ಪ್ರಮುಖ ರಾಜ್ಯ

ಗೋಮಯ ದೀಪದ ದೀಪಾವಳಿ ರಾಜ್ಯದ ಜನತೆಗೆ ಶುಭಕರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: “ಈ ಬಾರಿ ಸಗಣಿ ದೀಪ ಎಂದು ರಾಜ್ಯಾದ್ಯಂತ ನಡೆದಿರುವ ಗೋಮಯ ದೀಪಾವಳಿ ಅಭಿಯಾನ ಅತ್ಯಂತ ಪ್ರಶಂಸನೀಯ” ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.

ಬಿಜೆಪಿ ಹಸು ಅಭಿವೃದ್ಧಿ ಕೋಶದ ರಾಷ್ಟ್ರೀಯ ಸಹ ಸಂಯೋಜಕ ಹಾಗೂ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ನಿಯೋಜಿತ ಉಪಾಧ್ಯಕ್ಷ ಡಾ. ಶ್ರೀಕೃಷ್ಣ ಮಿಟ್ಟಲ್ ಅವರ ನೇತೃತ್ವದ ತಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಗೋಮಯ ಉತ್ಪನ್ನಗಳ ಅಭಿಯಾನ ಮತ್ತು ಸಗಣಿ ಹಣತೆಯ ದೀಪಾವಳಿಯ ಸಂಪೂರ್ಣ ಪರಿಕಲ್ಪನೆಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ 21 ಸಗಣಿ ದೀಪಗಳ ವಿಶೇಷ ಉಡುಗೊರೆಯನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಯಿತು. ಮುಖ್ಯಮಂತ್ರಿ ಅವರ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸರಳ ಭೇಟಿಯ ಸಂದರ್ಭದಲ್ಲಿ ಗೋಮಯ ದೀಪ ಮತ್ತು ಉತ್ಪನ್ನಗಳ ಮುಂದಿನ ಹಂತದ ರಾಜ್ಯ ಮಟ್ಟದ ಯೋಜನೆಗಳನ್ನು ಚರ್ಚಿಸಲಾಯಿತು

“ರಾಜ್ಯದಲ್ಲಿ ಹಸುವಿನ ಸಗಣಿಸಂಗ್ರಹಕ್ಕಾಗಿ ಸಗಣಿ ಡೈರಿ ಯೋಜನೆ ಮುಂಬರುವ ದಿನಗಳಲ್ಲಿ ಪ್ರಾರಂಭವಾಗಲಿದೆ ಹಾಗೂ ಗೋಮಯ ಉತ್ಪನ್ನಗಳಿಗೆ ಕರ್ನಾಟಕ ಸರ್ಕಾರ ಅತ್ಯಧಿಕ ಪ್ರೋತ್ಸಾಹ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಂಡದಕ್ಕೆ ತಿಳಿಸಿದರು. ತಮ್ಮ ಮೊದಲ ಕೃಷಿ ಬಜೆಟ್ಟಿನಲ್ಲಿ ಘೋಷಿಸಿದ್ದ ಹಸುವಿನ ಸಗಣಿಡೈರಿ ಯೋಜನೆಯ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಪರಿಸರ ಪೂರಕ ಕಾಮಧೇನು ದೀಪಾವಳಿ ಅಭಿಯಾನವನ್ನು ಅಧ್ಯಕ್ಷ ಡಾ. ವಲ್ಲಭಭಾಯಿ ಕಥಿರಿಯ ಅವರ ಸಂಕಲ್ಪದಂತೆ ರಾಷ್ಟ್ರೀಯ ಕಾಮಧೇನು ಅಯೋಗ ದೇಶದಾದ್ಯಂತ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ರಾಜ್ಯದ ಗೋ ಸಂಬಂಧಿತ ಬಹುತೇಕ ಎಲ್ಲಾ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಗೋಪ್ರೇಮಿಗಳೆಲ್ಲರೂ ಸ್ವಯಂಪ್ರೇರಿತರಾಗಿ ಕರ್ನಾಟಕದ ಮೂಲೆಮೂಲೆಗಳ ಹಳ್ಳಿಗಳಲ್ಲಿ, ಪಶುಪಾಲಕ ರೈತರಲ್ಲಿ ಹಾಗೂ ನಾಡಿನ ಜನತೆಗೆ ಸಗಣಿ ದೀಪದ ತಯಾರಿಕೆ ಮತ್ತು ಬೇಡಿಕೆಯ ಮಹತ್ವವನ್ನು ಪರಿಚಯಿಸುವ ಜಾಗೃತಿ ಮೂಡಿಸಿದರು

