ಚಂದನವನ- ಸ್ಯಾಂಡಲ್‌ವುಡ್

8 ವರ್ಷದ ಬಳಿಕ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ ಜೋಡಿ; ಕಿಚ್ಚ ನಿಂದ ಬೆಸ್ಟ್‌ ವಿಷ್

ಬೆಂಗಳೂರು : ಕಿಚ್ಚ ಸುದೀಪ್, ದೂದ್ ಪೇಡಾ ದಿಗಂತ್ ಮತ್ತು ಐಂದ್ರಿತಾ ರೇ ದಂಪತಿಗೆ ಶುಭಕೋರಿದ್ದಾರೆ.

ದಿಗಂತ್ ಮತ್ತು ಐಂದ್ರಿತಾ ಇಬ್ಬರು ತುಂಬಾ ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ ಪಾತ್ರ ಮಾಡುತ್ತಿದ್ದು, 8 ವರ್ಷಗಳ ಬಳಿಕ ತೆರೆಮೇಲೆ ಒಂದಾಗಿರುವ ದಿಗಂತ್ ಮತ್ತು ಐಂದ್ರಿತಾಗೆ ಸುದೀಪ್ ಬೆಸ್ಟ್ ವಿಶಸ್ ತಿಳಿಸಿದ್ದಾರೆ.

‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರದಲ್ಲಿ.ಚಿತ್ರಕಾದ ದಿಗಂತ್ ಮತ್ತು ಐಂದ್ರಿತಾ ಇಬ್ಬರು ಇರುವ ಪೋಸ್ಟರ್ ರಿಲೀಸ್ ಆಗಿದೆ.

ಈ ಪೋಸ್ಟರ್ ಅನ್ನು ಐಂದ್ರಿತಾ ಶೇರ್ ಮಾಡಿ, ‘ಮಲೆನಾಡಿನ ಮೋಹಕ ತಾಣದಲ್ಲಿ ಚಿತ್ರೀಕರಣ ನಡೆಯುತ್ತಿದೆ. 8 ವರ್ಷದ ಬಳಿಕ ತೆರೆ ಹಿಂದಿನ ನನ್ನ ಪ್ರೀತಿ ದಿಗಂತ್ ಜೊತೆ ಮತ್ತೆ ನಟಿಸುತ್ತಿದ್ದೀನಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಗೆ ಪ್ರತಿಕ್ರಿಯೆ ಮಾಡಿದ ಕಿಚ್ಚ ಸುದೀಪ್, ಇಬ್ಬರು ಮತ್ತೆ ಒಟ್ಟಿಗೆ ನಟಿಸುತ್ತಿರುವುದು ಸೂಪರ್. ಒಳ್ಳೆಯದಾಗಲಿ ದಿಗಂತ್ ಮತ್ತು ಐಂದ್ರಿತಾ’ ಎಂದು ಹೇಳಿದ್ದಾರೆ.

ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ, ಚಿತ್ರದಲ್ಲಿ ದಿಗಂತ್ ಅಡಿಕೆ ಬೆಳೆಗಾರನಾಗಿ ನಟನೆ ಮಾಡುತ್ತಿದ್ದು, ಮೊದಲ ಬಾರಿಗೆ ದಿಗಂತ್ ಇಂಥ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಲೆನಾಡಿನ ಸುಂದರ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಸಾಗರದ ಪುಟ್ಟ ಹಳ್ಳಿಯಲ್ಲಿ ನಡೆಯುವ ಕಥೆ ಇದಾಗಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಚಿತ್ರದಲ್ಲಿ ಮತ್ತೋರ್ವ ನಾಯಕಿಯಾಗಿ ರಂಜಿನಿ ರಾಘವನ್ ನಟಿಸುತ್ತಿದ್ದಾರೆ.

ಸಿನಿಮಾವನ್ನು ವಿನಾಯಕ ಕೊಡ್ಸರ ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ವಿನಾಯಕ ಎರಡು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.

Related posts

ಕನ್ನಡ ಚಿತ್ರರಂಗದ “ಅಶ್ವತ್ಥ ವೃಕ್ಷ”: ನಿಮಗಿದೋ ಮತ್ತೊಮ್ಮೆ ಭಾವಪೂರ್ಣ ನಮನ

Upayuktha

ರಾಘವೇಂದ್ರ ರಾಜ್‌ಕುಮಾರ್ ಮಗ, ಖ್ಯಾತ ನಿರ್ದೇಶಕ ರಾಜಮೌಳಿ ಯವರನ್ನು ಭೇಟಿ

Harshitha Harish

ಶಂಕರ್‌ನಾಗ್‌ ಜನುಮದಿನ ಇಂದು: ಗಾಯನ-ನಮನ

Upayuktha