Others ಕಲೆ-ಸಾಹಿತ್ಯ ಲೇಖನಗಳು

ಕುಮಾರವ್ಯಾಸ: ಪದವಿಟ್ಟಳಿಸದ ಅಗ್ಗಳಿಕೆ

ನಮ್ಮ ಕುವರವ್ಯಾಸ ಮಹಾಪ್ರಚಂಡ. ಅವನು ಸಾಹಿತ್ಯ ಕ್ಷೇತ್ರದಲ್ಲಿ ಮಂದಮಾರುತ ಬೀಸುತ್ತಿದ್ದಾಗ ರೊಂಯನೆ ಬೀಸಿ ಬಂದ ಬಿರುಗಾಳಿ. ತಾನು ಬರೆದ ‘ಕರ್ಣಾಟ ಭಾರತ ಕಥಾಮಂಜರಿ’ಯ ಕುರಿತು ಅವನು ಹಲಗೆ ಬಳಪವಂ ಪಿಡಿಯದುದು ಒಂದು ಅಗ್ಗಳಿಕೆ ಎಂದು ಹೇಳುತ್ತಾನೆ. ಮುಂದುವರೆದು ಪದವಿಟ್ಟಳಿಸದುದು ಒಂದು ಅಗ್ಗಳಿಕೆ ಎಂದು ತನ್ನ ಕಾವ್ಯದ ಬಗೆಗೆ ಅಪರಿಮಿತ ಆತ್ಮವಿಶ್ವಾಸವನ್ನು ತಾನೇ ಜಾಹೀರುಗೊಳಿಸುತ್ತಾನೆ. ಅವನ ಕಾವ್ಯಕ್ಕೆ ಅವನೇ ಬ್ರಾಂಡ್ ಅಂಬಾಸಿಡರ್. ಶತಮಾನಗಳು ಉರುಳಿದ ಅನಂತರ ಕುವೆಂಪು ಅವರು ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಎಂದು ಈ ಮಹಾಪ್ರತಿಭೆಯನ್ನು ಸ್ಮರಿಸಿ ಅಕ್ಷರ ನಿವಾಳಿ ಅರ್ಪಿಸಿದರು. ಕುಮಾರವ್ಯಾಸನ ಭಾರತ ಜಗತ್ತಿನ ಮಹಾಕಾವ್ಯಗಳಲ್ಲಿಯೇ ಅದ್ವಿತೀಯವಾದುದು. ಮಹಾಕಾವ್ಯಕ್ಕೆ ಇರಬೇಕಾದ ಎಲ್ಲ 18 ಲಕ್ಷಣಗಳನ್ನೂ ಹೊಂದಿರುವ ಕಾವ್ಯ. ನವರಸಗಳನ್ನೂ ಹೊರಚೆಲ್ಲುವ ತುಷಾರ ಸಿಂಚನವಿದು. ಅದೊಂದು ರಸಗವಳ. ಬಲ್ಲವರೇ ಬಲ್ಲ ಜೇನ ಸಿಹಿಯದು.

ಅದು ಒತ್ತಟ್ಟಿಗೆ ಇರಲಿ. ಹಲಗೆ ಬಳಪವಂ ಪಿಡಿಯದೆ ಬರೆದರೂ ಸೈ, ಚತುರವಾಣಿಯ ಪರದೆಯ ಮೇಲೆ ತೋರುಬೆರಳಾಟ ಆಡಿದರೂ ಸೈ:

ಅವನು ಮಹಾಕವಿ. ಆದರೆ ಪದವಿಟ್ಟಳಿಸದುದು ಒಂದು ಅಗ್ಗಳಿಕೆ ಎಂಬ ಅಹಮಿಕೆಗೆ, ಸೋಮಾರಿತನಕ್ಕೆ ಕನ್ನಡವನ್ನು ಬರೆಯುವ ನಾವು ಒಳಗಾಗದೆ ತಿದ್ದಿ-ತೀಡಿ, ನೇರ್ಪುಗೊಳಿಸಿ ಅದನ್ನು ಪ್ರಕಟಿಸೋಣ. ಬಹುಶಃ, ಕನ್ನಡವನ್ನು ಒಪ್ಪವಾಗಿ ಬರೆಯಬಲ್ಲ ಕಡೆಯ ಒಂದೆರಡು ತಲೆಮಾರಿನವರು ನಾವು. ಉಪೇಕ್ಷೆ, ಉಡಾಫೆ ಕೂಡದು.

ಹೌದು; ನಾವು ಗದುಗಿನ ನಾರಣಪ್ಪನ ಪರಂಪರೆಯವರು. ಆದರೆ ಅವನ ಸಂತತಿಯವರಲ್ಲ. ಅವನ ಜೀನುಗಳು ನಮ್ಮವಲ್ಲ. ಅದು ಕೇವಲ “ಮೇಗಡೆ ಬಾನ್, ಕೆಳಗಡೆ ಕಾನ್ ಚಿನ್ನದ ಜೀನ್ ನಡುವೆ” ಎಂಬ ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲಿನಲ್ಲಿ ಇರುವ ಜೀನ್! ಅಂದರೆ ಒಂದು ಕೊಂಡಿ. ಒಂದು ಭಾವನಾತ್ಮಕ ಸಂಬಂಧ ಮಾತ್ರ. ನಮ್ಮ ಬರೆವಣಿಗೆಯಲ್ಲಿ ಸ್ವಂತಿಕೆಯ ಛಾಪಿರಲಿ. ನಮ್ಮ ಬರೆಹ ಮಲ್ಲಿಗೆಯೆಂಬ ಮೂರಕ್ಷರದ ಮಹಾಕಾವ್ಯದಂತಿರಲಿ. ತುಂಬೆಯಂತಹ ಸರಳಗಿತ್ತಿಯ ಪ್ರತೀಕದಂತಿರಲಿ.

-ಕೆ. ರಾಜಕುಮಾರ್

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಪರೀಕ್ಷೆಗಳು ಬಂದಾಗ ಆತಂಕವೇಕೆ…? ಆತ್ಮವಿಶ್ವಾಸದಿಂದ ಎದುರಿಸಿ…

Upayuktha

ಒತ್ತಡ ಮತ್ತು ದೇಹದ ತೂಕ: ನಿರ್ವಹಣೆ ಹೇಗೆ?

Upayuktha

ಹಿತ-ಮಿತ: ಊಟ ಬಲ್ಲವರಿಗೆ…

Upayuktha

Leave a Comment