ಗ್ರಾಮಾಂತರ ಪ್ರಮುಖ ಶಿಕ್ಷಣ ಸ್ಥಳೀಯ

ಉಪನ್ಯಾಸಕಿ ವಾಸಂತಿ ಎಂ.ಕೆ ರವರಿಗೆ ಡಾಕ್ಟರೇಟ್ ಪದವಿ

ಪುಂಜಾಲಕಟ್ಟೆ: ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್‌ ಸ್ಕೂಲ್  ಅರ್ಥಶಾಸ್ತ್ರ ಉಪನ್ಯಾಸಕಿ ವಾಸಂತಿ ಎಂ.ಕೆ ಇವರು ಮಂಡಿಸಿರುವ ಇನ್‌ಕ್ಲೂಸಿವ್ ಗ್ರೋತ್ : ಎ ಕೇಸ್ ಸ್ಟಡಿ ಆಫ್ ಮೈಕ್ರೋ ಫೈನಾನ್ಸ್ ಇನ್ ಚಿಕ್ಕಮಗಳೂರು ಡಿಸ್ಟ್ರಿಕ್ಟ್ (Inclusive Growth: A Case study of Micro Finance in Chikmagalore District)

ಎಂಬ ಮಹಾಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಇವರು ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾ ಕೇಂದ್ರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎ.ಜಯಕುಮಾರ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಮಂಡಿಸಿದ್ದರು.

ಇವರು ಈ ಹಿಂದೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದು, ಪ್ರಸ್ತುತ ಕರ್ನಾಟಕ ಪಬ್ಲಿಕ್‌ಸ್ಕೂಲ್ ಪುಂಜಾಲಕಟ್ಟೆಯ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಕಡೇಮಾಡ್ಕಲ್ ಗ್ರಾಮದ ಶ್ರೀಮತಿ ದೇವಕಿ ಮತ್ತು ಹೆಚ್.ಯು. ಕೃಷ್ಣಮೂರ್ತಿ ದಂಪತಿ ಪುತ್ರಿ.

Related posts

ಫಿಲೋಮಿನಾದಲ್ಲಿ ಗಣಿತಶಾಸ್ತ್ರ ಎಂಎಸ್ಸಿ ರ‍್ಯಾಂಕ್‌ ವಿಜೇತೆಗೆ ಸನ್ಮಾನ

Upayuktha

ಕೊಡಗು: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿ ನಾಪತ್ತೆ

Upayuktha

ನಕಲಿ ರಶೀದಿ ನೀಡಿ ದಂಡ ಸಂಗ್ರಹಿಸಿದ ಟ್ರಾಫಿಕ್ ಪೊಲೀಸ್

Sushmitha Jain