ಫ್ಯಾಷನ್ ವಾಣಿಜ್ಯ ವ್ಯಾಪಾರ- ವ್ಯವಹಾರ

ದಕ್ಷಿಣ ಭಾರತದ ನೆಚ್ಚಿನ ಫ್ಯಾಮಿಲಿ ಫ್ಯಾಶನ್ ಸ್ಟೋರ್ ‘ಜಯಲಕ್ಷ್ಮಿ’ ಮಂಗಳೂರಿನಲ್ಲಿ ನಾಳೆ ಶುಭಾರಂಭ

 

ಮಂಗಳೂರು: ದಕ್ಷಿಣ ಭಾರತದ ನೆಚ್ಚಿನ ಫ್ಯಾಮಿಲಿ ಫ್ಯಾಶನ್ ಸ್ಟೋರ್ಸ್ ಜಯಲಕ್ಷ್ಮಿ ತನ್ನ ಮೆಗಾ ಶೋರೂಂ ಅನ್ನು ಮಂಗಳೂರಿನ ಬಿಜೈನಲ್ಲಿ ಪ್ರಾರಂಭಿಸುತ್ತಿದ್ದು, ಗುರುವಾರ (ಮಾ.12) ಬೆಳಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ.

Advertisement
Advertisement

ಶಿಕ್ಷಣ ಸಂಸ್ಥೆಗಳು, ವ್ಯಾಪಾರ ಕೇಂದ್ರಗಳು ಮತ್ತು ಐಟಿ ಹಬ್‌ಗಳನ್ನು ಹೊಂದಿರುವ ಮಂಗಳೂರನ್ನು ಯುವಜನರ, ವೈವಿಧ್ಯ ಮತ್ತು ವರ್ಣಮಯ ನಗರವೆಂದು ಬಣ್ಣಿಸಲಾಗುತ್ತದೆ. ಮಂಗಳೂರಿನ ಜನರು ಫ್ಯಾಆಶನ್ ಮತ್ತು ಸ್ಟೈಲ್‌ಗೆ ಮನ್ನಣೆ ಕೊಡುತ್ತಾರೆ ಮತ್ತು ಯಾವಾಗಲೂ ಉತ್ತಮ ಗುಣಮಟ್ಟದ ಯಾವುದೇ ವಸ್ತುಗಳನ್ನಾದರೂ ಮೆಚ್ಚಿಕೊಳ್ಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ, ಪ್ರೀಮಿಯಂ ಉಡುಪುಗಳು ಮತ್ತು ನವವಧುವಿನ ಉಡುಗೆ ತೊಡುಗೆಗಳ ಸಂಗ್ರಹಗಳ ಮಳಿಗೆ ‘ಜಯಲಕ್ಷ್ಮಿ’ ತನ್ನ 5ನೇ ಶೋರೂಂ ಅನ್ನು ಮಂಗಳೂರಿನ ಹೃದಯಭಾಗವಾದ ಬಿಜೈನಲ್ಲಿ ಪ್ರಾರಂಭಿಸುತ್ತಿದೆ.

‘ಜಯಲಕ್ಷ್ಮಿ’ ವಿಶೇಷತೆಗಳು ಏನು?
ಒಟ್ಟು 1 ಲಕ್ಷ ಅಡಿ ವಿಸ್ತೀರ್ಣದ ಹೊಸ ಮೆಗಾ ಶೋರೂಂ, ಕರ್ನಾಟಕದಲ್ಲೇ ಅತಿ ದೊಡ್ಡ ವಸ್ತ್ರಗಳ ಮಳಿಗೆಯಾಗಿ ಗುರುತಿಸಲ್ಪಡುತ್ತದೆ. ನಾಲ್ಕು ಮಹಡಿಗಳ ಬೃಹತ್ ಶಾಪಿಂಗ್ ಮಾಲ್‌ನಲ್ಲಿ ಅತ್ಯುತ್ತಮವಾದ ಉಡುಪುಗಳು ಮತ್ತು ವಧುವಿನ ಉಡುಗೆಗಳ ಬೃಹತ್ ಸಂಗ್ರಹವಿದೆ. ವಧುವಿನ ಸೀರೆಗಳು, ಡಿಸೈನರ್ ಸೀರೆಗಳು, ಡಿಸೈನರ್ ವೇರ್, ಜಂಟ್ಸ್‌ ಕಲೆಕ್ಷನ್‌ನಿಂದ ಮಕ್ಕಳ ಉಡುಗೆಗಳವರೆಗೆ ಅತ್ಯುತ್ತಮ ಮತ್ತು ನೂತನ ಕಲೆಕ್ಷನ್ ಜಯಲಕ್ಷ್ಮಿ ಫ್ಯಾಷನ್‌ನಲ್ಲಿ ಲಭ್ಯವಿದೆ.

