ದೇಶ-ವಿದೇಶ ಪ್ರಮುಖ ವಾಣಿಜ್ಯ

ಜನಪ್ರಿಯವಾಗುತ್ತಿದೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಆನ್‌ಲೈನ್ ಮಾರುಕಟ್ಟೆ

ಬೆರಳತುದಿಯಲ್ಲೇ ಲಭ್ಯ 180ಕ್ಕೂ ಹೆಚ್ಚು ಗುಣಮಟ್ಟದ  ಉತ್ಪನ್ನಗಳು, ಕುಶಲಕರ್ಮಿಗಳಿಗೂ ಅನುಕೂಲ

ನವದೆಹಲಿ: ಲಾಕ್‌ಡೌನ್ ಮಧ್ಯೆಯೇ ಸರ್ಕಾರದ ಅಂಗಸಂಸ್ಥೆಯೊಂದು ಇಟ್ಟಿರುವ ಜನಸ್ನೇಹಿ ಹೆಜ್ಜೆಯು ಭಾರೀ ಜನಪ್ರಿಯಗೊಂಡಿದೆ. ಕೇಂದ್ರ ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯದ ಅಡಿಯಲ್ಲಿನ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಆರಂಭಿಸಿರುವ ಆನ್‌ಲೈನ್ ಮಾರುಕಟ್ಟೆ ಕಡಿಮೆ ಅವಧಿಯಲ್ಲೇ ಜನಮೆಚ್ಚುಗೆ ಪಡೆದಿದೆ. ಇದರಿಂದಾಗಿ ಕುಶಲಕರ್ಮಿಗಳಿಗೆ ದೇಶಾದ್ಯಂತ ತಮ್ಮ ವಸ್ತುಗಳಿಗೆ ಮಾರುಕಟ್ಟೆ ಕಂಡುಕೊಳ್ಳಲು ಅನುಕೂಲವಾಗಿದ್ದು, ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ಬೆರಳತುದಿಯಲ್ಲೇ ಲಭ್ಯವಾಗಿದೆ.

www.kviconline.gov.in/khadimask/ ಮೂಲಕ ಭಾರತದ ದೂರದ ಭಾಗಗಳಿಗೂ ಮಾರಾಟ ಮಾಡಲು ಅನುವು ಮಾಡಿಕೊಡಲು ತ್ವರಿತವಾಗಿ ಭಾರತದಾದ್ಯಂತ ನೆಲೆಯೂರುತ್ತಿದೆ. ಜುಲೈ 7ರಂದು ಖಾದಿ ಮಾಸ್ಕ್‌ಗಳನ್ನು ಮಾರಾಟ ಮಾಡಲು ಆರಂಭಗೊಂಡ ಈ ಆನ್‌ಲೈನ್ ಮಾರಾಟ, ಇಂದು 180 ಉತ್ಪನ್ನಗಳಿಗೆ ವಿಸ್ತಾರಗೊಂಡಿದೆ. ಇನ್ನಷ್ಟು ಉತ್ಪನ್ನಗಳು ಸದ್ಯದಲ್ಲೇ ಸೇರ್ಪಡೆಯಾಗಲಿದ್ದು ಪೂರ್ಣಪ್ರಮಾಣದ ಇ-ಮಾರುಕಟ್ಟೆ ವೇದಿಕೆಯಾಗುತ್ತದೆ.

ಏನೇನು ಸಿಗುತ್ತೆ ಕೆವಿಐಸಿ ಆನ್‌ಲೈನ್ ಭಂಡಾರದಲ್ಲಿ?

