ನಗರ ಸ್ಥಳೀಯ

ಮುಕ್ಕ ಪರಿಸರದಲ್ಲಿ ಜನರ ಬದುಕು ಮುಕ್ಕಾಗಿಸಿದ ಫಿಶ್‌ಮೀಲ್‌ಗಳ ಮಾಲಿನ್ಯ

ರಾಷ್ಟ್ರೀಯ ಮಟ್ಟದಲ್ಲಿ ಸರ್ಫಿಂಗ್ ಆಗುವ ಕಡಲ ತೀರ |


ಎನ್‌ಐಟಿಕೆ ಸುರತ್ಕಲ್‌, ಶ್ರೀನಿವಾಸ ಮೆಡಿಕಲ್‌ ಕಾಲೇಜು, ಹತ್ತಾರು ಹಳ್ಳಿಗಳಿರುವ ಪ್ರದೇಶ

ಮಂಗಳೂರು: ಸುರತ್ಕಲ್ ಬಳಿಯ ಮುಕ್ಕ ಹಾಗೂ ಸಸಿಹಿತ್ಲು ಕಡಲತೀರ ಪ್ರತಿವರ್ಷ ರಾಷ್ಟಮಟ್ಟದ ಸರ್ಫಿಂಗ್ ಸ್ಪರ್ದೆ ನಡೆಯುತ್ತಿದ್ದ ಪ್ರದೇಶ. ಅಲ್ಲಿಗೆ ದೇಶದ ವಿವಿಧ ಕಡೆಯಿಂದ ಸರ್ಫಿಂಗ್ ಪಟುಗಳು ಬರುತ್ತಾರೆ. ಆದ್ರೆ ಆ ಜಾಗದಲ್ಲಿ ಈಗ ಮೂಗು ಮುಚ್ಚಿಕೊಳ್ಳದೆ ನಿಲ್ಲಲು ಆಗದು. ಅಲ್ಲಿನ ಜನರು ಮನೆಯಿಂದ ಹೊರ ಬರಲು ಆಗುತ್ತಿಲ್ಲ. ಕಡಲ ತೀರದಲ್ಲಿ ನೀರಿಗಿಳಿಯಲು ಹಿಂದೆ ಮುಂದೆ ನೋಡುವಂತಾಗಿದೆ. ಯಾಕೆಂದ್ರೆ ಇಲ್ಲಿರೋ ಮೂರು ಫಿಶ್ ಮಿಲ್ ಗಳು. ಹೆಚ.ಕೆ.ಎ ಬಾವಾ ಫಿಶ್ ಮಿಲ್, ಬಾವಾ ಫಿಶ್ ಮೀಲ್ ಸನ್ಸ್ ಮತ್ತು ಮುಕ್ಕ ಸೀಫುಡ್ ಇಂಡಸ್ಟ್ರೀಸ್.

ಈ ಫಿಶ್ ಮಿಲ್ ಇರೋ ಪ್ರದೇಶದಲ್ಲಿರೋ ಸುಂದರ ಕಡಲ ತೀರದಲ್ಲಿ ಪ್ರತಿವರ್ಷ ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಗೋವಾ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಮಾತ್ರವಲ್ಲದೇ ವಿದೇಶಗಳಿಂದಲೂ ನೂರಾರು ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಸರ್ಫಿಂಗ್‌ನಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಈಗ ಇಲ್ಲಿನ ಪ್ರದೇಶದಲ್ಲಿ ವಿದೇಶಗಳಿಂದ ಬರುವವರಿರಲಿ ಇಲ್ಲಿನ ಸ್ಥಳೀಯರೇ ನಿಲ್ಲಲು ಆಗುತ್ತಿಲ್ಲ.

ಮನೆಯಿಂದ ಹಗಲು ವೇಳೆಯಲ್ಲೂ ಛತ್ರಿ ಹಿಡಿದು ಬರಬೇಕಾಗುತ್ತದೆ. ಇನ್ನು ಇಲ್ಲಿ ಇರಬೇಕು ಅಂದ್ರೆ ಮೂಗು ಮುಚ್ಚಿಕೊಂಡೆ ಇರಬೇಕಾಗುತ್ತೆ. ಇದಕ್ಕೆ ಕಾರಣ ಈ ಮೂರು ಫಿಶ್ ಮಿಲ್ ಗಳು. ಈ ಪ್ರದೇಶದಲ್ಲಿ ಮೂರು ಫಿಶ್ ಮಿಲ್ ಗಳು ಇವೆ. ಪ್ರಭಾವಿಗಳಿಗೆ ಸೇರಿದ ಈ ಮೂರು ಫಿಶ್ ಮಿಲ್ ಗಳಿಂದ ಕಳೆದು ಮೂರ್ನಾಲ್ಕು ತಿಂಗಳಿಂದ ಈ ಸಮಸ್ಯೆ ಉಂಟಾಗಿದೆ. ಕರಗಿದ ಮೀನುಗಳನ್ನು ತಂದು ಇಲ್ಲಿ ಎಣ್ಣೆ ತೆಗೆಯುತ್ತಾರೆ. ದಿನದ 24 ಗಂಟೆ ಫಿಶ್ ಮಿಲ್ ರನ್ ಮಾಡುತ್ತಾರೆ. ಇದ್ರಿಂದ ಇಲ್ಲಿ ಮೀನಿನ ಕೊಳೆತ ವಾಸನೆಯೊ ವಾಸನೆ. ಇನ್ನು 24 ಗಂಟೆ ಕೂಡ ರನ್ ಮಾಡೋದ್ರಿಂದ ಇಲ್ಲಿನ ಸ್ಥಳೀಯರಿಗೆ ವಾಸಿಸಲು ತೊಂದರೆಯಾಗಿದೆ.

