ಗ್ರಾಮಾಂತರ ಪ್ರಮುಖ ಸ್ಥಳೀಯ

ಕೇರಳ ಶಾಲಾ ಕಲೋತ್ಸವ: ಉನ್ನತ ಶಿಕ್ಷಣದ ಬಗ್ಗೆ ಆಸಕ್ತರಿಗೆ ದಾರಿ ತೋರಲಿರುವ “ದಿಶಾ” ಎಕ್ಸಿಬಿಷನ್

ಕಾಸರಗೋಡು: ನಾಲ್ಕು ದಿನಗಳ ಕಾಲ ಜಿಲ್ಲೆಯ 28 ವೇದಿಕೆಗಳಲ್ಲಿ ನಡೆಯುವ ರಾಜ್ಯ ಮಟ್ಟದ ಶಾಲಾ ಕಲೋತ್ಸದಲ್ಲಿ ವಿವಿಧ ಕಲಾ ಪ್ರಕಾರಗಳ ಸ್ಪರ್ಧೆಗಳ ಬಿರುಸಿನ ನಡುವೆಯೂ ಪ್ರೇಕ್ಷಕರು ಕೊಂಚ ಬಿಡುವು ಮಾಡಿಕೊಂಡಲ್ಲಿ ಕಲೋತ್ಸವ ಅಂಗವಾಗಿಯೇ ನಡೆಯುವ ‘ದಿಶಾ’ ಎಂಬ ಹೆಸರಿನ ವಸ್ತು ಪ್ರದರ್ಶನವನ್ನು ವೀಕ್ಷಿಸಬಹುದು.

ಕಾಞಂಗಾಡ್ ಬಲ್ಲ ಈಸ್ಟ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಎಕ್ಸಿಬಿಷನ್ ನಡೆಯಲಿದೆ. ಇದರಲ್ಲಿ ವಿವಿಧ ವಲಯಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟಗಳು ನಡೆಯಲಿವೆ. ಜೊತೆಗೆ ರಾಜ್ಯ ಹೈಯರ್ ಸೆಕೆಂಡರಿ ಶಿಕ್ಷಣ ಇಲಾಖೆ ವ್ಯಾಪ್ತಿಯ ಕೆರಿಯರ್ ಗೈಡೆನ್ಸ್ ಆಂಡ ಡೋಲಸೆಂಟ್ ಕೌನ್ಸಿಲಿಂಗ್ ಸೆಂಟರ್ ವತಿಯಿಂದ ಉನ್ನತ ಶಿಕ್ಷಣ ಸಂಬಂಧ ಮಾಹಿತಿ ನೀಡುವ ಮಳಿಗೆ ಇಲ್ಲಿ ತೆರೆದುಕೊಳ್ಳಲಿದೆ. ನ.27ರಿಂದ ಡಿ.1 ವರೆಗೆ ಈ ಮಳಿಗೆ ಇರುವುದು. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ವಿವಿಧ ತರಬೇತಿಗಳ ಕುರಿತು ಮಾಹಿತಿ ನೀಡುವ, ಸಂಶಯ ನಿವಾರಿಸುವ ಅವಕಾಶ ಇಲ್ಲಿದೆ. ವಿವಿಧ ಸಂಸ್ಥೆಗಳಲ್ಲಿರುವ ಅವಕಾಶಗಳನ್ನು ಇಲ್ಲಿ ತಿಳಿದುಕೊಳ್ಳಬಹುದು. ದೇಶದ ಉನ್ನತ ಶಿಕ್ಷಣ ಸಂಬಂಧ ವಿಷಯಗಳ ಬಗ್ಗೆ, ಶಿಕ್ಷಣ ಸಂಬಂಧ 60 ಸ್ಟಾಲ್ ಗಳು ಇಲ್ಲಿರುವುವು. ಕೇರಳ ಕಲಾ ಮಂಡಲಂ ನಿಂದ ತೊಡಗಿ ಆಲಿಗಢ ವಿವಿ ವರೆಗೆ, ಕೃಷಿ ವಿವಿಯಿಂದ ಆರೋಗ್ಯ ವಿಜ್ಞಾನ ವಿವಿ ವರೆಗೆ, ಏಷ್ಯಾದಲ್ಲೇ ಏಕೈಕ ಸಂಸ್ಥೆ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸ್ಪೇಸ್ ಸಯನ್ಸ್ ಆಂಡ್ ಟೆಕ್ನಾಲಜಿ ಸಹಿತ ವಿವಿಧ ಸಂಸ್ಥೆಗಳ ಸ್ಟಾಲ್ ಗಳು ಇರುವುವು.

