ಕತೆ-ಕವನಗಳು

*ಕ್ರೂರ*

ರಣಹದ್ದುಗಳು ಕುಕ್ಕಿ ಕುಕ್ಕಿ ತಿನ್ನುತಿದೆ ಕೊಳೆತು ನಾರುತ್ತಿರುವ ಶವವೊಂದ, ಅನಾಥ ಹೆಣವಾಗಿದೆ ಭಿಕ್ಷುಕನ ಮೃತ ದೇಹವೀಗ..

ಒಂದೊಮ್ಮೆ ಅವ ಸಂಸಾರಿ, ಹೆಂಡತಿ ಮಕ್ಕಳ ಹೊಂದಿದ ಸುಖಿ, ಕಣ್ರೆಪ್ಪೆಯಂತೆ ಸಾಕಿದನವ ಮಕ್ಕಳ ತಾ ದುಡಿದುದುನ್ನೆಲ್ಲವ ಅವರಿಗಿತ್ತು ಬಿಟ್ಟಿದ್ದ ..

ಹೆಂಡತಿಯೆಂದರೆ ಬಲು ಪ್ರೀತಿಯವನಿಗೆ,ಅವಳು ಕೋಪಗೊಂಡರೆ ಮುದ್ದಿಸಿ, ಲಾಲಿಸಿ, ಸರಸದಿ ಒಲಿಸಿಕೊಂಡು ತನ್ನ ಪ್ರೀತಿಯ ಸುಧೆಯ ಹರಿಸುತ್ತಿದ್ದ..

ಕುಳಿತು ತಿನ್ನುವಷ್ಟು ದುಡಿದ, ತನ್ನಿಬ್ಬರು ಮಕ್ಕಳಿಗೂ ತಾ ದುಡಿದುದೆಲ್ಲವ ಹಂಚಿದ, ಮಕ್ಕಳೆನ್ನ ಸಾಕುವರೆಂದು ಅವ ನಂಬಿದ್ದ..

ಆಸ್ತಿಯೆಲ್ಲವ ಪಡೆದ ಮಕ್ಕಳಿರ್ವರೂ ಮುದಿ ಗೂಬೆಗಳು ನಮಗೇಕೆ ಭಾರವೆಂದು ಹೊರಗಟ್ಟಿದರು, ದಂಪತಿಗಳಿರ್ವರೂ ಬೀದಿ ಬದಿ ಭಿಕ್ಷುಕರಾದರು..

ಪ್ರೀತಿಯ ಹೆಂಡತಿಗಾಗಿ ಅವ ಭಿಕ್ಷೆಯೆತ್ತಿ ಹೊಟ್ಟೆ ತುಂಬಿಸಿದ, ಕರುಣೆಯಿಲ್ಲದೇ ದೇವರು ಅವನ ಹೆಂಡತಿಯ ಕಿತ್ತುಕೊಂಡ..

ಈಗವನು ಒಂಟಿ ಮಕ್ಕಳಿದ್ದರೂ! ಪರರು ಕೊಟ್ಟಿದನ್ನ ತಿಂದ, ಹೆಂಡತಿ ಸತ್ತ ಕೊರಗಿನಿಂದ ಹುಚ್ಚನಾದ, ಎಲ್ಲವ ತೊರೆದು ಪರ ಲೋಕವಸಿಯಾದ..

ಈಗ ಸತ್ತವನ ದೇಹವ ಹದ್ದು ಕುಕ್ಕಿದರೇನು? ನಾಯಿ ಎಳೆದಾಡಿದರೇನು, ಸತ್ತವ ಮರಳಿ ಬರಲಾರ, ಹುಟ್ಟಿಸಿದ ಮಕ್ಕಳು ಬಳಿ ಬರಲಾರರು..

*✍ನಾಗಶ್ರೀ. ಎಸ್. ಭಂಡಾರಿ*
*ಮೂಡುಬಿದಿರೆ*

Related posts

ಕವನ-ಗಾಯನ: ಮನದ ನೋವು

Upayuktha

ಕವನ: ನಮೋ ರಾಘವೇಶ್ವರ

Upayuktha

*ಬಾಳ ಪಯಣ*

Harshitha Harish