ಆರೋಗ್ಯ ಮನೆ ಮದ್ದು

ಆರೋಗ್ಯವೇ ಭಾಗ್ಯ: ತುಳಸಿ ಎಲೆಗಳ ಸೇವನೆಯಿಂದ ಏನೇನು ಲಾಭಗಳಿವೆ ಗೊತ್ತಾ?

ತುಳಸಿ ಗಿಡ, ತುಳಸಿ ಎಲೆ ಪೂಜೆಗಷ್ಟೇ ಅಲ್ಲ, ಆರೋಗ್ಯ ರಕ್ಷಣೆಗೂ ಬೇಕು. ತುಳಸಿಯಲ್ಲಿರುವ ಔಷಧೀಯ ಗುಣಗಳು ಅಗಾಧ. ತುಳಸಿಯ ಸಸ್ಯಶಾಸ್ತ್ರೀಯ ಹೆಸರು Ocimum tenuiflorum. ಇಂಗ್ಲಿಷ್‌ನಲ್ಲಿ Holy basil ಎಂದು ಕರೆಯುತ್ತಾರೆ.

ತುಳಸಿಯ ನಾನಾ ಉಪಯೋಗಗಳು ಇಲ್ಲಿವೆ ನೋಡಿ:

– ತುಳಸಿ ಎಲೆಯನ್ನು ದಿನ ನಿತ್ಯ ಸೇವಿಸುವುದರಿಂದ ಜೀರ್ಣ ಶಕ್ತಿ ವೃದ್ಧಿಸುವುದು.
-ತುಳಸಿ ಎಲೆಗಳನ್ನು ಜಜ್ಜಿ, ನಿಂಬೆ ರಸ ಸೇರಿಸಿ ಚರ್ಮದ ಮೇಲೆ ಲೇಪಿಸುವುದರಿಂದ ತುರಿಕೆ, ಕಜ್ಜಿಗಳು ನಿವಾರಣೆಯಾಗುವುದು.
– 20 ಗ್ರಾಂ ತುಳಸಿ ಬೀಜ, 40 ಗ್ರಾಂ ಸ್ಫಟಿಕ ಸಕ್ಕರೆ ಮಿಶ್ರಣ ಮಾಡಿ ಚಳಿಗಾಲದಲ್ಲಿ ದಿನನಿತ್ಯ ಸೇವಿಸುವುದರಿಂದ ಕೆಮ್ಮು ಮತ್ತು ಗ್ಯಾಸ್ಟ್ರಿಕ್ ದೂರವಾಗುತ್ತದೆ.
– ತುಳಸಿ ಎಲೆಯನ್ನು ಪ್ರತಿದಿನ ಸೇವಿಸುವು ದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
– 21 ತುಳಸಿ ಎಲೆ, ಐದು ಲವಂಗಗಳು, 500 ಮಿಲಿ ಶುಂಠಿ ಮಿಶ್ರಣವನ್ನು ಸ್ವಲ್ಪ ನೀರು ಹಾಕಿ ಚೆನ್ನಾಗಿ ಬಿಸಿ ಮಾಡಿ ಬಳಿಕ ಸೋಸಿ. ಅದಕ್ಕೆ 10 ಗ್ರಾಂನಷ್ಟು ಜೇನುತುಪ್ಪ ಸೇರಿಸಿ ಸೇವಿಸಿದರೆ ಜ್ವರ, ಕೆಮ್ಮು ಕಡಿಮೆಯಾಗುತ್ತದೆ.
– ಎರಡು ಚಮಚ ತುಳಸಿ ಎಲೆಯ ರಸಕ್ಕೆ ಸ್ವಲ್ಪ ಏಲಕ್ಕಿ ಪುಡಿ, ಶುಂಠಿ ರಸ ಸೇರಿಸಿ ಕುಡಿದರೆ ವಾಂತಿ ಸಮಸ್ಯೆ ನಿವಾರಣೆಯಾಗುತ್ತದೆ.
– ಕಿಡ್ನಿ ಕಲ್ಲಿನ ಸಮಸ್ಯೆ ಇದ್ದರೆ ತುಳಸಿ ಎಲೆ ರಸಕ್ಕೆ ಜೇನು ಸೇರಿಸಿ ರಸ ಕುಡಿಯಿರಿ.
– ತುಳಸಿ ಎಲೆಯನ್ನು ನೋವಿರುವ ಹಲ್ಲಿನಲ್ಲಿ ಸ್ವಲ್ಪ ಸಮಯ ಕಚ್ಚಿ ಹಿಡಿದಿಟ್ಟುಕೊಂಡರೆ ನೋವು ನಿವಾರಣೆಯಾಗುವುದು.

