ಗ್ರಾಮಾಂತರ ಪ್ರಮುಖ ಸ್ಥಳೀಯ

ಆರ್ಲಪದವು- ಕಡಂದೇಲು- ಗಿಳಿಯಾಲು-ಮುಳ್ಳೇರಿಯ ಅಂತಾರಾಜ್ಯ ರಸ್ತೆಯೇ ನಾಪತ್ತೆ…!

ಪಾಣಾಜೆ: ಆರ್ಲಪದವು- ಕಡಂದೇಲು- ಗಿಳಿಯಾಲು-ಮುಳ್ಳೇರಿಯ, ಅಂತಾರಾಜ್ಯ ರಸ್ತೆಯು, ಸುಮಾರು 1955-60ರಲ್ಲಿ ನಿರ್ಮಾಣಗೊಂಡ ಅತ್ಯಂತ ಪುರಾತನ ರಸ್ತೆ ಆಗಿರುತ್ತದೆ. ಕಡಂದೇಲು, ಗಿಳಿಯಾಲು ಮೂಲಕ ಇತಿಹಾಸ ಪ್ರಸಿದ್ಧ ಜಾಂಬ್ರಿ ಗುಹಾ ಪರಿಸರವನ್ನು ಸಂಪರ್ಕಿಸುವ ರಸ್ತೆಯೂ ಇದುವೇ ಆಗಿದೆ. ಬೇರಿಕೆ ಮೂಲಕ ಪಾಣಾಜೆ ಗ್ರಾಮ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆಯೂ ಹೌದು.

ಇಂತಹ ಒಂದು ಪ್ರಮುಖ ರಸ್ತೆ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ, ನಿರ್ಲಕ್ಷಕ್ಕೆ ಒಳಪಟ್ಟು, ಶೋಚನೀಯ ಸ್ಥಿತಿಯಲ್ಲಿ ಇದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ಅರ್ಲಪದವಿನಿಂದ ಈ ರಸ್ತೆಯ 2.5 ಕಿ.ಮೀ ಮಾತ್ರ ಡಾಮರೀಕರಣಗೊಂಡಿತ್ತು. ಆ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ, ವಾಹನಗಳಿಗೆ ಸಂಚರಿಸಲು ಹಾಗೂ ಮನುಷ್ಯರಿಗೆ ನಡೆದಾಡಲು ಕೂಡ ಆಗದ ಅತ್ಯಂತ ಶೋಚನೀಯ ಪರಿಸ್ಥಿತಿಗೆ ತಲುಪಿದೆ.

ಇದಕ್ಕೆಲ್ಲ ಸಾಕ್ಷಿ ಈ ವೀಡಿಯೋ

ಜನಪ್ರತಿನಿಧಿಗಳೇ, ಇನ್ನಾದರೂ ಎಚ್ಚೆತ್ತುಕೊಳ್ಳಿ. ಈ ರಸ್ತೆಯನ್ನು ಅವಲಂಬಿಸಿರುವವರು ಮನುಷ್ಯರೇ ಎಂಬುದನ್ನು ಅರಿತುಕೊಳ್ಳಿ. ಜನರ ತಾಳ್ಮೆಗೂ ಒಂದು ಮಿತಿ ಇದೆ. ಚುನಾವಣೆ ಸಮೀಪಿಸುವಾಗ ಬಂದು, ಆಶ್ವಾಸನೆ ನೀಡಿ, ಹೋಗುವವರನ್ನು ಇನ್ನು ನಂಬಲು ಸಾಧ್ಯವಿಲ್ಲ. ಜನರಿಗೆ ತಿಳುವಳಿಕೆಯಿದೆ. ನಮಗೆ ನಿಮ್ಮ ಆಶ್ವಾಸನೆ ಬೇಡ. ನಿಮ್ಮ ಕೃತಿಯಲ್ಲಿ ಕಾಣಬೇಕು ಎಂದು ಈ ಊರಿನ ಜನತೆ ಆಗ್ರಹಿಸುತ್ತಿದ್ದಾರೆ.

ಊರ ನಾಗರಿಕರಾದ ರಾಜೇಶ್ ಎ ಆರ್, ಅವರು ಈ ರಸ್ತೆಯ ಫಲಾನುಭವಿಗಳನ್ನು ಸಂಪರ್ಕಿಸಿ, ತಯಾರಿಸಿದ ವೀಡಿಯೋ ಮನಕಲಕುವಂತಿದೆ. ನಮ್ಮ ರಸ್ತೆ ನಮ್ಮ ಹಕ್ಕು… ಎಚ್ಚೆತ್ತುಕೊಳ್ಳಿ ಜನಪ್ರತಿನಿಧಿಗಳೇ.

(ಈ ವರದಿಗೆ ಮಾಹಿತಿಯನ್ನು ಮಹಾಬಲೇಶ್ವರ ಭಟ್ಟ, ಗಿಳಿಯಾಲು (ತಾತ, ಗಿಳಿಯಾಲು) ಅವರ ಫೇಸ್‌ಬುಕ್ ಪೋಸ್ಟ್‌ ಕಮೆಂಟ್‌ನಿಂದ ಆಯ್ದುಕೊಳ್ಳಲಾಗಿದೆ.)

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಸಿಂಡ್ ಬ್ಯಾಂಕ್‌ನಿಂದ ವಾಹನ, ಗೃಹ ಸಾಲಗಳ ಮೇಳ ಇಂದು

Upayuktha

ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಯುಗದ ಋಷಿ: ಯೋಗಗುರು ಬಾಬಾ ರಾಮ್ ದೇವ್

Upayuktha

ಮಂಗಳೂರು ಶಾಂತ: ಇಂದು 3ರಿಂದ 6 ಕರ್ಫ್ಯೂ ಸಡಿಲಿಕೆ; ನಾಳೆ ಹಗಲು ಪೂರ್ತಿ ಸಡಿಲಿಕೆ: ಬಿಎಸ್‌ವೈ

Upayuktha