ಮುಳ್ಳೇರಿಯ ಶಾಲಾ ಮಕ್ಕಳಿಂದ ಬಟ್ಟೆ ಚೀಲ ಕೊಡುಗೆ
ರಾಜ್ಯ ಮಟ್ಟದ ಶಾಲಾ ಕಲೋತ್ಸವ ಜಿಲ್ಲೆಯ ಕಾಞಂಗಾಡ್ ಮತ್ತು ಆಸುಪಾಸಿನ ಪ್ರದೇಶಗಳ 28 ವೇದಿಕೆಗಳಲ್ಲಿ ನಡೆಯುವ ವೇಳೆ ಹಸುರು ಸಂಹಿತೆಯೊಂದಿಗೆ ಈ ಕಲಾ ಉತ್ಸವ ನಡೆಸುವತ್ತ ಆದ್ಯತೆ ನೀಡಲಾಗುತ್ತಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಪೂರ್ಣ ರೂಪದಲ್ಲಿ ತ್ಯಜಿಸಿ, ಬಟ್ಟೆಯ ಚೀಲ ಸಹಿತ ಪ್ರಕೃತಿ ಸ್ನೇಹಿ ಸಾಮಾಗ್ರಿಗಳನ್ನು ಕಡ್ಡಾಯವಾಗಿ ಬಳಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ. ಇದರ ಅಂಗವಾಗಿ ಶಾಲೆಯೊಂದರ ಮಕ್ಕಳು ಕಲೋತ್ಸವದಲ್ಲಿ ಬಳಸುವ ನಿಟ್ಟಿನಲ್ಲಿ ಸುಮಾರು 300 ಬಟ್ಟೆಯ ಚೀಲಗಳನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದ್ದಾರೆ.

ಮುಳ್ಳೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್, ಪೆನ್ ಫ್ರೆಂಡ್ ಯೋಜನೆ ಸದಸ್ಯರು, ಬಳಕೆಯಿಲ್ಲದ ಪೆನ್ ಗಳನ್ನು ಸಂಗ್ರಹಿಸಿ, ಗುಜರಿಗೆ ಮಾರಾಟ ಮಾಡಿ ಲಭಿಸಿದ ಮೊಬಲಗಿಗೆ, ಶಾಲೆಯ ರಕ್ಷಕ-ಶಿಕ್ಷಕ ಸಂಘದ ನಿಧಿಯನ್ನೂ ಸೇರಿಸಿ ಬಟ್ಟೆ ಚಿಲಗಳನ್ನು ತಯಾರಿಸಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚೀಲಗಳನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಹಸ್ತಾಂತರಿಸಿದ್ದಾರೆ.

ಉಪಜಿಲ್ಲಾ ಮಟ್ಟದ, ಸಬ್ ಜಿಲ್ಲಾ ಮಟ್ಟದ ಕಲೋತ್ಸವದಲ್ಲೂ ಈ ಶಾಲೆಯ ಮಕ್ಕಳು ಬಟ್ಟೆ ಚೀಲ ತಯಾರಿಸಿ ವಿತರಣೆ ನಡೆಸಿದ್ದರು. ಈ ಶಾಲೆಯ ಇಕೋ ಕ್ಲಬ್ ನೇತೃತ್ವದಲ್ಲಿ ಕಳೆದ ವರ್ಷ ನಡೆಸಿದ ಪ್ಲಾಸ್ಟಿಕ್ ಪಾಳು ವಸ್ತು ಸಂಗ್ರಹ ಕಾರ್ಯಕ್ರಮದಲ್ಲಿ 250 ಕಿಲೋ ಪಾಳುವಸ್ತು ಸಂಗ್ರಹವಾಗಿತ್ತು. ತದನಂತರ ನಡೆಸಿದ ಪ್ರಕೃತಿ ಸ್ನೇಹಿ ಚಟುವಟಿಕೆಗಳಿಗೆ ಈ ಕಾಯಕ ಪ್ರೇರೆಯಾಗಿತ್ತು. ಶಾಲೆಯ ಮುಖ್ಯ ಶಿಕ್ಷಕ ಎ.ಅಶೋಕ್ ಅರಳಿತ್ತಾಯ, ಇಕೋ ಕ್ಲಬ್ ಸಂಚಾಲಕಿ ಎಂ.ಸಾವಿತ್ರಿ, ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಎ.ಪದ್ಮನಾಭ, ಇಕೋ ಕ್ಲಬ್ ಸದಸ್ಯರಾದ ಬಿ. ಯದುಕೃಷ್ಣನ್, ಸಿ.ಎಚ್.ಸುಭಾಷ್ ಚೀಲ ಹಸ್ತಾಂತರ ವೇಳೆ ಜತೆಗಿದ್ದರು.

