ಸಮುದಾಯ ಸುದ್ದಿ ಹಬ್ಬಗಳು-ಉತ್ಸವಗಳು

ಕ್ಷಮಾಗುಣ ಕಲಿಯೋಣ, ದ್ವೇಷದ ವೈರಸ್ ತೊಡೆದು ಹಾಕೋಣ: ಸೌಹಾರ್ದ ಕ್ರಿಸ್ಮಸ್‌ ಸಂದೇಶ

ಮಂಗಳೂರು: “ಬಡತನದಲ್ಲಿ ಹುಟ್ಟಿ ಬೆಳೆದು, ನಕ್ಷತ್ರವಾಗಿ ದೇವಪುತ್ರನೇ ಧರಗೆ ಬಂದ ಹಬ್ಬ ಕ್ರಿಸ್ಮಸ್ ಎಲ್ಲರಿಗೂ ಸೇರಿದ ಸಂಭ್ರಮದ ಹಬ್ಬ” ಎಂದು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳಾದ ವಂ. ಸಿಪ್ರಿಯನ್ ಪಿಂಟೊ, ಆಶೀರ್ವಚನದ ಸಂದೇಶ ನೀಡಿದರು.

ಸದ್ಭಾವನಾ ವೇದಿಕೆ ಉಳ್ಳಾಲ ಮತ್ತು ಪೊಸಕುರಲ್ ಬಳಗದ ಆಶ್ರಯದಲ್ಲಿ ಏರ್ಪಡಿಸಿದ ಸೌಹಾರ್ದ ಕ್ರಿಸ್ಮಸ್  ಸಮ್ಮಿಲನವನ್ನು ದೀಪ ಪ್ರಜ್ವಲನೆಗೈದು, ಉದ್ಘಾಟಿಸಿ ಮಾತನಾಡಿದ ವಂ. ಸಿಪ್ರಿಯನ್ ಪಿಂಟೊ, ಕ್ರಿಸ್ಮಸ್ ಹಬ್ಬ ಕೇವಲ ಕ್ರಿಶ್ಚಿಯನ್ನರಿಗೆ ಸೇರಿದ ಹಬ್ಬ ಮಾತ್ರವಲ್ಲ, ಜಗತ್ತಿನ ಎಲ್ಲಾ ಸಮುದಾಯದವರು ಸಂಭ್ರಮಿಸುವ ಹಬ್ಬ ಎಂದು ಆಶೀರ್ವಚನ ನೀಡಿದರು.

ಪೊಸಕುರಲ್ ಬಳಗದ ಸಂಚಾಲಕ, ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತು ಸದ್ಭಾವನಾ ವೇದಿಕೆಯ ಸದಸ್ಯ ಮಂಗಳೂರು ಪ್ರದೇಶ ದಕ್ಷಿಣ ವಲಯ ಕ್ಯಾಥೊಲಿಕ್ ಸಭಾ ಅಧ್ಯಕ್ಷ ಆಲ್ವಿನ್ ಡಿ’ಸೋಜ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಕೊರೊನ ಜಗತ್ತಿನಿಂದ ಇವತ್ತಲ್ಲ ನಾಳೆ ಹೋಗಬಹುದು, ಅದಕ್ಕೊಂದು ಆಯುಷ್ಯದ ಕಾಲಮಿತಿ ಇದೆ, ಆದರೆ ಸೇಡು, ದ್ವೇಷದ ವೈರಸ್ಸಿಗೆ ಕೊನೆ ಇಲ್ಲ, ನಾವು ಕ್ಷಮೆಯ ಗುಣವನ್ನು ಕಲಿಯಬೇಕು, ಸಾರಬೇಕು ಇದುವೆ ಕ್ರಿಸ್ಮಸ್ ಹಬ್ಬದ ಪ್ರಮುಖ ಸಂದೇಶ ಎಂದು ಜೆಪ್ಪು ಸಂತ ಅಂಥೋನಿ ಆಶ್ರಮದ ನಿರ್ದೇಶಕರು, ವಂ. ಓನಿಲ್ ಡಿ’ಸೋಜ ಸೌಹಾರ್ದ ಸಂದೇಶ ನೀಡಿದರು.