ಕೆವಿಐಸಿಯ ಪ್ರಕಾರ ಉತ್ಪನ್ನಗಳ ಶ್ರೇಣಿಯಲ್ಲಿ ಕೈಯಿಂದ ನೂಲಿದ ಮತ್ತು ಕೈಯಿಂದ ನೇಯ್ದ ಸೂಕ್ಷ್ಮ ವಸ್ತ್ರವಾದ ಮಸ್ಲಿನ್, ರೇಷ್ಮೆ, ಹತ್ತಿ ಮತ್ತು ಡೆನೀಮ್, ರಿತುಬೇರಿಯ ಯೂನಿಸೆಕ್ಸ್ ವಿಚಾರವಸ್ತ್ರ, ಖಾದಿಯ ಅಂಕಿತದ ಕೈಗಡಿಯಾರ, ವೈವಿಧ್ಯಮಯ ಜೇನುತುಪ್ಪ, ಗಿಡಮೂಲಿಕೆ ಮತ್ತು ಹಸಿರು ಚಹಾ, ಗಿಡಮೂಲಿಕೆ ಔಷಧಿಗಳು ಮತ್ತು ಸಾಬೂನುಗಳು, ಹಪ್ಪಳ, ಕಚ್ಛಿ ಘಾನಿ ಸಾಸಿವೆ ಎಣ್ಣೆ ಮತ್ತು ಅನೇಕ ಗಿಡಮೂಲಿಕೆಗಳ ಶ್ರೇಣಿಯ ಸೌಂದರ್ಯವರ್ಧಕ, ಮೋದಿ ಕುರ್ತಾ ಮತ್ತು ಮೋದಿ ಜಾಕೆಟ್‌ಗಳು ಹಾಗೂ ಮಹಿಳೆಯರಿಗಾಗಿ ಪ್ಲಾಜೂ ಮತ್ತು ಸ್ಟ್ರೇಟ್ಟ್ರೋಷರ್‌ಗಳಿವೆ. ಖಾದಿ ರುಮಾಲ್, ಸಾಂಬಾರಗಳು, ಗಿಡಮೂಲಿಕೆಗಳ ಬೇವಿನ ಮರದ ಬಾಚಣಿಗೆ, ಶಾಂಪೂ, ಸೌಂದರ್ಯವರ್ಧಕಗಳು, ಹಸುವಿನ ಸಗಣಿ ಮತ್ತು ಹಸುವಿನ ಗಂಜಲದ ಸಾಬೂನು, ಯೋಗ ಉಡುಗೆಗಳು ಮತ್ತು ಹಲವಾರು ಬಗೆಯ ಸಿದ್ಧ ಆಹಾರಗಳು ಇತ್ಯಾದಿಗಳನ್ನು ಒಳಗೊಂಡಿದೆ.

ಕೆವಿಐಸಿ ದಿನಂಪ್ರತಿಯ ಆಧಾರದಲ್ಲಿ ಕನಿಷ್ಠ 10 ಹೊಸ ಉತ್ಪನ್ನಗಳನ್ನು ತನ್ನ ಮಾರುಕಟ್ಟೆ ಭಂಡಾರಕ್ಕೆ ಸೇರ್ಪಡೆ ಮಾಡುತ್ತಿದ್ದು, ಈ ವರ್ಷ ಅಕ್ಟೋಬರ್ 2ರ ಹೊತ್ತಿಗೆ 1000 ಉತ್ಪನ್ನ ಸೇರ್ಪಡೆ ಮಾಡುವ ಗುರಿ ಹೊಂಡಿದೆ. ಎರಡು ತಿಂಗಳುಗಳಿಗೂ ಕಡಿಮೆ ಅವಧಿಯಲ್ಲಿ ಕೆವಿಐಸಿ 4,000 ಗ್ರಾಹಕರಿಗೆ ಸೇವೆ ಒದಗಿಸಿದೆ.

50 ರೂ. ನಿಂದ 5 ಸಾವಿರ ರೂ. ತನಕದ ಉತ್ಪನ್ನಗಳು
ಖಾದಿ ಉತ್ಪನ್ನಗಳ ಆನ್‌ಲೈನ್ ಮಾರಾಟ ಸ್ವದೇಶೀಗೆ ದೊಡ್ಡ ಉತ್ತೇಜನ ನೀಡಿದ್ದು, ಸ್ಥಳೀಯ ಕುಶಲಕರ್ಮಿಗಳ ಸಬಲೀಕರಣದ ಗುರಿ ಹೊಂದಿದೆ.  ಖಾದಿಯ ಇ ಮಾರುಕಟ್ಟೆ ಪೋರ್ಟಲ್ ನಮ್ಮ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತೊಂದು ವೇದಿಕೆ ಕಲ್ಪಿಸಿದೆ. ಇದು ಆತ್ಮನಿರ್ಭರ ಭಾರತ ನಿರ್ಮಾಣದೆಡೆಗೆ ಒಂದು ಸ್ಪಷ್ಟ ಹೆಜ್ಜೆಯಾಗಿದೆ. ಎಲ್ಲ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು 50 ರೂ.ನಿಂದ 5 ಸಾವಿರ ರೂ.ವರೆಗಿನ ಉತ್ಪನ್ನಗಳನ್ನು ಸೇರಿಸಲಾಗಿದೆ ಎಂದು ಕೆವಿಐಸಿ ಅಧ್ಯಕ್ಷ ಶ್ರೀ ವಿನಯ್ ಕುಮಾರ್ ಸಕ್ಸೇನಾ ತಿಳಿಸಿದ್ದಾರೆ.