ನೀರಿಗೆ ಸ್ವಲ್ಪ ತುಳಸಿ ರಸ, ಸ್ವಲ್ಪ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಿದರೆ ಹಲ್ಲು, ಬಾಯಿ ಮತ್ತು ಗಂಟಲಿನ ಸಮಸ್ಯೆಯನ್ನು ಕಡಿಮೆಯಾಗುತ್ತದೆ.
– ತುಳಸಿ ರಸಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಸೇವಿಸಿದರೆ ನಿದ್ರೆ ಚೆನ್ನಾಗಿ ಬರುತ್ತದೆ.
– ರಾತ್ರಿ ಕುರುಡು, ಕಣ್ಣಿನ ಸಮಸ್ಯೆ ಇದ್ದವರು ಒಂದೆರಡು ಹನಿ ತುಳಸಿ ರಸವನ್ನು ಕಣ್ಣಿಗೆ ಹಾಕಿಕೊಂಡರೆ ನಿವಾರಣೆಯಾಗುತ್ತದೆ.
– ತುಳಸಿ ನೆನೆ ಹಾಕಿದ ನೀರಿನಿಂದ ಬಾಯಿ ಮುಕ್ಕಳಿಸಿದರೆ ದುರ್ವಾಸನೆ ಹೋಗುತ್ತದೆ.
– ಕಫ, ನೆಗಡಿ, ಕೆಮ್ಮು ನಿವಾರಣೆಗೆ ತುಳಸಿ ರಸ ಸೇವಿಸುವುದು ಉತ್ತಮ.
– ತುಳಸಿ ಎಲೆ ರಸ ಮತ್ತು ಗಂಧದ ಪೇಸ್ಟ್ ಮಾಡಿ ಹಣೆಗೆ ಹಚ್ಚಿದರೆ ತಲೆ ನೋವು ಕಡಿಮೆಯಾಗುವುದು.
– ಕಣ್ಣು ಉರಿ ಉಪಶಮನಕ್ಕೆ ತುಳಸಿ ರಸ ಬಳಸಬಹುದು.
-ತುಳಸಿ ಗಿಡವನ್ನು ಬಳಸಿ ತಯಾರಿಸಿದ ಎಣ್ಣೆಯನ್ನು ಮೈ-ಕೈಗೆ ಹಚ್ಚಿಕೊಂಡರೆ ಮೈ-ಕೈ ನೋವಿವು ಕಡಿಮೆಯಾಗುತ್ತದೆ.
– ತುಳಸಿ ಮತ್ತು ಪುದಿನಾ ಕಷಾಯ ತಯಾರಿಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ.
-ಕಿವಿ ನೋವಿದ್ದರೆ ತುಳಸಿ ಎಲೆಯ ರಸವನ್ನು ಕಿವಿಗೆ ಹಾಕುವುದರಿಂದ ನೋವು ನಿವಾರಣೆಯಾಗುತ್ತದೆ.
– ತುಳಸಿ, ಈರುಳ್ಳಿ, ಶುಂಠಿ ರಸಗಳನ್ನು ಜೇನುತುಪ್ಪದೊಂದಿಗೆ ಸೇರಿಸಿ ಕುಡಿದರೆ ಭೇದಿ, ರಕ್ತಭೇದಿ ನಿಯಂತ್ರಣವಾಗುತ್ತದೆ.

Related posts

‘ವಿಶ್ವ ಓಜೋನ್ ದಿನ – ಸೆಪ್ಟೆಂಬರ್ 16’

Upayuktha

ನಾಲಿಗೆ ಹೇಳುತ್ತೆ ನಿಮ್ಮ ಆರೋಗ್ಯ ಸ್ಥಿತಿಯನ್ನು… ಹೀಗಳೆಯಬೇಡಿ ನಾಲಿಗೆಯನ್ನು..

Upayuktha

ರಕ್ತ ಹೀರುವ ಜೀವ, ಹಿಂಡುವ ಹೊಟ್ಟೆ ಹುಳುಗಳು: ನಿವಾರಣೆ ಹೇಗೆ?

Upayuktha

Leave a Comment

error: Copying Content is Prohibited !!