ಸ್ಪರ್ಧಾಳುಗಳಿಗೆ ಭೋಜನದ ಪೊಟ್ಟಣ
ರಾಜ್ಯ ಮಟ್ಟದ ಶಾಲಾ ಕಲೋತ್ಸವದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದ ನಂತರ ಊರಿಗೆ ಮರಳುವವರು ಬರಿದಾದ ಹೊಟ್ಟೆಯಲ್ಲಿ ಪ್ರಯಾಣ ಬೆಳೆಸಬಾರದು ಎಂಬ ಕಾಳಜಿಯನ್ನು ಇಲ್ಲಿನಾಹಾರ ಸಮಿತಿ ಹೊಂದಿದೆ. ಇದರ ಅಂಗವಾಗಿ ಮರಳುವವರಿಗೆ ಆಹಾರವನ್ನು ಪೊಟ್ಟಣದಲ್ಲಿ ಕಟ್ಟಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪೊಟ್ಟಣದಲ್ಲಿ ಭೋಜನದಲ್ಲಿ ವೈವಿಧ್ಯತೆಯೂ ಇರುವುದು.

27ರಿಂದ ಭೋಜನಾಲಯ ಚಾಲನೆ: ಶಾಲಾ ಬಸ್ ಗಳ ಉಚಿತ ಸೇವೆ
ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಭೋಜನಾಲಯ ನ.27ರಿಂದ ಚಟುವಟಿಕೆ ಆರಂಭಿಸಲಿದೆ. ಅಂದು ಹಾಲುಕ್ಕಿಸುವ ಕಾಯಕದ ಮೂಲಕ ಅಡುಗೆ ಸಿದ್ಧಪಡಿಸುವ ಚಟುವಟಿಕೆಗಳಿಗೆ ಚಾಲನೆ ಲಭಿಸಲಿದೆ. ಕೇರಳೀಯ ಶೈಲಿಯ ಅಡುಗೆಯೊಂದಿಗೆ ತುಳುನಾಡಿನ ವಿಶೇಷತೆಗಳಾದ ಹೋಳಿಗೆ, ಕೇಸರಿಬಾತ್, ಗೋಳಿಬಜೆ ಇತ್ಯಾದಿಗಳನ್ನೂ ಸವಿಯಬಹುದು.

ಬೇರೆ ಬೇರೆ ಕಡೆಗಳಿಂದ ಈ ಭೋಜನಾಲಯಕ್ಕೆ ತೆರಳಲು ಶಾಲಾ ಬಸ್ ಗಳ ಉಚಿತ ಸಂಚಾರ ಸೇವೆ ಲಭಿಸಲಿದೆ. ಪ್ರಧಾನ ವೇದಿಕೆಯಾಗಿರುವ ಐಂಙೋತ್ ನಿಂದ 1.5 ಕಿಮೀ ದೂರದಲ್ಲಿರುವ ಕೊವ್ವಲ್ಪಳ್ಳಿಯಲ್ಲಿ ಬೃಹತ್ ಭೋಜನಾಲಯ ಸಿದ್ಧವಾಗಿದೆ. 18 ಕೌಂಟರ್ ಗಳಲ್ಲಿ 2750 ಮಂದಿ ಏಕಕಾಲಕ್ಕೆ ಉಣ್ಣಬಹುದಾದ ಸೌಲಭ್ಯ ಏರ್ಪಡಿಸಲಾಗಿದೆ. ಬಡಿಸುವ, ಶುಚೀಕರಣದ, ಇನ್ನಿತರ ಚಟುವಟಿಕೆಗಳಿಗಾಗಿ 2 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಸಿದ್ಧರಾಗಿದ್ದಾರೆ. ದಿನವೊಂದಕ್ಕೆ 500 ಸ್ವಯಂಸೇವಕರು ಕರ್ತವ್ಯದಲ್ಲಿರುವರು. ಶಿಕ್ಷಕರು, ಎನ್.ಎಸ್.ಎಸ್., ಎನ್.ಸಿ.ಸಿ., ರೆಡ್ ಕ್ರಾಸ್, ಸಹಿತ ಪಡೆಗಳ ಸದಸ್ಯರು ಸೇವೆ ಸಲ್ಲಿಸುವರು. ಕಂದಾಯ ಸಚಿವ ಇ. ಚಂದ್ರಶೇಖರನ್ ಅವರು ನ.23ರಂದು ಭೋಜನಾಲಯ ಸಂದರ್ಶಿಸಿ, ಅವಲೋಕನ ನಡೆಸುವರು.

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ವಿಜಯ ವಿಠಲ ಶಿಕ್ಷಣ ಸಂಸ್ಥೆಗಳ ವತಿಯಿಂದ ಕೊರೊನಾ ಸಹಾಯಾರ್ಥ ನಿಧಿಗೆ 20 ಲಕ್ಷ ರೂ ದೇಣಿಗೆ

Upayuktha

ಜಗತ್ತಿನ ಎಲ್ಲಾ ಮೂಲೆಯಲ್ಲೂ ವಿಜ್ಞಾನಕ್ಕೆ ವಿಶೇಷ ಸ್ಥಾನವಿದೆ – ಡಾ. ಅಪ್ಪಾಜಿಗೌಡ ಎಸ್.ಬಿ

Upayuktha

ಐಎಂಎ ಕಾಸರಗೋಡು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಅ.24ಕ್ಕೆ

Upayuktha