ಕೃಷಿ ಲೇಖನಗಳು

ಕೃಷಿಕರನ್ನು ಬದುಕಲು ಬಿಡಿ, ರಾಜಕೀಯ ಅಸ್ತ್ರವಾಗಿಸಬೇಡಿ

ಪ್ರಾತಿನಿಧಿಕ ಚಿತ್ರ (ಕೃಪೆ: ಬಿಸಿನೆಸ್ ಟುಡೇ.ಇನ್)

“ಕೃಷಿತೇೂ ನಾಸ್ತಿ ದುರ್ಭಿಕ್ಷಂ” ಎಂದು ನಂಬಿ ನಡೆದ ನೆಲವಿದು. ರೆೈತನೇ ಈ ದೇಶದ ಬೆನ್ನೆಲುಬು. ಈ ಎಲ್ಲಾ ಉದ್ಘೇೂಷಗಳು ನಿಜವಾದ ರೂಪದಲ್ಲಿ ಪಡಿಮೂಡಿ ಬರಬೇಕಾದರೆ ಇನ್ನಷ್ಟು ಸುಧಾರಣೆಗಳು ಬದಲಾವಣೆಗಳು ಕೃಷಿ ಕ್ಷೇತ್ರದಲ್ಲಿ ಆಗ ಬೇಕಾಗಿದೆ. ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳ ಅನಂತರವೂ ಕೃಷಿಕ ಪ್ರತಿಯೊಂದಕ್ಕೂ ಅಂಗಲಾಚಿ ನಿಲ್ಲಬೇಕಾದ ಪರಿಸ್ಥಿತಿ ಇಂದಿಗೂ ನಮ್ಮಲ್ಲಿ ಇದೆ ಅಂದರೆ ಇದಕ್ಕೆ ಕಾರಣರಾರು ಅನ್ನುವುದನ್ನು ಮತ್ತೆ ಮನನ ಮಾಡ ಬೇಕಾಗಿದೆ.

ಕೃಷಿಕರಿಗಾಗಿ ಏನಾದರೂ ಸುಧಾರಣೆ ತರೇೂಣ ಅಂದಾಗ ಅದನ್ನು ಪರಾಮರ್ಶಿಸುವುದನ್ನು ಬಿಟ್ಟು ರೆೈತರನ್ನು ಮುಷ್ಕರ ಬಂದ್‌ನ ಹೆಸರಿನಲ್ಲಿ ರಸ್ತೆಯಲ್ಲಿ ತಂದು ನಿಲ್ಲಿಸುವ ಕೆಲಸ ರಾಜಕೀಯ ಪಕ್ಷಗಳು ಮಾಡುತ್ತಿರುವುದು ಅತ್ಯಂತ ಖೇದಕರ.

ಹಾಗಾದರೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸಿ ಅನುಮತಿ ಪಡೆದ 2020ರ ಕೃಷಿಕರ ಕಾಯಿದೆ ಏನು ಹೇಳುತ್ತದೆ ಅನ್ನುವುದನ್ನು ವಿಮರ್ಶೆಮಾಡ ಬೇಕಾದದ್ದು ಸಕಾಲವೂ ಹೌದು.

1. ಈ ಕಾಯಿದೆ ಹೇಳವಂತೆ ಪ್ರತಿಯೊಬ್ಬ ರೆೈತ ಉತ್ಪಾದಕನ್ನೂ ಹೌದು; ಅದೇ ರೀತಿ ವಿತರಕನೂ ಆಗಿರುವ ವ್ಯವಸ್ಥೆ ಕಲ್ಪಿಸುತ್ತದೆ.

2. ಕೃಷಿಕರ ಸಬಲೀಕರಣ ಮತ್ತು ರಕ್ಷಣೆಯೇ ಮುಖ್ಯ ಗುರಿ.

3. ಕೃಷಿಕರು ಬೆಳೆದ ಪದಾಥ೯ಗಳಿಗೆ ದರದ ಖಾತ್ರಿ ಇರಬೇಕು ಅನ್ನವ ಒಡಂಬಡಿಕೆ

4. 2022ರ ಸುಮಾರಿಗೆ ಕೃಷಿಕರ ಆದಾಯ ಪ್ರಮಾಣ ದ್ವಿಗುಣ ಗೊಳಿಸಬೇಕು.

5. ಕೃಷಿ ಮಾರುಕಟ್ಟೆಯ ಧಾರಣೆ ಕೃಷಿಕರೇ ನಿರ್ಧರಿಸವಂತಾಗಬೇಕು ಹೊರತು ಸರಕಾರವಾಗಲಿ ಮಧ್ಯವರ್ತಿಗಳಲ್ಲ.

