ನಗರ ಸ್ಥಳೀಯ

ಉಡುಪಿ: ಶ್ರೀ ಕೃಷ್ಣ ಜಯಂತೀ ಉತ್ಸವಕ್ಕೆ ತೆಂಕುತಿಟ್ಟು ಯಕ್ಷಗಾನದ ಮೆರುಗು

ನೀಲಾವರ ಗೋಶಾಲೆಯಲ್ಲಿ ನರಕಾಸುರ ಮೋಕ್ಷ…!!

ಉಡುಪಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ನೀಲಾವರ ಗೋಶಾಲೆಯಲ್ಲಿ ನಡೆದ ಶ್ರೀ ಕೃಷ್ಣ ಜಯಂತೀ ಸಂಭ್ರಮಕ್ಕೆ ತೆಂಕು ತಿಟ್ಟು ಯಕ್ಷಗಾನ ಪ್ರದರ್ಶನ ವೈಭವದ ಮೆರುಗು ನೀಡುವಲ್ಲಿ  ಯಶಸ್ವಿಯಾಯಿತು.

ರಾಕೇಶ್ ರೈ ಅಡ್ಕ ಮತ್ತು ತಂಡದವರಿಂದ ನರಕಾಸುರ ಮೋಕ್ಷ ತೆಂಕುತಿಟ್ಟು ಯಕ್ಷ ಪ್ರಸಂಗ ಪ್ರದರ್ಶನಗೊಂಡು ಆನ್ ಲೈನ್ ಮೂಲಕ ಸಹಸ್ರಾರು ಕಲಾಭಿಮಾನಿಗಳನ್ನು ತಲುಪಿ ಮೆಚ್ಚುಗೆಗೆ ಪಾತ್ರವಾಗಿದೆ.

ಕೃಷ್ಣನ ಪಾತ್ರದಲ್ಲಿ ರಾಕೇಶ್ ರೈ, ಸತ್ಯಭಾಮೆಯಾಗಿ ವಿಂಧ್ಯಾ ಆಚಾರ್ಯ, ನರಕಾಸುರನಾಗಿ ಡಾ. ಸುನೀಲ್ ಮುಂಡ್ಕೂರು, ಮುರಾಸುರನಾಗಿ ಸುಧನ್ವ, ಇಂದ್ರನಾಗಿ ಸುಮನ್ಯು ಉತ್ತಮ‌ ಪಾತ್ರ ನಿರ್ವಹಿಸಿದರು.

ಹಿಮ್ಮೇಳದಲ್ಲಿ ಭಾಗವತಿಕೆ: ಶ್ರೀಮತಿ ಶಾಲಿನಿ ಹೆಬ್ಬಾರ್, ಚೆಂಡೆ: ಮುರಾರಿ ಕಡಂಬಳಿತ್ತಾಯ, ಮದ್ದಳೆ: ವರುಣ್ ಹೆಬ್ಬಾರ್, ಚಕ್ರತಾಳ: ಮಿಲನ್ ಪಣಂಬೂರು, ಉತ್ತಮ ‌ನಿರ್ವಹಣೆಗೈದು ಪ್ರಸಂಗದ ಯಶಸ್ಸಿಗೆ ಜೀವ ತುಂಬಿದರು.

ಪ್ರದರ್ಶನ ವೀಕ್ಷಿಸಿದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿ ಕಲಾವಿದರನ್ನು ಅಭಿನಂದಿಸಿದರು.

-ಜಿ. ವಾಸುದೇವ ಭಟ್ ಪೆರಂಪಳ್ಳಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

 

Related posts

ಕೋವಿಡ್‌ 19 ಅಪ್‌ಡೇಟ್ಸ್‌: ದ.ಕ- 14, ಉಡುಪಿ 13 ಕೊರೊನಾ ಪ್ರಕರಣ

Upayuktha

ಅಮೃತ ಸಾಹಿತ್ಯ ವೇದಿಕೆ ಲಾಂಛನ ಬಿಡುಗಡೆ

Upayuktha

ಪರಿಸರ ರಕ್ಷಣೆಯಿಂದ ಸಾಂಕ್ರಾಮಿಕ ರೋಗ ನಿಯಂತ್ರಣ: ಡಾ|| ಚೂಂತಾರು

Upayuktha