ಬಹುಮಹಡಿ ಕಟ್ಟಡದ ನೆಲಮಹಡಿಯಲ್ಲಿ ಚೂಡಿದಾರ್‌, ಚೂಡಿದಾರ್ ಮೆಟೀರಿಯಲ್ಸ್, ಡ್ರೆಸ್ ಮೆಟೀರಿಯಲ್‌ಗಳು, ಎಥ್ನಿಕ್ ವೇರ್‌ಗಳು ಇರುತ್ತವೆ. ಮಕ್ಕಳ ಉಡುಗೆ ತೊಡುಗೆಗಳು, ಪಾಶ್ಚಿಮಾತ್ಯ ಉಡುಗೆ (1ನೇ ಮಹಡಿಯಲ್ಲಿ), ಪುರುಷರುಡುಗೆ ತೊಡುಗೆಗಳು, ಬ್ಲೌಸ್ ಮೆಟೀರಿಯಲ್ಸ್‌, ಒಳ ಉಡುಪುಗಳು (2ನೇ ಮಹಡಿಯಲ್ಲಿ), ಲೆಹಂಗಾ ಮತ್ತು ಸೀರೆಗಳ ಸಂಗ್ರಹ ಮೂರನೇ ಮಹಡಿಯಲ್ಲಿ ಇರುತ್ತವೆ. ನೆಲಮಾಳಿಗೆಯ ಎರಡು ಮಹಡಿಗಳನ್ನು ಕಾರ್ ಪಾರ್ಕಿಂಗ್‌ಗಾಗಿ ಕಾಯ್ದಿರಿಸಿದ್ದು, ಸುಮಾರು 250 ವಾಹನಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.

ವಿದ್ಯುತ್‌ ದೀಪಗಳ ವರ್ಣಮಯ ಬೆಳಕಿನಿಂದ ಕಂಗೊಳಿಸುತ್ತಿರುವ ಶೋರೂಂ

ಪುಟ್ಟ ಮಕ್ಕಳಿಗಾಗಿ ಮೋಜು ಒದಗಿಸಲು ಮಕ್ಕಳ ಆಟದ ಸ್ಥಳವನ್ನು ಮೀಸಲಿರಿಸಲಾಗಿದೆ. ವ್ಯಾಪಕ ಸಂಗ್ರಹದ, ಅತ್ಯುತ್ತಮ ಗುಣಮಟ್ಟದ, ಉತ್ತಮ ಶ್ರೇಣಿಯ ಯಾವುದಕ್ಕೂ ಸಾಟಿಯಿಲ್ಲದ ಜಯಲಕ್ಷ್ಮಿ, ಪ್ರತಿದಿನವೂ ಶಾಪಿಂಗ್ ಮಾಡುವ ಭರವಸೆಯನ್ನು ನೀಡುತ್ತದೆ. ಜವಳಿ ಕ್ಷೇತ್ರದಲ್ಲಿ ತನ್ನ 7 ದಶಕಗಳ ಪರಿಣತಿ ಹೊಂದಿರುವ ಜಯಲಕ್ಷ್ಮಿ, ಭಾರತೀಯ, ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯ, ಫ್ಯಾಷನ್ ವಸ್ತ್ರೋದ್ಯಮದಲ್ಲಿ ಅಪಾರ ಅನುಭವ ಹೊಂದಿದೆ. ಪ್ರತಿಯೊಂದು ವಿಭಾಗದ ಜನರ ಅಭಿರುಚಿಯನ್ನು ಪೂರೈಸಲು ಸಜ್ಜಾಗಿದೆ. ನವ ವಿನ್ಯಾಸದೊಂದಿಗೆ ನೂತನ ಕಲ್ಪನೆಯೊಂದಿಗೆ ವಿನ್ಯಾಸಗೊಳಿಸಲಾದ ವಿಶಾಲವಾದ ಶೋರೂಂ ಪ್ರತಿಯೊಬ್ಬ ಗ್ರಾಹಕರ ಕಾಳಜಿ ವಹಿಸಲು 500ಕ್ಕೂ ಹೆಚ್ಚು ಹರ್ಷಚಿತ್ತದ ಉತ್ಸಾಹಿ ಸಿಬ್ಬಂದಿಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಪ್ರಕ್ರಿಯೆಗಳು ಗ್ರಾಹಕರಿಗೆ ಅಂತಾರಾಷ್ಟ್ರೀಯ ಶಾಪಿಂಗ್ ಅನುಭವ ನೀಡಲಿವೆ.

