ಜೀವನ-ದರ್ಶನ

ಬಾಳೋಣ ಕೊನೆಯವರೆಗೂ… ಪಯಣವಿರಲಿ ಅಂತಿಮ ನಿಲುಗಡೆಯವರೆಗೂ

ಆತ್ಮಹತ್ಯೆ ಮಹಾ ಪಾಪ. ಆದರೂ ಕೆಲವರು ಯಾವುದೋ ವಿಷ ಘಳಿಗೆಯಲ್ಲಿ ನಿರ್ಧಾರ ತಾಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆ ಕ್ಷಣದಲ್ಲಿ ಅವರ ದೃಷ್ಟಿಯಲ್ಲಿ ಅದು ಸರಿಯಾದ ನಿರ್ಧಾರವೇ ಆಗಿರಬಹುದು. ಆದರೆ ಅಂಥವರು ಒಂದು ಕ್ಷಣ ಯೋಚಿಸಬೇಕು. ಈ ಆತ್ಮಹತ್ಯೆ ಅವರ ಸ್ವಂತದ ಒಂದು ಸಮಸ್ಯೆಯನ್ನು ಪರಿಹರಿಸಬಹುದು ಈ ಜನ್ಮದಲ್ಲಿ. ಆದರೆ ಅದು ಮುಂದೆ ಹಲವಾರು ಹೊಸ ಸಮಸ್ಯೆಗಳಿಗೆ ಅಡಿಪಾಯ ಹಾಕುವುದು ಸತ್ಯ ತಾನೆ. ಹಾಗೂ ಇದು ಜನ್ಮಾಂತರಕ್ಕೂ ಕಟ್ಟಿಕೊಂಡ ಬುತ್ತಿ ಎಂಬುದು ಅವರಿಗೆ ಅನ್ನಿಸಲಿಕ್ಕಿಲ್ಲ.

ಇಂಥವರಿಗೆ ನನ್ನದೊಂದು ಸಲಹೆ ಇದೆ. ಯಾರು ತಾನು ಆತ್ಮಹತ್ಯೆ ಮಾಡಿಕೊಳ್ಳುವವನೇ ಎಂಬ ನಿರ್ಧಾರ ತಾಳುವನೋ ಆತನೊಂದು ಸಾರಿ ಒಂದು ದೊಡ್ಡ ಆಸ್ಪತ್ರೆಯಲ್ಲಿ ಒಂದು ದಿನದ ಮಟ್ಟಿಗಾದರೂ ಸಾಧ್ಯವಾದಷ್ಟು ರೋಗಿಗಳನ್ನು ಭೇಟಿ ಮಾಡಿ, ಅವರ ಕಷ್ಟ ಕೋಟಲೆಗಳನ್ನು ವಿಚಾರಿಸಿ, ಸಾಯಂಕಾಲದವರೆಗೂ ಅವರೊಡನೆ ಸಹಭಾಗಿಯಾಗಿ ಮನೆಗೆ ಬಂದರೆ ಒಳಿತು. ನಿಜವಾದ ಸತ್ಯ ದರ್ಶನವಾಗುವುದು ಆಸ್ಪತ್ರೆಗಳಲ್ಲೇ.ಕಣ್ಣಿಗೆ ಕಾಣದ ಆ ಒಂದು ಜೀವಕ್ಕಾಗಿ ಎಷ್ಟೆಲ್ಲ ಕಷ್ಟಗಳನ್ನು ರೋಗಿಗಳಾದವರು ಅನುಭವಿಸುತ್ತಾರೆನ್ನುವುದು ಅನುಭವಿಸಿದವರಿಗೆ ಮಾತ್ರ ತಿಳಿಯುವ ಸತ್ಯ.

