ಜಿಲ್ಲಾ ಸುದ್ದಿಗಳು ಪ್ರಮುಖ

ಸೆ.21ರಿಂದ ಕಾಸರಗೋಡು- ಮಂಗಳೂರು ಅಂತಾರಾಜ್ಯ ಬಸ್ ಸಂಚಾರ ಪುನರಾರಂಭ

ಮಂಗಳೂರು: ಕಳೆದ ಐದೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಕಾಸರಗೋಡು- ಮಂಗಳೂರು ನಡುವಣ ಬಸ್‌ ಸಂಚಾರ ಸೆಪ್ಟೆಂಬರ್ 21ರಿಂದ ಪುನರಾರಂಭವಾಗಲಿದೆ.

ಮಾರ್ಚ್‌ ಅಂತ್ಯದ ವೇಳೆಗೆ ದೇಶದ ಮೊದಲ ಕೊರೊನಾ ಸೋಂಕು ಪ್ರಕರಣ ಕೇರಳದಲ್ಲಿ ಪತ್ತೆಯಾದ ಬಳಿಕ ಲಾಕ್‌ಡೌನ್‌ ಘೋಷಣೆಯಾಗಿತ್ತು. ಅದರಿಂದಾಗಿ ಅಂತಾರಾಜ್ಯ ಸಂಚಾರವೂ ಸ್ಥಗಿತಗೊಂಡಿತ್ತು.

ಇದೀಗ ಅನ್‌ಲಾಕ್ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಜನಜೀವನವನ್ನು ಸಹಜ ಸ್ಥಿತಿಗೆ ತರಲು ಕೇಂದ್ರ ಸರಕಾರ ಪ್ರತಿ ತಿಂಗಳೂ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಿದ್ದು, ಒಂದೊಂದಾಗಿ ನಿರ್ಬಂಧಗಳನ್ನು ತೆಗೆದು ಹಾಕುತ್ತಿದೆ.

ಸೆಪ್ಟೆಂಬರ್ ಆರಂಭದಿಂದಲೇ ಕಾಸರಗೋಡಿನ ಜನತೆಯ ಹೋರಾಟ, ಪ್ರತಿಭಟನೆಯ ಬಳಿಕ ಉಭಯ ರಾಜ್ಯಗಳ ಗಡಿ ರಸ್ತೆಗಳನ್ನು ಒಂದೊಂದಾಗಿ ತೆರೆದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಇದೀಗ ಮಂಗಳೂರು- ಕಾಸರಗೋಡು ನಡುವೆ ಕೆ.ಎಸ್‌.ಆರ್‌.ಟಿಸಿ ಬಸ್‌ಗಳ ಸಂಚಾರ ಪುನರಾರಂಭಿಸಲು ಎರಡೂ ರಾಜ್ಯ ಸರಕಾರಗಳು ನಿರ್ಧರಿಸಿದ್ದು, ಜನರ ಬೇಡಿಕೆಗೆ ಅನುಗುಣವಾಗಿ ಬಸ್‌ಗಳು ಸಂಚರಿಸಲಿವೆ. ಒಂದು ಬಸ್‌ನಲ್ಲಿ 40 ಪ್ರಯಾಣಿಕರು ಇದ್ದಲ್ಲಿ ಮಾತ್ರ ಸಂಚಾರ ನಡೆಸಲಿದೆ.

ಈಗಾಗಲೇ ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ವ್ಯವಸ್ತೆ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ ಕಾಸರಗೋಡು- ಮಂಗಳೂರು ಮತ್ತು ಕಾಸರಗೋಡು- ಪಂಜಿಕ್ಕಲ್ ಅಂತಾರಾಜ್ಯ ಹೆದ್ದಾರಿಗಳಲ್ಲಿ ಬಸ್ ಸಂಚಾರ ಆರಂಭವಾಗಲಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಐಎನ್‌ಎಕ್ಸ್ ಮೀಡಿಯಾ ಹಗರಣ: ಚಿದಂಬರಂಗೆ ತಕ್ಷಣದ ರಿಲೀಫ್ ಇಲ್ಲ

Upayuktha

ಕುಕ್ಕೆ ಸುಬ್ರಹ್ಮಣ್ಯ: 24ರಿಂದ ಚಂಪಾಷಷ್ಠಿ ಮಹೋತ್ಸವ

Upayuktha

ಅಯೋಧ್ಯೆ ತೀರ್ಪು ಮರುಪರಿಶೀಲನೆಗೆ ಅರ್ಜಿ: ಮುಸ್ಲಿಂ ಸಂಘಟನೆಗಳ ಇಂಗಿತ

Upayuktha

Leave a Comment

error: Copying Content is Prohibited !!