ಜಿಲ್ಲಾ ಸುದ್ದಿಗಳು

ಲಯನ್ಸ್‌ ಜಿಲ್ಲಾ ಗವರ್ನರ್‌ ಪದಗ್ರಹಣ ನಾಳೆ

ವಿಟ್ಲ: 104 ವರ್ಷಗಳ ಇತಿಹಾಸ ಹೊಂದಿರುವ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಇದರ ಲಯನ್ಸ್ ಜಿಲ್ಲೆಯ  ಗವರ್ನರ್ ಆಗಿ ಡಾ ಗೀತಾಪ್ರಕಾಶ ಎ ಭಾನುವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಲಯನ್ಸ್‌ ಜಿಲ್ಲೆಯು ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಈ ನಾಲ್ಕು ಕಂದಾಯ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ.

ಜಿಲ್ಲಾ ಸಂಪುಟದ ಪದಗ್ರಹಣ ಸಮಾರಂಭವು 16ರ ಭಾನುವಾರ ಬೆಳಗ್ಗೆ 10 ಗಂಟೆಗೆ ಜೆಎಲ್ ಅಡಿಟೋರಿಯಂನಲ್ಲಿ ವರ್ಚುವಲ್ ಆಗಿ ಝೂಮ್ ಮೂಲಕ ನಡೆಯಲಿದೆ ಸಂಪುಟ ಪದಗ್ರಹಣ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದರು. ಅವರು ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪೂರ್ವ ಅಂತಾರಾಷ್ಟ್ರೀಯ ನಿರ್ದೇಶಕ ಮುರುಗನ್ ಅವರು ಸಂಪುಟ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಲಿರುವರು. ಅಂತಾರಾಷ್ಟ್ರೀಯ ನಿರ್ದೇಶಕ ಎಂಡೋರ್ಸಿ ವಂಶಿಧರ ಬಾಬು, ಮಲ್ಟಿಪಲ್ 371ರ ಚೆಯರ್ಮೆನ್ ನಾಗರಾಜ್ ವಿ ಬೈರಿ ಮುಖ್ಯ ಅತಿಥಿಗಳಾಗಿರುವರು. ಇದೇ ಸಂದರ್ಭ ‘ಸೃಷ್ಟಿ’ ಲಯನ್ಸ್ ಜಿಲ್ಲಾ ಡೈರೆಕ್ಟರಿ ಬಿಡುಗಡೆಗೊಳ್ಳಲಿದೆ. ಲಯನ್ಸ್ ಜಿಲ್ಲಾ ಪ್ರಥಮ ಮಹಿಳೆ ಡಾ ಗಾಯತ್ರಿ ಜಿ ಪ್ರಕಾಶ್ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

ನಿಕಟಪೂರ್ವ ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್, ಪ್ರಥಮ ಉಪಗವರ್ನರ್ ವಸಂತಕುಮಾರ ಶೆಟ್ಟಿ, ದ್ವಿತೀಯ ಉಪ ಗವರ್ನರ್ ಸಂಜಿತ್ ಶೆಟ್ಟಿ ಭಾಗವಹಿಸಲಿದ್ದಾರೆ.

ಗವರ್ನರ್ ಡಾ. ಗೀತಾಪ್ರಕಾಶ್ ಮಾತನಾಡಿ 2020-21 ರ ಸಾಲಿನ ಸಪ್ತ ಸೇವಾಕಾರ್ಯಕ್ರಮಗಳು-‘ಹಸಿರಮಡಿಲು’, ‘ಜಲಾಮೃತ’, ‘ಜೀವನ್ಮುಖಿ’, ‘ಕರುಣ’, ‘ಪುನರ್ಜನ್ಮ’, ‘ಸ್ವರಕ್ಷಾ’ ಮತ್ತು ‘ವಾತ್ಸಲ್ಯ’ ಅಂತಾರಾಷ್ಟ್ರೀಯ ಸೇವಾ ಕಾರ್ಯಕ್ರಮಗಳಾದ ‘ಪರಿಸರ ಸಂರಕ್ಷಣೆ’,’ ಮಧುಮೇಹ ಜಾಗೃತಿ’, ‘ವಿಶನ್ ಕೇರ್”, ಮಕ್ಕಳ ಅರ್ಬುದ ರೋಗದ ಜಾಗೃತಿ,’ಹಸಿವು ನಿವಾರಣೆ’ ಈ ಎಲ್ಲಾ ಕಾರ್ಯಕ್ರಮಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುವುದು.

ಜಿಲ್ಲಾ ಗವರ್ನರ್ ಅವರ ಜಿಲ್ಲಾ ಪ್ರೊಜೆಕ್ಟ್ ಆಗಿ ವಿಟ್ಲ ಒಕ್ಕೆತ್ತೂರು ಸಮೀಪ ವಿಶೇಷ ಚೇತನ ಮಕ್ಕಳಿಗಾಗಿ ಕಳೆದ ನಾಲ್ಕು ವರ್ಷಗಳಿಂದ ವಿಟ್ಲ ಲಯನ್ಸ್ ಸೇವಾ ಟ್ರಸ್ಟ್ ಮತ್ತು ವಿಟ್ಲ ಲಯನ್ಸ್ ಕ್ಲಬ್ ನಿಂದ ನಡೆಸುತ್ತಾ ಬಂದಿದ್ದ ‘ಫಿಸಿಯೋಥೆರಪಿ’ ಮತ್ತು ಕಳೆದ ವರ್ಷ ಆರಂಭಿಸಿದ ‘ಸ್ಪೀಚ್ ಥೆರಪಿ’ ಯನ್ನು ಜಿಲ್ಲಾ ಯೋಜನೆಯಾಗಿ ರೂಪಿಸಲು ಕಟ್ಟಡ ರಚನೆ ಈ ವರ್ಷದಲ್ಲಿ ಮಾಡಿ ವರ್ಷವಿಡೀ ಅವುಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲಾ ಸಂಪುಟ ಸಾರ್ವಜನಿಕ ಸಂಪರ್ಕಾಧಿಕಾರಿ ವಿಟ್ಲ ಮಂಗೇಶ ಭಟ್, ಜಿಲ್ಲಾ ಸಂಪುಟ ಕೋಶಾಧಿಕಾರಿ ಮಹಮ್ಮದ್ ಇಕ್ಬಾಲ್ ಹಾನೆಸ್ಟ್ ಉಪಸ್ಥಿತರಿದ್ದರು.

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸ ನಿಮಿತ್ತ ಉಡುಪಿ ಪೇಜಾವರ ಮಠಾಧೀಶರಿಂದ ವಿಶೇಷ ಪೂಜೆ, ಹವನ

Upayuktha

ಅನ್‌ಲೈನ್‌ನಲ್ಲಿ ಉಚಿತ ಉದ್ಯೋಗ್ ಆಧಾರ್ ಕೈಗಾರಿಕಾ ನೋಂದಣಿ

Upayuktha

ಬಿಪಿಎಲ್ ಕ್ಷೌರಿಕರಿಗೆ ಮತ್ತು ಅಗಸರಿಗೆ ಪರಿಹಾರ ಧನಕ್ಕೆ ಅರ್ಜಿ ಆಹ್ವಾನ

Upayuktha

Leave a Comment

error: Copying Content is Prohibited !!