ಪ್ರತಿಭೆ-ಪರಿಚಯ

ಸಂಗೀತದಲ್ಲಿ ಮಿನುಗುವ ತಾರೆ ಲಿಖಿತ್

ಹಾಡುವುದು ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಕೆಲವರಿಗಂತು ಹಾಡುವುದು ಹಾಡನ್ನು ಕೇಳುವುದು ಎಂದರೆ
ಎಲ್ಲಿಲ್ಲದ ಪ್ರೀತಿ. ಹಾಡನ್ನು ಕೇಳುತ್ತಾ ಅದರಲ್ಲೇ ತೇಲಾಡುವ ಅದೆಷ್ಟೋ ಸಂಗೀತ ಅಭಿಮಾನಿಗಳನ್ನು ಕಾಣಬಹುದು.
ಕೆಲವರಿಗೆ ಹಾಡುವುದೆಂದರೆ ಎಲ್ಲಿ ಎನ್ನುವುದು ನೆನಪಿರಲ್ಲ, ಎಲ್ಲಾ ಕಡೆ ತಮ್ಮ ಪಾಡಿಗೆ ಗುನುಗುತ್ತಾ ಏನೇ ಕೆಲಸ ಮಾಡುವಾಗಲೂ ಬಾಯಿಯಲ್ಲಿ ಹಾಡು ಪಾಡುತ್ತಾ ಇರುವರು.
ಹಾಗೆಯೇ ಹಾಡುವುದು ಸುಲಭದ ಮಾತಲ್ಲ. ಅದರಲ್ಲೂ ಆ ವೇದಿಕೆಯ ಮುಂದೆ ಹಾಡುವುದೆಂದರೆ ದೊಡ್ಡ ಮಟ್ಟದ ಸಾಧನೆ ಯೇ ಸರಿ.
 ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದಲ್ಲ ಒಂದು ಪೈಪೋಟಿ ಯಲ್ಲಿ ಪ್ರತಿಯೊಂದು ಮನೆಯಲ್ಲೂ ಪ್ರತಿ ಮಗುವಿನಲ್ಲೂ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಹೆತ್ತವರು ಏರ್ಪಡಿಸುತ್ತಿದ್ದಾರೆ.
ಅಂಥವರ ಸಾಲಿನಲ್ಲಿ ಇದ್ದಾನೆ ಇಲ್ಲೊಬ್ಬ ಪುಟಾಣಿ. ಉದ್ಯಾವರ ಪಿತ್ರೋಡಿಯ ಶ್ರೀ ಉಮೇಶ್ ಕರ್ಕೇರ ಮತ್ತು ರಾಜೀವಿ ದಂಪತಿಗಳ ಪುತ್ರನಾಗಿರುವ ಲಿಖಿತ್ ಕರ್ಕೇರ. ಇವನು ಉದ್ಯಾವರ ಹಿಂದೂ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ.
ಕರಾಟೆ – ಆಟೋಟಗಳಲ್ಲಿ ಮೇಲುಗೈ ಸಾಧಿಸುವ ಛಲ ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿ. ಈತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಗುರುಗಳಾದ ಸತ್ಯಚರಣ್ ಶೆಣೈ ಇವರಿಂದ ಅಭ್ಯಾಸ ಮಾಡುತ್ತಿದ್ದಾನೆ.
ಈ ಪುಟ್ಟ ಬಾಲಕ ಕಲರ್ಸ್ ಸೂಪರ್ ಕನ್ನಡ ಚಾನೆಲ್ ನಲ್ಲಿ ಕನ್ನಡ ಕೋಗಿಲೆ ರಿಯಾಲಿಟಿ ಶೋ ನಲ್ಲಿ ಉತ್ತಮ ಪ್ರದರ್ಶನ ನೀಡಿ ತೀರ್ಪುಗಾರರ ಮತ್ತು ಪ್ರೇಕ್ಷಕರ ಮನ ಗೆದ್ದಿದ್ದಾನೆ..
 21 ಸುತ್ತುಗಳಲ್ಲಿ ಭಾಗವಹಿಸಿ ಸೆಮಿಫೈನಲ್ ಹಂತಕ್ಕೆ ತಲುಪಿ ಟಾಪ್ 10 ಕಂಟೆಸ್ಟೆಂಟ್ ಆಗಿ 10 ಬಾರಿ ಗೋಲ್ಡನ್ ಬಝಾರ್ ನ್ನು ಪಡೆದುಕೊಂಡ ಹೆಗ್ಗಳಿಕೆ ಇವನ ಪಾಲಿಗೆ ದೊರಕಿದೆ.
ಈ ಎಳೆಯ ವಯಸ್ಸಿನಲ್ಲಿಯೇ ಹಾಡುವುದರ ಜೊತೆಗೆ ಕರಾಟೆಯಲ್ಲೂ ಸೈ ಎನಿಸಿಕೊಂಡವನು. ಅಲ್ಲದೇ ಇವರು 4 ಸಿನಿಮಾ ಹಾಡುಗಳಲ್ಲಿ ಹಿನ್ನೆಲೆ ಗಾಯಕನಾಗಿ ಹಾಡಿದ್ದಾನೆ. ಮಕ್ಕಳ ಮನಸ್ಸು, ಪಾರ್ಕ್ ರೋಡ್ 100 ರೂಪಾಯಿ, ಪಾರು,  ಮಕ್ಕಡ ಮನಸ್ಸು ಕೊಡವ ಭಾಷೆಯಲ್ಲಿ ಕೂಡ ಹಾಡಿದ್ದಾನೆ.
ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ ಹೊಂದಿರುವ ಇವರು ತನ್ನ ಮುಂದಿನ ಜೀವನದುದ್ದಕ್ಕೂ ಹಾಡುವುದರಲ್ಲಿ ಮುಂದೆ ಸಾಗಲಿ. ಇವನ ಪಾಲಿಗೆ ಇನ್ನಷ್ಟು ವೇದಿಕೆ ದೊರಕಲಿ ಜೀವನದಲ್ಲಿ ಉತ್ತಮ ಹಾಡುಗಾರನಾಗಿ ಎಲ್ಲೆಡೆ ಚಿರಪರಿಚಿತ ನಾಗಿ ಇವನ ಹಾಡು ಎಲ್ಲೆಡೆ ಪಸರಿಸಲಿ. ಇವನು ಹೆತ್ತವರಿಗೆ ಊರಿಗೆ ಹೆಸರು ಕೀರ್ತಿ ತಂದು ಕೊಡಲಿ ಎಲ್ಲರ ಜನ ಮನ ಗೆದ್ದು ಬರಲಿ ಎಂದು ಹಾರೈಸೋಣ.
✍️ಹರ್ಷಿತಾ ಹರೀಶ ಕುಲಾಲ್

Related posts

ಬೆಳ್ಳೂರು ಶಾಲಾ ವಿದ್ಯಾರ್ಥಿ ವಿಘ್ನರಾಜ್‌ಗೆ ರಾಷ್ಟ್ರೀಯ ಸ್ಕಾಲರ್‌ಶಿಪ್‌

Upayuktha

ಯಕ್ಷಲೋಕದ ಕೋಲ್ಮಿಂಚು ಪ್ರಕಾಶ್‌‌ ಮೊಗವೀರ ಕಿರಾಡಿ

Upayuktha

ಪರಿಚಯ: ಯಕ್ಷಪಟು ಸುಷ್ಮಾ ಮೈರ್ಪಾಡಿ

Upayuktha

Leave a Comment

error: Copying Content is Prohibited !!