ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಕೆಲಸ ಫಲ ಕೊಡಬೇಕಾದರೆ ಶ್ರದ್ಧೆ ಮುಖ್ಯ: ಅರವಿಂದ ಕುಡ್ಲ

ವಿವೇಕಾನಂದ ಕಾಲೇಜಿನ ಎನ್‍ಎಸ್‍ಎಸ್ ಶಿಬಿರದಲ್ಲಿ ‘ಚಿತ್ರಗ್ರಹಣ’ ಕುರಿತು ಉಪನ್ಯಾಸ

ಪುತ್ತೂರು: ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ಬಲವಾದ ಉದ್ದೇಶ ಇದ್ದೇ ಇರುತ್ತದೆ. ಆದರೆ ಅದನ್ನು ಗಣನೆಗೆ ತೆಗೆದುಕೊಳ್ಳದೆ ಕೆಲಸ ಮಾಡುತ್ತೇವೆ. ಪ್ರತಿಯೊಂದು ಕೆಲಸ ನಮಗೆ ಫಲಕೊಡಬೇಕಾದರೆ ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ಇರಬೇಕು ಎಂದು ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅರವಿಂದ ಕುಡ್ಲ ಹೇಳಿದರು.

ಅವರು ಸಾಜ ಸರಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ನಡೆಯುತ್ತಿರುವ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಚಿತ್ರಗ್ರಹಣ’ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಶುಕ್ರವಾರ ಮಾತನಾಡಿದರು.

ನಾವು ಕಾಣುವಂತಹ ಕನಸುಗಳು ಭವಿಷ್ಯಕ್ಕೆ ಪೂರಕವಾಗುವಂತಿರಬೇಕು. ಕಂಡಂತಹ ಕನಸುಗಳನ್ನು ನನಸಾಗಿಸುವಾಗ ಜೀವನಕ್ಕೆ ಬೇಕಾದ ಎಲ್ಲಾ ಪಾಠಗಳನ್ನು ಕಲಿಯುತ್ತೇವೆ. ಹಾಗೆಯೇ ಚಿತ್ರಗ್ರಹಣವು ಇಂದು ಹಲವು ಮಂದಿಗೆ ಹವ್ಯಾಸವಾಗಿದೆ. ಇಂತಹ ಹವ್ಯಾಸವೇ ಹಲವರ ಜೀವನಕ್ಕೆ ದಾರಿದೀಪವಾಗಿದೆ ಎಂದರಲ್ಲದೆ ಮೊಬೈಲ್ ಅನ್ನು ನಾವು ಬಳಸಬೇಕೇ ಹೊರತು ಮೊಬೈಲ್ ನಮ್ಮನ್ನು ಬಳಸಬಾರದು. ಏಕೆಂದರೆ ಗುರಿಯನ್ನು ಸಾಧಿಸುವಲ್ಲಿ ನಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಆಗ ಮಾತ್ರ ಬದುಕಿನ ಚಿತ್ರಣ ಮೂಡುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಸೆಂಟ್ರಲ್ ಪುತ್ತೂರಿನ ಅಧ್ಯಕ್ಷ ರೋ.ಸಂತೋಷ್ ಶೆಟ್ಟಿ ಸಾಜ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸೇವಾ ಮನೋಭಾವನೆಯಿಂದ ತೊಡಗಿಸಿಕೊಳ್ಳಬೇಕು. ಶಿಬಿರದಲ್ಲಿ ಕಲಿತ ಅನುಭವದ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಪುತ್ತೂರು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ನಾರಾಯಣ ನಾಯ್ಕ ಅಂಬಟೆತ್ತಡ್ಕ, ಬಲ್ನಾಡು ಗ್ರಾ.ಪಂ. ಸದಸ್ಯ ಟಿ. ಇದ್ದುಕುಂಞ ಹಾಜಿ, ದೈವ ನರ್ತಕ ಕುಟ್ಟಿ ನಲಿಕೆ ಕೂಟೇಲು, ಆರ್ಯಾಪು ಗ್ರಾಮ ಸಹಾಯಕ ಉಮೇಶ್ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಾದ ಧನ್ಯಶ್ರೀ, ರಶ್ಮಿಕಾ, ಧನ್ಯಶ್ರೀ ಪ್ರಾರ್ಥಿಸಿದರು. ಶಿಬಿರಾರ್ಥಿ ಮಲ್ಲಿಕಾ ಸ್ವಾಗತಿಸಿ, ಆತ್ಮಿಕಾ ವಂದಿಸಿದರು. ಶಿಬಿರಾರ್ಥಿ ಅಕ್ಷಯ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

(ಉಪಯುಕ್ತ ನ್ಯೂಸ್ ಸುದ್ದಿಜಾಲ)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಯಕ್ಷಗಾನ ಶಿಬಿರದಲ್ಲಿ ತಾಳಮದ್ದಳೆ ಪ್ರಾತ್ಯಕ್ಷಿಕೆ

Upayuktha

ಜಿಲ್ಲಾ ಕರಾವಳಿ ಉತ್ಸವಕ್ಕೆ ಅದ್ದೂರಿ ಚಾಲನೆ: ಬೃಹತ್ ಸಾಂಸ್ಕೃತಿಕ ಮೆರವಣಿಗೆ, ದಿಬ್ಬಣ

Upayuktha

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಅಭಿರಾಮ ಕಶ್ಯಪನಿಗೆ ಸ್ವರ್ಣಾಂಕುರ ಪ್ರಶಸ್ತಿ

Upayuktha