ಕೊರೊನದಿಂದಾಗಿ ನಾವು ಅಪನಂಬಿಕೆ ಒಳಗಾಗಿದ್ದೆವು, ಆದರೆ ಈಗ ಕೊರೊನ ನಮಗೆ ಅರ್ಥ ಆಗಿದೆ ಅಪನಂಬಿಕೆ ದೂರವಾಗಿದೆ, ಹಾಗೆಯೆ ನಾವು ಪರಸ್ಪರರನ್ನು ತಿಳಿದುಕೊಂಡಾಗ, ಆಚರಣೆಗಳನ್ನು ಅರ್ಥೈಸಿಕೊಂಡಾಗ ನಮ್ಮಲ್ಲಿರುವ ಅಪನಂಬಿಕೆಗಳು ದೂರವಾಗಲು ಸಾಧ್ಯ, ಎಂದು ಸನ್ಮಾರ್ಗ ವಾರಪತ್ರಿಕೆಯ ಸಂಪಾದಕರು, ಅಬ್ದುಲ್ ಖಾದರ್ ಕುಕ್ಕಿಲ ಸೌಹಾರ್ದ ಸಂದೇಶ ನೀಡಿದರು.

ಎಲ್ಲಾ ಧರ್ಮದ ಸಾರಗಳು ಒಂದೇ, ದಿವ್ಯ ಸಂದೇಶಗಳು ಒಂದೆ, ಕಟ್ಟಿಗೆಯಿಂದ ಉರಿಯುವ ಬೆಂಕಿಯ ಆಕಾರ ಬೇರೆ ಬೇರೆ ಆಗಿರಬಹುದು, ಆದರೆ ಬೆಂಕಿ ಒಂದೇ, ಸತ್ ಭಾವನೆ ಇದ್ದಲ್ಲಿ ಸಾಮರಸ್ಯಕ್ಕೆ ಕೊರತೆ ಖಂಡಿತಾ ಬಾರದು, ಎಂದು ಯಕ್ಷಗಾನ ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಸೌಹಾರ್ದ ಸಂದೇಶದ ಮಾತುಗಳನ್ನಾಡಿದರು.

ಸದ್ಭಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿ ಕ್ರಿಸ್ಮಸ್ ಕೇಕ್ ಕತ್ತರಿಸಿ ಕ್ರಿಸ್ಮಸ್ ಸಂಭ್ರಮಾಚರಣೆಯ ಸಂದೇಶ ನೀಡಿದರು.

ಸದ್ಭಾವನಾ ವೇದಿಕೆಯ ಗೌರವಾಧ್ಯಕ್ಷ ಸದಾನಂದ ಬಂಗೇರ, ಜಿಲ್ಲಾ ಧಾರ್ಮಿಕ ಪರಿಷತ್ ನ ಮಾಜಿ ಸದಸ್ಯ ಕೃಷ್ಣ ಗಟ್ಟಿ, ತೊಕ್ಕೊಟ್ಟು ಮಸ್ಜಿದುಲ್ ಹುದಾ ಅಧ್ಯಕ್ಷ ಸಾಗರ್ ಇಸ್ಮಾಯಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸದ್ಭಾವನಾ ವೇದಿಕೆಯ ಸದಸ್ಯ, ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿದರು. ಸದ್ಭಾವನಾ ವೇದಿಕೆಯ ಉಪಾಧ್ಯಕ್ಷ ಜಾಸ್ಲಿನ್ ಡಿಸೋಜ ಪ್ರಸ್ತಾವನೆಗೈದರು. ಕೋಶಾಧಿಕಾರಿ ಮೆಲ್ವಿನ್ ಸಿ. ಡಿ’ಸೋಜ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅನ್ವರ್ ವಂದಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಹಣತೆಯಾಗಲಿ ದಾರಿದೀಪ; ಬದುಕಾಗಲಿ ಬೆಳಕಿನ ಬುತ್ತಿ

Upayuktha

ಬೆಳಕಿನ ಹಬ್ಬ ದೀಪಾವಳಿ ತರದಿರಲಿ ನಿಮ್ಮ ಬಾಳಿಗೆ ಅಂಧಕಾರ

Upayuktha

ಸಂಕ್ರಾಂತಿ,.. ಆಗಲಿ ಒಳಿತಿನೆಡೆಗೆ ಸಾಗುವ ಮನಸುಗಳ ಕ್ರಾಂತಿ

Upayuktha