6. ರೆೈತರು ತಾವು ಬೆಳೆದ ವಸ್ತುಗಳನ್ನು ಮಧ್ಯವತಿ೯ಗಳ ಹಿಡಿತ ದಲ್ಲಿರುವ ಮಂಡಿಯಲ್ಲಾಗಲಿ ಅಥವಾ ಎ.ಪಿ.ಎಂ.ಸಿ ಯಲ್ಲಾಗಲಿ ಮಾರ ಬೇಕಾಗಿಲ್ಲ. ತಮಗೆ ಯಾವುದು ಅನುಕೂಲವಾಗುತ್ತದೊ ಅಲ್ಲಿ ಮಾರುವ ಅವಕಾಶ ಕಲ್ಪಿಸುವ ಕಾಯಿದೆ ಇದು. ಇದರಿಂದ ಈ ಎಲ್ಲಾ ಶೇೂಷಕ ಮಧ್ಯವರ್ತಿಗಳ ಕಪಿಮುಷ್ಟಿಯಿಂದ ರೆೈತ ಮುಕ್ತನಾಗ ಬೇಕೆಂಬ ಉದ್ದೇಶವಿದೆ.

7. ಕೃಷಿ ಒಂದು ಉದ್ಯಮದ ತರದಲ್ಲಿ ಸ್ಪಧಾ೯ತ್ಮಕವಾಗಿ ಬೆಳೆದು ಬರಲು ಸಾಧ್ಯವಾಗ ಬಹುದು ಅನ್ನುವ ಪ್ರಯೇೂಗವಿದು.

8. ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ಬರಬೇಕು. ತಂತ್ರಜ್ಞಾನ ಅಳವಡಿಸಬೇಕು ಅನ್ನುವ ಕೂಗು ಮೊದಲಿನಿಂದಲೂ ಕೇಳಿದ್ದೇವೆ. ಅದಕ್ಕೊಂದು ಜೀವ ತುಂಬುವ ಪ್ರಯತ್ನ ಇದಾಗ ಬಹುದು ಎಂಬ ವಿಶ್ವಾಸ ರೆೈತರದ್ದು. ಅದನ್ನೂ ವಿರೇೂಧಿಸುತ್ತೇವೆ. ಅಂದರೆ ರೆೈತರ ಬಗ್ಗೆ ನಮಗೆಷ್ಟು ಕಾಳಜಿ ಇದೆ ಅನ್ನುವುದು ವೇದ್ಯವಾಗತ್ತದೆ.

9. ಪ್ರತಿಯೊಂದು ವ್ಯವಹಾರದಲ್ಲೂ ನಾವು ಅಂತರ ರಾಜ್ಯ; ಜಾಗತೀಕರಣ ದ ನೆಲೆಯಲ್ಲಿ ಬೆಳೆಯ ಬೇಕೆಂಬ ದೂರದೃಷ್ಟಿ ಯೋಜನೆಗಳು ಇರುತ್ತವೆ. ಆದರೆ ಕೃಷಿ ವಲಯಕ್ಕೆ ಬಂದಾಗ ನಮ್ಮ ಊರು ಬಿಟ್ಟು ಹೊರಗೆ ಆಲೇೂಚನೆಯೇ ಮಾಡುವುದಿಲ್ಲ. ಉದಾ: ಮೀನುಗಾರಿಕೆ ನೇೂಡಿ ಇಂದು ಈ ಉದ್ಯಮ ಜಗತ್ತಿನ ಕಡೆಗೆ ವಿಸ್ತರಿಸಿದ ಕಾರಣ ಮೀನುಗಾರರ ಬದುಕು ಸಂಪನ್ನಗೊಂಡಿದೆ. ಅದು ಬರೇ ನಮ್ಮೂರಿಗೆ ಮೀಸಲಾಗಿದ್ದರೆ ಮೀನುಗಾರಿಕೆ ವ್ಯವಸ್ಥೆ ಏನಾಗುತ್ತಿತ್ತು. ಸ್ವಲ್ಪ ಯೇೂಚಿಸಿ.?

