ಗ್ರಾಮಾಂತರ ಜಿಲ್ಲಾ ಸುದ್ದಿಗಳು ಸ್ಥಳೀಯ

ಉಡುಪಿ: ಕುಂಜೂರು ಶ್ರೀ ದುರ್ಗಾ ಸೇವಾ ಸಮಿತಿ ಉದ್ಘಾಟನೆ

ಕುಂಜೂರು: ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ‘ತ್ರಿಕಾಲ ಪೂಜೆ ಹಾಗೂ ಅನ್ನಸಂತರ್ಪಣೆ’ ಸೇವೆ ಸಲ್ಲಿಸಿದ ‘ಶ್ರೀ ದುರ್ಗಾ ಸೇವಾ ಸಮಿತಿ’ಯನ್ನು ಇಂದು (ಮಾ.2) ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.

ಎಲ್ಲೂರು ಸೀಮೆಯ ಪ್ರಮುಖರು, ಗ್ರಾಮದ ಹಿರಿಯರು, ಭಕ್ತರ ಉಪಸ್ಥಿತಿಯಲ್ಲಿ ಪ್ರೊ. ರಘುರಾಮರಾವ್ ಹಾಗೂ ಎಲ್ಲೂರು ಗುತ್ತು ಪ್ರಭಾಕರ ಶೆಟ್ಟಿ ಅವರು ದೀಪ ಬೆಳಗಿ ದುರ್ಗಾ ಸೇವಾ ಸಮಿತಿಯನ್ನು ಉದ್ಘಾಟಿಸಿದರು‌. ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

‘ಕುಂಜೂರು ಶ್ರೀ ದುರ್ಗಾ ದೇವಸ್ಥಾನ’ ಹಾಗೂ ‘ಕುಂಜೂರು ಪ್ರದೇಶ’ ಎಲ್ಲೂರು ಸೀಮೆಯ ವ್ಯಾಪ್ತಿಯಲ್ಲಿರುವುದರಿಂದ ಸೀಮೆಯ ದೇವಾಲಯಗಳಲ್ಲಿರುವ ‘ನಡವಳಿಕೆ- ಸಂಪ್ರದಾಯ’ ಗಳನ್ನು‌ ‘ಶಿಷ್ಟಾಚಾರ’ವೆಂಬ ತಿಳಿವಳಿಕೆಯಲ್ಲಿ ಶ್ರೀ ದುರ್ಗಾ ಸೇವಾ ಸಮಿತಿಯನ್ನು ಸಂಘಟಿಸಲಾಗಿದೆ. ಕುಂಜೂರು ದುರ್ಗಾ ದೇವಸ್ಥಾನದ ಕೂಡುಕಟ್ಟಿನ ಸ್ಥಳವಂದಿಗರನ್ನು, ಗ್ರಾಮದ ಹಿರಿಯರನ್ನು, ನಡೆದುಕೊಳ್ಳುವ ಊರ- ಪರವೂರ ಭಕ್ತರನ್ನು ಮುಂದಿರಿಸಿಕೊಂಡು ಸಮಿತಿಯನ್ನು ರಚಿಸಲಾಗಿದೆ. ಇವರಲ್ಲಿ ಸುಲಭ ಲಭ್ಯರನ್ನು ಹಾಗೂ ಅನುಭವಿಗಳನ್ನು ಸಲಹೆಗಾರರನ್ನಾಗಿ ಹೆಸರಿಸಲಾಗಿದೆ.

ನಮ್ಮ ಸೀಮೆಯವರೇ ಆಗಿದ್ದು ಬೆಂಗಳೂರಿನಲ್ಲಿ, ಮುಂಬಯಿಯಲ್ಲಿ ಪ್ರಸಿದ್ಧ ಲೆಕ್ಕ ಪರಿಶೋಧಕರು, ಕಾನೂನು ಸಲಹೆಗಾರರಾಗಿರುವವರು, ಬಹುಮಾನ್ಯರು ಮತ್ತು ಸ್ಥಳೀಯವಾಗಿ ನೋಂದಾಯಿತ ಟ್ರಸ್ಟ್ ಗಳಲ್ಲಿ, ಸೇವಾ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿ ಅನುಭವವುಳ್ಳವರು ಸಮಿತಿಯ ಮುಖ್ಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ಉಪಯುಕ್ತ ನ್ಯೂಸ್ ಸಿಗ್ನಲ್‌ ಗ್ರೂಪಿಗೆ ಜಾಯಿನ್ ಆಗಲು ಈ ಲಿಂಕ್‌ ಬಳಸಿ

Related posts

ಸೆಪ್ಟೆಂಬರ್27: ಅಮೃತಪುರಿಯಲ್ಲಿ ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಜನ್ಮ ದಿನಾಚರಣೆ

Upayuktha

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಮಾನವ ಸಂಪನ್ಮೂಲ ವಿಭಾಗದ ಯೂಟ್ಯೂಬ್ ಚಾನೆಲ್‌ ಉದ್ಘಾಟನೆ

Upayuktha

ದ.ಕ. ಜಿಲ್ಲೆಯ ಮೊದಲ ಪ್ರಕರಣ: ಕೊರೋನಾ ಗೆದ್ದು ಊರಿಗೆ ತಲುಪಿದ ಭಟ್ಕಳದ ಯುವಕ

Upayuktha