ಈ ಹಿಂದೆ ಖಾದಿ ಸಂಸ್ಥೆಯ ಉತ್ಪನ್ನಗಳನ್ನು ಕೇವಲ ಅದರ ಮಳಿಗೆಗಳಲ್ಲಿ ಮಾತ್ರವೇ ಮಾರಾಟ ಮಾಡಲಾಗುತ್ತಿತ್ತು ಮತ್ತು ಇದರ ಲಭ್ಯತೆ ಕೆಲವೇ ರಾಜ್ಯಗಳಿಗೆ ಸೀಮಿತವಾಗಿತ್ತು. ಆದರೆ, ಕೆವಿಐಸಿ ಇ -ಪೋರ್ಟಲ್ ಉತ್ಪನ್ನಗಳನ್ನು ದೇಶದ ಮೂಲೆಮೂಲೆಗೂ ತಲುಪಿಸುತ್ತಿದೆ ಮತ್ತು ಖಾದಿ ಸಂಸ್ಥೆಗೆವ್ಯಾಪಕ ಮಾರುಕಟ್ಟೆ ಆಯಾಮ ನೀಡಿದೆ. ಇದರಿಂದ ತಾನಾಗಿಯೇ ಅದರ ಉತ್ಪಾದನೆ ಹೆಚ್ಚಳವಾಗಿದ್ದು, ಕುಶಲಕರ್ಮಿಗಳ ಆದಾಯವೂ ಹೆಚ್ಚಾಗಲಿದೆ ಎಂದೂ ಅವರು ಹೇಳಿದ್ದಾರೆ.

ಗ್ರಾಹಕರು ಕೂಡ ಆನ್‌ಲೈನ್‌ನಲ್ಲಿ ಖಾದಿ ಉತ್ಪನ್ನ ಮಾರಾಟ ಮಾಡುತ್ತಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಕೆವಿಐಸಿ ದೂರದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅರುಣಾಚಲ ಪ್ರದೇಶ, ಕೇರಳ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ 31 ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬೇಡಿಕೆ ಸ್ವೀಕರಿಸುತ್ತಿದೆ. ಕೆವಿಐಸಿ ಕನಿಷ್ಠ 599 ರೂ.ಗಳ ಬೇಡಿಕೆಯನ್ನು ಸಲ್ಲಿಸಿದರೆ, ಯಾವುದೇ ವಿತರಣಾ ಶುಲ್ಕವಿಲ್ಲದೆ ಉಚಿತವಾಗಿ ಸರಕು ತಲುಪಿಸುತ್ತದೆ.

ಅಂಚೆ ಇಲಾಖೆ ಜತೆ ಒಪ್ಪಂದ
ಅಂಚೆ ಇಲಾಖೆಯೊಂದಿಗೆ ತ್ವರಿತ ಅಂಚೆಯ ಮೂಲಕ ಉತ್ಪನ್ನ ವಿತರಣೆಗಾಗಿ ಒಪ್ಪಂದವನ್ನು ಮಾಡಿಕೊಂಡಿದೆ. ಕೆವಿಐಸಿ ಪ್ರಕಾರ, ಇದು ತಾನೇ ಇ-ಪೋರ್ಟಲ್ ಅಭಿವೃದ್ಧಿಪಡಿಸಿದ್ದು, ಇದು ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯ ಮಾಡಿದೆ. ಈ ಪ್ರಯತ್ನ ಪಿಎಂಇಜಿಪಿ ಇ-ಪೋರ್ಟಲ್ ಅಭಿವೃದ್ಧಿಪಡಿಸಿದ ರೀತಿಯಲ್ಲಿದ್ದು, ವೆಬ್‌ಸೈಟ್ ಅಭಿವೃದ್ಧಿ ಮತ್ತು ನಿರ್ವಹಣೆಯ 20 ಕೋಟಿ ರೂಪಾಯಿ ಉಳಿತಾಯ ಮಾಡಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಮಂಗಳೂರಿನಲ್ಲಿ ಡಾ. ಎಸ್‌ಪಿಬಿ ಲೈವ್ ಕನ್ಸರ್ಟ್‌ ನಾಳೆ (ಜ.19)

Upayuktha

ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಮಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ

Upayuktha

ಕರ್ಣಾಟಕ ಬ್ಯಾಂಕ್ ನಿವೃತ್ತ ಚೇರ್‌ಮನ್ ಅನಂತಕೃಷ್ಣ ನಿಧನ

Upayuktha