ಕತೆ-ಕವನಗಳು

ದುರ್ಗೆಯ ನಾಲ್ಕನೇ ಅವತಾರ- ಕೂಷ್ಮಾಂಡಿನಿ ದೇವಿ

ದುರ್ಗೆಯ ನಾಲ್ಕನೇ ಅವತಾರವೇ
ಕೂಷ್ಮಾಂಡಿನಿ ದೇವಿ, ಪ್ರಸನ್ನ ವದನೆ, ಶ್ರೀ ಪೀಠೇ ಎಂದು ಕೂಡ ಕರೆವರವಳನು..

ಕೂಷ್ಮಾಂಡಿನಿ ಎಂದರರ್ಥವದು ಬೂದುಗುಂಬಳವಂತೆ, ಜ್ಞಾನ-ಅರ್ಥವ ನೀಡುವುದೇ ಈ ದೇವಿಯ ಹೆಸರಿನ ಮಹಿಮೆಯಂತೆ..

ಅವಳಿರುವಲ್ಲಿ ಬೆಳಕಿದೆ, ಜ್ಞಾನದ ಹೊಂಗಿರಣವಿದೆ, ಅಷ್ಟ ಸಿದ್ಧಿ ನವನಿಧಿಗಳ
ಪ್ರತೀಕಳಾಗಿಹಳು..

ಗ್ರಹಗಳ ಚಲನೆಯ ನಿಯಂತ್ರಿಯಿಸುವವಳು, ಸೃಷ್ಟಿಗೆ ಕಾರಣೀಭೂತಳು ಕೂಡ ಅವಳೇ..

ಮಾತೆ ಕೂಷ್ಮಾಂಡಿನಿಗೊಂದು ನಮನ, ಅವಳಿಂದಲೇ ಆಗುವುದು ಸರ್ವ ಪಾಪ ನಿವಾರಣಾ..

✍ನಾಗಶ್ರೀ. ಎಸ್. ಭಂಡಾರಿ, ಮೂಡುಬಿದಿರೆ

ಚಿತ್ರ ಕೃಪೆ : ಮಾನಸ ಫೋಟೋಗ್ರಫಿ

Related posts

ಕವನ: ಅರ್ಘ್ಯವನು ಸ್ವೀಕರಿಸಿ ಹರಸು ಶ್ರೀಕೃಷ್ಣ

Upayuktha

*ಹೃದಯಾಂತರಳಾದ ಕನ್ನಡದಾರತಿ*

Harshitha Harish

ಅಮ್ಮ

Harshitha Harish

Leave a Comment