ಈ ಎಲ್ಲಾ ದೊಡ್ಡ ಕಾನುನಾತ್ಮಕ ಪದಗಳು ನಮಗೆ ಅರ್ಥವಾಗದಿರಬಹುದು ಅದಕ್ಕಾಗಿ ನಿಮಗಾಗಿಯೇ ನಮ್ಮೂರ ತರಕಾರಿ ಬೆಳೆಯುವ ಕುಡುಬಿ ಸಮುದಾಯದ ಒಂದು ಪ್ರಯೇೂಗವೇ ಇದಕ್ಕೆ ಜೀವಂತ ಸಾಕ್ಷಿ. ಮೊದಮೊದಲು ನಮ್ಮೂರ ಈ ಕೃಷಿಕರು ಬೆಳೆದು ವ್ಯಾಪಾರಕ್ಕಾಗಿ ಮಧ್ಯವತಿ೯ಗಳನ್ನು ಅವಲಂಬಿಸಿದ್ದರು. ಆಗ ಅವರಿಗೆ ಸಿಗುತ್ತಿದ್ದ ಲಾಭ ತೀರ ಕಡಿಮೆ. ಕೃಷಿ ಮಾಡಿ ಕೆೈ ತೊಳೆದು ಕೊಳ್ಳಬೇಕಾದ ಸ್ಥಿತಿ.

ಆದರೆ ಕ್ರಮೇಣ ಅವರಿಗೂ ಮಾರುಕಟ್ಟೆಯ ಮಾಹಿತಿ ಸಿಕ್ಕಿತು. ಬ್ಯಾಂಕ್ ಕಡೆಗೂ ಮುಾಖ ಮಾಡಿದರು. ಸ್ವಂತ ಸಾಗಾಟದ ವಾಹನವನ್ನು ಖರೀದಿಸಿದರು. ತಾವು ಕಷ್ಟ ಪಟ್ಟುಬೆಳೆದ ತರಕಾರಿಗಳನ್ನು ಹೊರ ಮಾರುಕಟ್ಟೆಯ ಕಡೆಗೆ ತಂದು ತಾವೇ ಮಾರುವ ಧೆೈಯ೯ ಮಾಡಿದರು. ಇದರಿಂದ ಮಧ್ಯವರ್ತಿಗಳು ದೂರವಾದರು. ಈ ಬಡ ಕೃಷಿಕರ ಬದುಕು ಹಸನಾಯಿತು. ಆರ್ಥಿಕವಾಗಿ ಆದಾಯವೂ ದ್ವಿಗುಣ ವಾಯಿತು.

ಈಗ ಇಂತಹ ಹಳ್ಳಿಯ ಪ್ರತಿಯೊಬ್ಬ ರೆೈತನ ಕೆೈಯಲ್ಲಿ ಸ್ವಂತ ವಾಹನವಿದೆ ಅವರ ಮಕ್ಕಳು ಕೂಡಾ ಆಧುನಿಕ ಶಿಕ್ಷಣದ ಕಡೆಗೆ ದೃಷ್ಟಿ ಹರಿಸಿದ್ದಾರೆ. ಒಂದುವೇಳೆ ಈ ರೆೈತರು ನಮ್ಮ ರಾಜಕಾರಣಿಗಳ ಮಾತು ಕೇಳಿ ಹೆದ್ದಾರಿಯಲ್ಲಿ ಮಂಡಿಯೂರಿ ಕೂತಿದ್ದರೆ ಇಂದಿಗೂ ಅವರು ಈ ಮತ ಪೆಟ್ಟಿಗೆಯ ರಾಜಕಾರಣಿಗಳ ಎದುರು ಮಂಡಿಯೂರ ಬೇಕಿತ್ತು. ಇದನ್ನೇ ಕರೆಯುವುದು ಬದಲಾವಣೆ, ಸುಧಾರಣೆ. ರೆೈತರಲ್ಲಿ ತಾವು ಬೆಳೆಯಬೇಕು ಅನ್ನುವ ಇಚ್ಛಾ ಶಕ್ತಿ ಬೇಕು. ಆಗ ಮಾತ್ರ ಕೃಷಿಕ ಸರಕಾರವನ್ನು ಅಲ್ಲಾಡಿಸುವ ಪ್ರಜೆಯಾಗಿ ನಿಲ್ಲ ಬಲ್ಲವನಾಗುತ್ತಾನೆ.

– ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಚಾಲಕ ಅನ್ನೊ ಸಮಾಜ ಸೇವಕ

Harshitha Harish

ಜೇನು ಕೃಷಿ ಮಾಹಿತಿ: ಮೊಜೆಂಟಿ ಜೇನು ಕುಟುಂಬ ಪಾಲು ಮಾಡುವುದು ಹೇಗೆ…?

Upayuktha

ಅಂತರಂಗದ ಚಳವಳಿ: ಸಾವು-ಸೋಲು-ವಿಫಲತೆಯನ್ನು ಮೀರಿ ನಿಲ್ಲುವುದೇ ಬದುಕು

Upayuktha