಡಿಪಿಐ ಎಚ್ಚರಿಕೆ

Upayuktha

ಕೋವಿಡ್ ಸೋಂಕಿಗೆ ಇಬ್ಬರು ಸಾವು

Harshitha Harish