ಕ್ಷೇತ್ರಗಳ ವಿಶೇಷ ಜಿಲ್ಲಾ ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಪೂಜಾ ಸೇವೆಗಳು ಆರಂಭ

ಮಂಗಳೂರು: ಈಗಾಗಲೇ ಪ್ರಸಿದ್ಧ ನಾಗಕ್ಷೇತ್ರ ವಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ‌ಕುಕ್ಕೆಯಲ್ಲಿ ಕೋವಿಡ್ ನಿಂದ ಸ್ಥಗಿತಗೊಳಿಸಲಾಗಿದ್ದ ಎಲ್ಲಾ ಪೂಜೆಗಳು ಹಾಗೂ ಸೇವೆಗಳು ಇಂದಿನಿಂದ ಪುನರಾರಂಭವಾಗಲಿದೆ.

ಸರ್ಪ ಸಂಸ್ಕಾರ, ಆಶ್ಲೇಷ ಬಲಿಗೆ ಹೆಸರಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದಲ್ಲಿ ಇಂದಿನಿಂದ ಸರ್ಕಾರದ ಮಾರ್ಗಸೂಚಿ ಅನುಸಾರ ಸೇವೆಗಳು ಜರುಗಲಿದ್ದು, ಈ ಬಗ್ಗೆ ಮುಜರಾಯಿ ಇಲಾಖೆ ನಿರ್ಧಾರ ಕೈಗೊಂಡಿದ್ದು, ವಿವಿಧ ಕ್ರಮಗಳೊಂದಿಗೆ ಎಲ್ಲಾ ಸೇವೆ ಆರಂಭಕ್ಕೆ ಸೂಚಿಸಿದೆ.

ಸೂಚನೆಗಳು ಹೀಗಿವೆ:

 * ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ನಡೆಸಲು 150 ರಿಂದ 200 ಭಕ್ತರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಇದೀಗ 30 ಜನರಿಗೆ ಮಾತ್ರ ಅವಕಾಶ.

* ಒಂದು ಟಿಕೆಟ್​ನಲ್ಲಿ ನಾಲ್ವರು ಪೂಜೆಗೆ ಬರುವ ಅವಕಾಶವಿತ್ತು, ಆದರೆ  ಇದೀಗ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

* ಶ್ರೀ ಕ್ಷೇತ್ರದ ವಸತಿ ಗೃಹದಲ್ಲಿ ತಂಗುವವರಿಗೂ ನಿರ್ಬಂಧ ವಿಧಿಸಲಾಗಿದ್ದು, ಇಂತಿಷ್ಟು ದಿನ ಉಳಿಯುವಂತೆ ನಿಗದಿ ಮಾಡಲಾಗಿದೆ.

* ಕೇವಲ ಸೇವಾರ್ಥಿಗಳಿಗೆ ಮಾತ್ರ ಭೋಜನವಿರುತ್ತದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಕೋವಿಡ್ ಕಾರಣದಿಂದ ಕೋಟ್ಯಾಂತರ ರೂಪಾಯಿ ಆದಾಯ ನಷ್ಟ ಉಂಟಾಗಿದ್ದು, ಆರ್ಥಿಕವಾಗಿ ಕುಸಿದ ಪರಿಣಾಮ ಈ ರೀತಿ ಕ್ರಮ ಕೈಗೊಂಡಿದ್ದಾರೆ.

ಕಳೆದ ವರುಷಕ್ಕೆ ಹೋಲಿಸಿದರೆ 21 ಕೋಟಿ ಆದಾಯ ಕುಸಿತ ಕಂಡಿದ್ದು, ರಾಜ್ಯದ ನಂಬರ್​ ಒನ್​ ಮುಜರಾಯಿ ದೇವಾಲಯವಾಗಿದ್ದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೊರೊನಾ ಸಂಕಷ್ಟ ದಿಂದ ನಷ್ಟ ಸಂಭವಿಸಿದೆ.

Related posts

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ‌ ಸಿಂಧೂ ರೂಪೇಶ್ ವರ್ಗಾವಣೆ: ಡಾ.ರಾಜೇಂದ್ರ ಕೆ.ವಿ ನೂತನ ಡಿಸಿ

Harshitha Harish

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳ ದರ್ಶನಕ್ಕೆ ಜೂನ್ 8ರಿಂದ ವ್ಯವಸ್ಥೆ

Upayuktha

ಅವಳಿ-ಜವಳಿ ಮಕ್ಕಳಿಬ್ಬರ ಎಸ್ಎಸ್ಎಲ್ ಸಿ ಫಲಿತಾಂಶ ಸೇಮ್ ಟು ಸೇಮ್

Harshitha Harish

Leave a Comment

error: Copying Content is Prohibited !!