ಜಿಲ್ಲಾ ಸುದ್ದಿಗಳು ಸಮುದಾಯ ಸುದ್ದಿ

ಕೋಟಿ ಚೆನ್ನಯರ ಕ್ಷೇತ್ರದಲ್ಲಿ ಏ.23-24ರಂದು ಬ್ರಹ್ಮಕಲಶೋತ್ಸವ: ಕುದ್ರೋಳಿಯಲ್ಲಿ ಪೂರ್ವಭಾವಿ ಸಭೆ

ಮಂಗಳೂರು: ತುಳುನಾಡಿನ ಅವಳಿ ವೀರ ಪುರುಷ ಕೋಟಿ ಚೆನ್ನಯರ ಜನ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡುಮಲೆ ಪಡುವನ್ನೂರುನಲ್ಲಿ ಮೊದಲ ಹಂತದ ಕಾರ್ಯ ಪೂರ್ಣಗೊಂಡಿದ್ದು ಈ ಪುಣ್ಯ ಸ್ಥಳದಲ್ಲಿ ಏಪ್ರಿಲ್ ತಿಂಗಳ 23 ಹಾಗೂ 24ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ.

ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ವತಿಯಿಂದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ ಸುವರ್ಣ ಸಭಾಭವನದಲ್ಲಿ ನಡೆಸಲಾಯಿತು.

ಕ್ಷೇತ್ರದ ಇತಿಹಾಸ ಹಾಗೂ ಬ್ರಹ್ಮಕಲಶೋತ್ಸವ ಪೂರ್ವ ತಯಾರಿ ಬಗ್ಗೆ ವಿವರಿಸಲಾಯಿತು. ಈ ಸಂದರ್ಭದಲ್ಲಿ, ಕ್ಷೇತ್ರದ ಅಡಳಿತ ಮೊಕ್ತೇಸರರು ಚಲನಚಿತ್ರ ನಟ ವಿನೋದ್ ಅಳ್ವ,ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಪಡುಮಲೆ ಕೋಟಿ ಚೆನ್ನಯ ಜನ್ಮ ಸ್ಥಾನ ಸಂಚಲ ಸೇವಾ ಟ್ರಸ್ಟ್ ಅಧ್ಯಕ್ಚ ಕೆ.ಹರಿಕೃಷ್ಣ ಬಂಟ್ವಾಳ್, ಎಂಎಲ್‌ಸಿ ಹರೀಶ್ ಕುಮಾರ್, ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಿರುವೆರ್ ಕುಡ್ಲದ ಮುಖ್ಯಸ್ಥ ಉದಯ ಪೂಜಾರಿ ಸೇರಿದಂತೆ ಕರಾವಳಿಯ ಬಿಲ್ಲವ ಸಮಾಜದ ಮುಖಂಡರು, ಹಾಗೂ ಕೋಟಿ ಚೆನ್ನಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ನಮ್ಮೂರ ಸುದ್ದಿ: ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ

Upayuktha

ಭಾಗವತ ಪಟ್ಲ ಸತೀಶ್ ಶೆಟ್ಟರ ಸಾರಥ್ಯದಲ್ಲಿ ಪಾವಂಜೆ ಮೇಳ

Upayuktha

ಎಡನೀರು ಶ್ರೀಗಳಿಗೆ ಉಡುಪಿಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಶ್ರದ್ಧಾಂಜಲಿ

Upayuktha