ಒಣ ಮೀನಿನ ಪುಡಿ ಗಾಳಿಯಲ್ಲಿ ಹಾರಿ ಬಂದು ಮೈಮೇಲೆ ಬೀಳುವುದರಿಂದ ಮನೆಯಿಂದ ಹೊರ ಹೋಗುವಾಗಿ ಆತಂಕಪಡಬೇಕಾಗಿದೆ. ಕೇರಳದಲ್ಲಿ ಫಿಶ್ ಮಿಲ್ ಬಂದ್ ಆಗಿರುವುರಿಂದ ಅಲ್ಲಿನ ಕೊಳೆತ ಮೀನುಗಳು ಕೂಡ ಇಲ್ಲಿಗೆ ಸರಬರಾಜಾಗುತ್ತಿದೆ‌. ಈ ಫಿಶ್ ಮಿಲ್ ಗಳಿಂದ ಕೆಟ್ಟ ನೀರನ್ನು ನೇರವಾಗಿ ಸಮುದ್ರಕ್ಕೆ ಬಿಡಲಾಗುತ್ತಿದೆ. ಇದರಿಂದ ಕಡಲು ಕಲುಷಿತಗೊಳ್ಳುತ್ತಿದೆ. ಇದರಿಂದ ಬರುವ ಹೊಗೆಯ ಪ್ರಮಾಣ ಕೂಡ ದಟ್ಟವಾಗಿದೆ.

ಈ ಫಿಶ್ ಮಿಲ್ ಗಳಲ್ಲಿ ಬಾಯ್ಲರ್ ಬಳಸಲಾಗುತ್ತಿದೆ. ಜನವಸತಿ ಪ್ರದೇಶದಲ್ಲಿ ಬಾಯ್ಲರ್ ಬಳಸುತ್ತಿರುವುದು ಕೂಡ ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಆತಂಕ ಉಂಟು ಮಾಡಿದೆ. ಇದೇ ಪ್ರದೇಶದಲ್ಲಿ ಒಂದು ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಅದರ ಹಾಸ್ಟೆಲ್ ಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.

ಈ ಎಲ್ಲದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ಕೂಡ ಪ್ರಭಾವಿಗಳು ಅನ್ನುವ ಕಾರಣಕ್ಕೆ ಇನ್ನೂ ಕ್ರಮ ತೆಗೆದುಕೊಂಡಂತೆ ಕಾಣುತ್ತಿಲ್ಲ. ಅಲ್ಲದೇ ಸ್ಥಳೀಯ ಕಾರ್ಪೊರೇಟರ್ ಈ ಬಗ್ಗೆ ಚುನಾವಣೆಗೂ ಮುನ್ನ, ಫಿಶ್ ಮಿಲ್ ನಿಂದ ಆಗುವ ಸಮಸ್ಯೆಯನ್ನು ಪರಿಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಈಗ ಆ ವಿಚಾರದ ಬಗ್ಗೆ ನಿರ್ಲಕ್ಷ ತೋರಿ ಮೌನ ವಹಿಸಿದ್ದಾರೆ.

ಈ ಫಿಶ್ ಮಿಲ್ ಗಳ ಮಾಲೀಕರು ಸಾಕಷ್ಟು ನಿಯಮಗಳನ್ನು ಮೀರಿದ್ದಾರೆ. ಇಲ್ಲಿಗೆ ಪ್ರತಿನಿತ್ಯ ಲೋಡ್ ಗಟ್ಟಲೇ ಸೌದೆ ಬರುತ್ತಿದ್ದು ಅದಕ್ಕೂ ಕೂಡ ಅರಣ್ಯಾಧಿಕಾರಿಗಳ ಸಹಕಾರ ಇದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. . ಕಡಲ ಕೊರೆತ ಉಂಟಾಗಲೂ ಇದು ಕೂಡ ಕಾರಣವಾಗಿದೆ.

ಸ್ಥಳೀಯ ನಿವಾಸಿಗಳಾದ ವಾಯುಪಡೆಯ ನಿವೃತ್ತ ಸ್ಕ್ವಾಡ್ರನ್ ಲೀಡರ್‌ ಪಿಆರ್‌ಪಿ ಶೆಟ್ಟಿ, ಪ್ರತಿಮಾ ಶೆಟ್ಟಿ, ಪ್ರಖ್ಯಾತ್‌, ಹರೀಶ್‌ ಐತಾಳ್ ಮುಕ್ಕ, ಚಿದಾನಂದ ಮುಕ್ಕ- ಮುಂತಾದವರು ಸುದ್ದಿ ಮಾಧ್ಯಮಗಳಿಗೆ ಪ್ರಕಟಣೆ ನೀಡಿ, 10 ಸಾವಿರಕ್ಕೂ ಅಧಿಕ ನಿವಾಸಿಗಳಿಗೆ ನರಕ ಸದೃಶ ವಾತಾವರಣ ನಿರ್ಮಿಸಿದ ಈ ಫಿಶ್‌ಮಿಲ್‌ಗಳ ಮೇಲೆ ಕಾನೂನು ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲು ನೆರವಾಗುವಂತೆ ಕೋರಿದ್ದಾರೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ವೀರರಾಣಿ ಅಬ್ಬಕ್ಕ ಉತ್ಸವ ಕ್ರೀಡಾ ಪಂದ್ಯಾಟ ಫೆ.23ಕ್ಕೆ

Upayuktha

ದೆಹಲಿ ಗಣರಾಜ್ಯೋತ್ಸವ ಪೆರೇಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆ

Upayuktha

ಗಣರಾಜ್ಯೋತ್ಸವ: ಸರಕಾರಿ ನೌಕರರ ಹಾಜರಾತಿ ಕಡ್ಡಾಯ

Upayuktha