ಪುತ್ತೂರು: ಮುಳಿಯ ಪ್ರಾಪರ್ಟೀಸ್ ವತಿಯಿಂದ ಪುತ್ತೂರಿನಲ್ಲಿ ಆತ್ಯಾಧುನಿಕ ಸುಸಜ್ಜಿತ ವಸತಿ ನಿವೇಶನ ‘ಕೃಷಿಕೇಶ’ ಲೇಔಟ್ ನ ಭೂಮಿ ಪೂಜೆ ಪುತ್ತೂರು ಸಮೀಪದ ಪಂಗಳಾಯಿಯಲ್ಲಿ ನಡೆಯಿತು.
ವೈದಿಕ ವಿಧಿವಿಧಾನಗಳನ್ನು ಪುರೋಹಿತ ಕೃಷ್ಣಕುಮಾರ್ ಉಪಾಧ್ಯಾಯರು ನೆರವೇರಿಸಿದರು. ಪರ್ಲಡ್ಕ ವಾರ್ಡಿನ ಕೌನ್ಸಿಲರ್ ವಿದ್ಯಾ ಗೌರಿ ಇವರು ಹಾಲೆರೆದು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗಣ್ಯರಾದ ಭಾವಿನ್ ಶೇಟ್, ಸೇಡಿಯಾಪು ಜನಾರ್ಧನ ಭಟ್, ಆರ್ಟಿಟೆಕ್ ಸಚ್ಚಿದಾನಂದ, ಮುಳಿಯ ಗೋವಿಂದ ಭಟ್, ಮಾಜಿ ಕೌನ್ಸಿಲರ್ ವಿನಯ್ ಭಂಡಾರಿ ಮುಂತಾದವರು ಭಾಗವಸಿದ್ದರು.
ಖ್ಯಾತ ವಕೀಲರಾದ ಮಹೇಶ್ ಕಜೆಯವರು ಲೇಔಟ್ ನ ಮಾಹಿತಿ ಪತ್ರ ಬಿಡುಗಡೆ ಮಾಡಿದರು.
ಪುತ್ತೂರು ಬಸ್ಟ್ಯಾಂಡ್ ಸಮೀಪದ ಪಂಗಳಾಯಿಯಲ್ಲಿ ಇರುವ ಈ ನಿವೇಶನ ಬಸ್ ನಿಲ್ದಾಣದಿಂದ ಕೇವಲ 600 ಮೀ ಅಂತರದಲ್ಲಿದೆ. ಬದುಕಿನ ಅವಿಭಾಜ್ಯ ಅಂಗವಾದ ದೇವಸ್ಥಾನ, ಚರ್ಚ್, ಶಾಲೆ ಹಾಗೂ ಮಾರುಕಟ್ಟೆ ಇದರಿಂದ 1 ಕಿಮೀಗಿಂತಲೂ ಸಮೀಪದಲ್ಲಿದೆ.
ಬೆಳೆಯುತ್ಹಿರುವ ಪುತ್ತೂರು ನಗರದಲ್ಲಿ ಈ ನಿವೇಶನಗಳು ಜನಪ್ರಿಯವಾಗಿದ್ದು, ಸುವ್ಯಸ್ಥಿತ ಅನುಕೂಲತೆಯೊಂದಿಗೆ ಇದ್ದು, ಹಾಗೆಯೇ ಇದು ಒಂದು ಹೂಡಿಕೆ ಕೂಡ ಹೌದು ಎಂದು ಸಂಸ್ಥೆಯ ಆಡಳಿತ ನಿರ್ದೇಶಕರಾದ ಕೃಷ್ಣ ನಾರಾಯಣ ಮುಳಿಯ ಈ ಸಂದರ್ಭದಲ್ಲಿ ಹೇಳಿದರು.
ಒಟ್ಟು 1 ಎಕರೆಯಲ್ಲಿ 13 ನಿವೇಶನಗಳಿದ್ದು 30 ಅಡಿ ಅಗಲದ ರಸ್ತೆ, ಪಾರ್ಕ್, ಮಕ್ಕಳ ಆಟದ ಜಾಗ, ಒಳಚರಂಡಿ ವ್ಯವಸ್ಥೆ, ವಿದ್ಯುತ್ ಹಾಗೂ ನೀರಿನ ವ್ಯವಸ್ಥೆಯನ್ನು ಈ ಆಧುನಿಕ ಲೇಔಟ್ ಹೊಂದಿದೆ. ಆಸಕ್ತರು ಮುಳಿಯ ವನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಂಸ್ಥೆಯ ದಿಗ್ದರ್ಶಕರಾದ ಸರಾಫ್ ಮುಳಿಯ ಶ್ಯಾಮ್ ಭಟ್ ಹಾಗೂ ಸಂಸ್ಥೆಯ ಚೇರ್ಮನ್ ಕೇಶವ ಪ್ರಸಾದ್ ಮುಳಿಯ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