“ಸಗಣಿಗಳಿಂದ ತಯಾರಿಸಿದ ದೀಪಗಳನ್ನು ಬೆಳಗಿದರೆ ಪರಿಸರ ಸ್ನೇಹಿ, ಶುಭಕರ ಮತ್ತು ಹಸು ಸಂತತಿಯ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ, ಚೀನಾದೇಶದ ಉತ್ಪನ್ನಗಳ ಬಳಕೆ ಕಡಿಮೆಯಾಗುತ್ತದೆ ಮಾತ್ರವಲ್ಲದೆ, ಸಧ್ಯೋಭವಿಷ್ಯದಲ್ಲಿ ದೇಶಾದ್ಯಂತ ಸುಸ್ಥಿರ, ಸ್ಥಳೀಯ, ಗ್ರಾಮೀಣ ಹಾಗೂ ಪಶು ಆಧಾರಿತ ಆರ್ಥಿಕ ವ್ಯವಸ್ಥೆಗಾಗಿ ಭದ್ರ ಬುನಾದಿ ಹಾಕಲು ಸಾದ್ಯವಾಗುತ್ತದೆ. ಕರ್ನಾಟಕದಲ್ಲಿ ಪ್ರತಿದಿನ ಸರಿಸುಮಾರು 8 ಕೋಟಿ ಕೆಜಿ ಸಗಣಿ ಮತ್ತು 5 ಕೋಟಿ ಕಿ.ಲೀ ಗೋಮೂತ್ರ (ಗಂಜಲು) ಹಸುಗಳಿಂದ ಉತ್ಪತ್ತಿಯಾಗುತ್ತಿದ್ದು, ಇದು ನೂರಾರು ನಮೂನೆಯ ದೈನಂದಿನ ಬಳಕೆಯ ವಸ್ತುಗಳಿಗೆ ಕಚ್ಚಾ ವಸ್ತುವಾಗಿ ಬಳಕೆಯಾಗಬೇಕು.

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ, ಕೌಶಲ್ಯ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ಜೀವಿಕಾ, ಖಾದಿ ಗ್ರಾಮೋದ್ಯೋಗ ಮಂಡಳಿ ಮುಂತಾದ ಸರ್ಕಾರದ ಸಂಸ್ಥೆಗಳಿಂದ ಕರ್ನಾಟಕದ ರೈತರು, ಯುವಜನತೆ ಮತ್ತು ಮಹಿಳಾವರ್ಗಕ್ಕೆ ಸರಿಯಾದ ಗೋಮಯ ಉತ್ಪನ್ನಗಳ ತಯಾರಿಕೆಯ ತರಬೇತಿ, ಮೂಲಸೌಕರ್ಯಗಳ ಪೂರೈಕೆ ಪ್ರಯತ್ನಗಳಾದಲ್ಲಿ ನೆಚ್ಚಿನ ಪ್ರಧಾನಮಂತ್ರಿಯವರ ರೈತರ ಆಧಾಯ ದ್ವಿಗುಣವಾಗುವ ಮತ್ತು ಆತ್ಮ ನಿರ್ಭರ ಭಾರತದ ಸಂಕಲ್ಪ ಸಾಕಾರಗೊಳ್ಳಲು ಸಹಾಯವಾಗಲಿದೆ” ಎಂದು ಕಾಮಧೇನು ದೀಪಾವಳಿ ಸಾಂಕೇತಿಕತೆ ಮತ್ತು ಗೋಮಯ ಉತ್ಪನ್ನಗಳ ಮಹತ್ವಗಳನ್ನು ಡಾ. ಶ್ರೀಕೃಷ್ಣ ಮಿಟ್ಟಲ್ ಅವರು ಮುಖ್ಯಮಂತ್ರಿ ಅವರಿಗೆ ವಿವರಿಸಿದರು.

ಬಿಜೆಪಿ ಹಸು ಅಭಿವೃದ್ಧಿ ಕೋಶದ ರಾಷ್ಟ್ರೀಯ ಸಹ ಸಂಯೋಜಕ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ನಿಯೋಜಿತ ಉಪಾಧ್ಯಕ್ಷ ಡಾ. ಶ್ರೀಕೃಷ್ಣ ಮಿಟ್ಟಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 21 ಸಗಣಿ ದೀಪದ ಉಡುಗೊರೆ ನೀಡಿ, ಕಾಮಧೇನು ದೀಪಾವಳಿಯ ಮತ್ತು ಗೋಮಯ ಉತ್ಪನ್ನಗಳ ಜಾಗೃತಿಯ ಆಭಿಯಾನವನ್ನು ವಿವರಿಸಿದರು.

 

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕಾಸರಗೋಡು ಜಿಲ್ಲೆಯಲ್ಲಿ ಅ.9ರ ವರೆಗೆ ನಿಷೇಧಾಜ್ಞೆ ಜಾರಿ

Upayuktha

ರಾಮ ಮಂದಿರಕ್ಕಾಗಿ 28 ವರ್ಷಗಳಿಂದ ಉಪವಾಸ ವ್ರತದಲ್ಲಿರುವ ಈ ಅಜ್ಜಿ

Upayuktha News Network

ಡಿಕೆಶಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲು

Harshitha Harish

Leave a Comment