ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ಕಾಲೇಜಿನಲ್ಲಿ ‘ಜೀವನ ಕೌಶಲ್ಯಗಳು’ ಸರ್ಟಿಫಿಕೇಟ್ ಕೋರ್ಸ್ ಆರಂಭ

ಅವಕಾಶಗಳ ಸದ್ಭಳಕೆ ಸಾಧನೆಯ ಹಾದಿಗೆ ಮೆಟ್ಟಿಲುಗಳಿದ್ದಂತೆ: ಶ್ರೀನಿಧಿ ಭಟ್

ಪುತ್ತೂರು: ಉದ್ಯೋಗ ಬದುಕನ್ನುಕಟ್ಟಿಕೊಳ್ಳಲು ವಿವಿಧ ಜೀವನ ಕೌಶಲ್ಯಗಳು ಅವಶ್ಯಕ. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮ ವೃತ್ತಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಿಗುವ ಅವಕಾಶಗಳು ಅನೇಕ. ಸಂವಹನ ಕಲೆ ಹಾಗೂ ಸಮೂಹ ಸಂವಹನ ಮಾಧ್ಯಮಗಳ ಸದ್ಭಳಕೆ ಸಾಧನೆಯ ಹಾದಿಗೆ ಮೆಟ್ಟಿಲುಗಳಿದ್ದಂತೆ. ಯಾವುದೇ ಕೆಲಸವಾದರೂ, ನಮಗೆ ಕೆಲಸವಿತ್ತ ಸಂಸ್ಥೆಯ ಮೆಚ್ಚುಗೆ ಪಡೆಯುವ ರೀತಿಯಲ್ಲಿ ಆ ಕೆಲಸ ಪೂರ್ಣಗೊಳಿಸುವುದು ಮುಖ್ಯವಾಗುತ್ತದೆ. ಯಾವುದೇ ಕೆಲಸವಾಗಲಿ, ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಮಾಡಿದಾಗ ಯಶಸ್ಸು ನಮ್ಮದೆ ಎಂದು ಕಲ್ಲಡ್ಕದ ಸರ್ವಜ್ಞ ಇನ್ಫೋಟೆಕ್ ಪ್ರೈ, ಲಿಮಿಟೆಡ್‌ನ ಸಿ.ಇ.ಒ. ಶ್ರೀನಿಧಿ ಭಟ್ ಹೇಳಿದರು.

ಅವರು ವಿವೇಕಾನಂದ ಮಹಾವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ವಿಭಾಗ, ಐಕ್ಯೂಎಸಿ ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್, ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಜೀವನ ಕೌಶಲ್ಯಗಳು’ ಎಂಬ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಮಾತನಾಡಿ, ಶಿಕ್ಷಣ ಎಂಬುದು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ ಇತರ ಚಟುವಟಿಕೆಗಳನ್ನು ಹೊಂದಿಸಿಕೊAಡು ಹೋಗುವ ರೀತಿಯಲ್ಲಿ ಇರಬೇಕು. ಕಲಿತ ಮೇಲೆ ಏನಾದರೂ ಸಾಧನೆ ಮಾಡಬೇಕು. ಕಲಿಕೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ನಮ್ಮ ನಿರ್ಧಾರಗಳ ಮೇಲೆ ನಮ್ಮ ಜೀವನ ನಿಂತಿದೆ. ಸರ್ಟಿಫಿಕೇಟ್ ಕೋರ್ಸ್ಗಳೂ ಒಂದು ಪತ್ರಕ್ಕೆ ಮಾತ್ರ ಸೀಮಿತವಾಗದೆ ಬದುಕಿಗೆ ಅದು ಸಹಕಾರಿಯಾಗಬೇಕು. ಆತ್ಮವಿಶ್ವಾಸ, ಸೃಜನಶೀಲತೆ, ಆಸಕ್ತಿ ಇವೆಲ್ಲ ಜೀವನದ ಅಡಿಪಾಯಗಳು ಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ. ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲಾ ಸ್ವಾಗತಿಸಿ, ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಾನಸ ಪ್ರಾರ್ಥಿಸಿದರು. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‌ನ  ಸಂಸ್ಥಾಪಕ ಡಾ. ಶ್ರೀಶ ಭಟ್ ವಂದಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮಹಿಳೆಯ ಅನಾಗರಿಕ ಬದುಕಿಗೆ ಮುಕ್ತಿ ದೊರಕಿಸಿದ ಸಮಾಜಸೇವಕ ವಿಶು ಶೆಟ್ಟಿ; ನೆರವಿಗೆ ಬಂದ ನಿವೃತ್ತ ಬ್ಯಾಂಕ್ ಉದ್ಯೋಗಿ

Upayuktha

ಜ.19ರಿಂದ 22: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

Upayuktha

ಡಿ.27ರಂದು `ಆತ್ಮಶ್ರೀ ಸರಿಗಮಪ ಸಂಗೀತ ಕಾರ್ಯಕ್ರಮ’; ಗಣ್ಯ ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನ

Upayuktha