‘ಜಯಲಕ್ಷ್ಮಿ’ ಹಿನ್ನೆಲೆ:
ಜಯಲಕ್ಷ್ಮಿ ಮಳಿಗೆಯನ್ನು 1947ರಲ್ಲಿ ಕೊಚ್ಚಿನ್‌ನ ಕ್ಲೋತ್ ಬಜಾರ್ ರಸ್ತೆಯಲ್ಲಿ ದಿವಂಗತ ಆರ್. ನರಸಿಂಹ ಕಾಮತ್‌ ಅವರು ಸ್ಥಾಪಿಸಿದರು. ಪ್ರಾರಂಭದಲ್ಲಿ 200 ಚದರ ಅಡಿ ಅಳತೆಯ ಸಣ್ಣ ಅಂಗಡಿಯೊಂದಿಗೆ ವ್ಯವಹಾರ ಆರಂಭಗೊಂಡಿತು.

1997ರಲ್ಲಿ ದಿವಂಗತ ನರಸಿಂಹ ಕಾಮತ್ ಅವರ ಮೂವರು ಪುತ್ರರಾದ ಎನ್, ನಾರಾಯಣ ಕಾಮತ್, ಎನ್ ಗೋವಿಂದ ಕಾಮತ್ ಮತ್ತು ಎನ್ ಸತೀಶ್ ಕಾಮತ್ ಅವರು ಕೊಚ್ಚಿನ್ನ ಎಂಜಿ ರೋಡ್‌ನಲ್ಲಿ 60 ಸಾವಿರ ಚದರ ಅಡಿ ವಿಸ್ತಾರದ ಅತ್ಯಾಧುನಿಕ ಶೋರೂಂ ಅನ್ನು ತೆರೆದರು. ಗ್ರಾಹಕರಿಗೆ ಉತ್ತಮ ಗುಣಮಟ್ಟ ಮತ್ತು ಫ್ಯಾಶನ್ ಉಡುಪುಗಳನ್ನು ಒದಗಿಸುವ ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮ, ಉತ್ತಮ ದೃಷ್ಟಿಕೋನದೊಂದಿಗೆ ‘ಜಯಲಕ್ಷ್ಮಿ’ ವಿಜಯ ಯಾತ್ರೆಯನ್ನು ಆರಂಭಿಸಿದರು.

ಜಯಲಕ್ಷ್ಮಿ ಬ್ರಾಂಡ್‌:
15 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಜಯಲಕ್ಷ್ಮಿ ಬ್ರಾಂಡ್ ಕೇರಳದಾದ್ಯಂತ ಜನಪ್ರಿಯವಾಯಿತು. ಅಲ್ಲದೆ ತಿರುವನಂತಪುರ, ತ್ರಿಶೂರ್‌ ಮತ್ತು ಕ್ಯಾಲಿಕಟ್‌ನಲ್ಲಿ ಭವ್ಯವಾದ ಶೋರೂಂಗಳನ್ನು ತೆರೆಯಿತು. ಇಂದು ಜಯಲಕ್ಚ್ಮಿ ಬ್ರ್ಯಾಂಡ್ ತನ್ನ ಗುಣಮಟ್ಟದ ಉತ್ಪನ್ನಗಳು, ಅತೀ ಅದ್ಭುತ ಸಂಗ್ರಹಗಳು ಮತ್ತು ಉತ್ಕೃಷ್ಟ ಸೇವೆಗೆ ಹೆಸರುವಾಸಿಯಾಗಿದೆ.

ಕಳೆದ 7 ದಶಕಗಳಲ್ಲಿ ಲಕ್ಷಾಂತರ ನಿಷ್ಠಾವಂತ ಗ್ರಾಹಕರಿಗೆ ಸೇವೆ ಸಲ್ಲಿಸಿದ ಜಯಲಕ್ಷ್ಮಿ ಬ್ರ್ಯಾಂಡ್‌ ಮದುವೆಯ ರೇಷ್ಮೆ ಸೀರೆಗಳ ಬೃಹತ್ ಸಂಗ್ರಹಗಳ ಮಧ್ಯೆ ‘ವಧುವಿನ ಶೃಂಗಾರದ ಉಡುಪುಗಳ ಸಂಗ್ರಹ ತಾಣ’ (ಬ್ರೈಡಲ್ ಡೆಸ್ಟಿನೇಶನ್) ಎಂಬ ಟ್ಯಾಗ್ ಹೊಂದಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Advertisement
Advertisement

Related posts

4,335 ಕೋಟಿ ರೂ ಪಿಎಂಸಿ ಬ್ಯಾಂಕ್ ಹಗರಣ: ಎಚ್‌ಡಿಐಎಲ್ ನಿರ್ದೇಶಕರ ಬಂಧನ

Upayuktha

ಇಂದಿನ ಪೆಟ್ರೋಲ್- ಡೀಸೆಲ್ ಬೆಲೆ (ಮಾರ್ಚ್ 11)

Upayuktha

ಎಂಎಸ್‌ಎಂಇ ದೇಶದ ಆರ್ಥಿಕತೆಗೆ ಬೆನ್ನೆಲುಬು

Upayuktha
error: Copying Content is Prohibited !!