ದೇಶ-ವಿದೇಶ ಪ್ರಮುಖ

ಕೇರಳದ ಮೊದಲ ಬುಡಕಟ್ಟು ಸಮುದಾಯದ ಐಎಎಸ್ ಅಧಿಕಾರಿ ಶ್ರೀಧನ್ಯಾ ಸುರೇಶ್

ಕೋಝಿಕೋಡ್ ಸಹಾಯಕ ಜಿಲ್ಲಾಧಿಕಾರಿಯಾಗಿ ನೇಮಕ

ತಿರುವನಂತಪುರಂ: ಕೇರಳದ ಮೊದಲ ಬುಡಕಟ್ಟು ಸಮುದಾಯಕ್ಕೆ ಸೇರಿದ 26ರ ಹರೆಯದ ಹುಡುಗಿ 2018ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಇದೀಗ ಕೋಝಿಕೋಡ್ ಜಿಲ್ಲೆಯ ಸಹಾಯಕ ಜಿಲ್ಲಾಧಿಕಾರಿಯಾಗಿ ಸೇರ್ಪಡೆಯಾಗಲಿದ್ದಾರೆ.

ವಯನಾಡು ಜಿಲ್ಲೆಯ ಪೊಝುತ್ತಾನ ಪಂಚಾಯಿತಿಯ ಶ್ರೀಧನ್ಯಾ ಈ ಸಾಧನೆಯನ್ನು ಮಾಡಿದ್ದಾರೆ. ಕುರಿಚಿಯಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಾಗರೀಕ ಸೇವೆ ಪರೀಕ್ಷೆಯಲಿ 410ನೇ ರ್‍ಯಾಂಕ್ ಪಡೆದುಕೊಂಡಿದ್ದರು.

ಕೊರೊನಾ ವೈರಸ್ ಸೋಂಕು ವಿರುದ್ಧ  ಪ್ರತಿರೋಧ ಚಟುವಟಿಕೆ ನಡೆಸುವ ಮೂಲಕ ಕೇರಳ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಸಂದರ್ಭದಲ್ಲಿ ಮೈಸೂರಿನಲ್ಲಿ ತರಬೇತಿಯನ್ನು ಪೂರ್ತಿಗೊಳಿಸಿದ ಕೂಡಲೇ ಕೋಝಿಕೋಡ್ ಸಹಾಯಕ ಜಿಲ್ಲಾಧಿಕಾರಿಯಾಗಿ ಸೇರ್ಪಡೆಗೊಂಡಿದ್ದಾರೆ. ಸೇರ್ಪಡೆಗೊಳ್ಳುವ ಮೊದಲು ಎರಡು ವಾರಗಳ ತನಕ ಕ್ವಾರಂಟೈನ್‌ನಲ್ಲಿದ್ದರು.

ವಯನಾಡಿನಲ್ಲಿ ಸರಕಾರಿ ಬುಡಕಟ್ಟು ಅಭಿವೃದ್ಧಿ ಇಲಾಖೆಯಲ್ಲಿ ಪ್ರಾಜೆಕ್ಟ್ ಅಸಿಸ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿರುವಾಗ ಆಗಿನ ಮಾನಂದವಾಡಿ ಉಪಜಿಲ್ಲಾಧಿಕಾರಿಯಾದ ಶ್ರೀರಾಂ ಸಾಂಬಶಿವ ರಾವ್ ಅವರ ಸೇವೆಗೆ ಆಕರ್ಷಿತರಾಗಿ ಐಎಎಸ್ ಪಡೆಯಲು ತೀರ್ಮಾನಿಸಿದ್ದರು. ವಿಶೇಷವೆಂದರೆ ಮಾರ್ಗದರ್ಶಿಯಾಗಿದ್ದ ರಾವ್, ಅವರು ಕೋಝಿಕೋಡ್ ಜಿಲ್ಲಾಧಿಕಾರಿಯಾಗಿದ್ದಾರೆ. ಇದೀಗಿ ಸಹಾಯಕ ಜಿಲ್ಲಾಧಿಕಾರಿ ಶ್ರೀಧನ್ಯಾ ಅವರ ಅಧೀನದಲ್ಲಿ ಕೆಲಸ ನಿರ್ವಹಿಸಲು ನಿಯೋಜನೆಗೊಂಡಿರುವುದು ವಿಶೇಷವಾಗಿದೆ.

ಈಕೆಯ ತಂದೆ ಸುರೇಶ್ ಮತ್ತು ತಾಯಿ ಕಮಲಾ  ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಾಗಿದ್ದಾರೆ. ಆಕೆಯ ಅಕ್ಕ ಸರಕಾರಿ ಇಲಾಖೆಯ ಲಾಸ್ಟ್‌ಗ್ರೇಡ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಿರಿಯ ಸಹೋದರ ಪಾಲಿಟೆಕ್ನಿಕ್ ವಿದಾರ್ಥಿಯಾಗಿದ್ದಾನೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬಣ್ಣದ ವೇಷದ ಭವ್ಯತೆಯೊಂದಿಗೆ ಕಲಾ ರಸಿಕರ ಮನ ಮುದಗೊಳಿಸಿದ ಬಣ್ಣದ ಮಹಾಲಿಂಗ ಸಂಸ್ಮರಣೆ

Upayuktha

ಅವಳಿ ಮಕ್ಕಳಿಗೆ ‘ಕೊರೊನಾ’, ‘ಕೋವಿಡ್’ ಅಂತ ಹೆಸರಿಟ್ಟ ದಂಪತಿಗಳು…!

Upayuktha

ಡಿಸೆಂಬರ್ 1 ರಿಂದ ಎಲ್ಲಾ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್

Upayuktha