ಯಾವುದೋ ಒಂದು ಕ್ಷುಲ್ಲಕ ಕಾರಣಕ್ಕಾಗಿ ದೇವರು ಕೊಟ್ಟ ಅಮೂಲ್ಯವಾದ ಈ ಶರೀರವನ್ನು ತ್ಯಜಿಸುವುದು ಎಷ್ಟೊಂದು ಮೂರ್ಖತನ ಎನಿಸದೇ? ನಮಗೆ ಪರಿಪೂರ್ಣವಾದ ಶರೀರ ಇರುವಾಗ ಅದರ ಮಹತ್ವ ತಿಳಿಯದು. ಯಾವುದೇ ಒಂದು ಅಂಗಹೀನವಾದರೂ ಕೋಟಿ ಹಣ ಖರ್ಚು ಮಾಡಿದರೂ ಮತ್ತೆ ಮುಂದಿನಂತಾಗುವುದೇ? ಕೊರತೆಯಿಂದ ಮಾತ್ರ ಮಹತ್ವ ಗೊತ್ತಾಗಬೇಕೇ? ಸಾವೆದುರಾಗಿ ಬಂತೆಂದಾಗ ಹೋರಾಟ ಮಾಡಿ ಕೊನೆಗೊಮ್ಮೆ ಆ ಸಾವನ್ನೇ ಮುಂದೂಡಿ ಪೂರ್ಣ ಬದುಕನ್ನು ಬದುಕಿದವರು ಬಹಳ ಮಂದಿ ಇದ್ದಾರೆ. ಇವರೇ ಬದುಕನ್ನು ನಿಜವಾದ ರೀತಿಯಲ್ಲಿ ಎದುರಿಸಿದವರು. ಇಂಥವರಿಂದ ಬದುಕುವ ಸ್ಪೂರ್ತಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವವರು ಪಡೆದುಕೊಂಡರೆ ಅವರು ಮತ್ತೆಂದೂ ಇಂತಹ ಯೋಚನೆಯನ್ನು ಮಾಡಲಾರರು.

ನಾವು ಭೂಮಿಗೆ ಬರುವ ಮುಂಚೆ ಎಲ್ಲಿದ್ದೆವು? ಇಲ್ಲಿಯವರೇಗೆ ಹೇಗಿದ್ದೆವು? ಮುಂದೆ ಹೇಗಿರುವೆವು? ಹಾಗೂ ಸತ್ತ ಮೇಲೆ ಎಲ್ಲಿಗೆ ಹೋಗುತ್ತೇವೆ? ಬಲ್ಲೆವೇ ನಾವು…?? ಕಳುಹಿಸಿದವನಿಗೆ ಕರಕೊಳ್ಳುವ ಜವಾಬ್ದಾರಿ ಇದೆ. ಅವನ ಜವಾಬ್ದಾರಿಯನ್ನು ನಾವು ಅರ್ಧದಲ್ಲಿ ನಿರ್ಗಮಿಸಿ ಯಾಕೆ ನಮ್ಮ ತಲೆ ಮೇಲೆಳೆದುಕೊಳ್ಳಬೇಕು? ಹರಿಚಿತ್ತ ಸತ್ಯ… ಬದುಕೋಣ, ಆತ ಬಾ ಎನ್ನುವವರೆಗೂ….
ಹೇಡಿತನ ಬೇಡ, ಬದುಕಿರುವವರೆಗೂ…
**********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಚಿಂತನ: ರೋಗಾರ್ತೋ ಮುಚ್ಯತೇ ರೋಗಾತ್….

Upayuktha

ದಾರಿ ದೀಪ: ಅಗ್ನಿಯೂ ಆತ್ಮವೂ

Upayuktha

ಬಾಳಿಗೆ ಬೆಳಕು: ಯತ್ರ ಯೋಗೇಶ್ವರಃ ಕೃಷ್ಣೋ… ಎಲ್ಲಿ ಕೃಷ್ಣನಿರುತ್ತಾನೋ ಅಲ್ಲಿ ವಿಜಯ ಖಚಿತ…

Upayuktha

Leave a Comment