ದೇಶ-ವಿದೇಶ ಬಾಲಿವುಡ್

ಹೊಸ ಹೈರ್ ಸ್ಟೈಲ್ ಲುಕ್ ನಲ್ಲಿ ಬಾಲಿವುಡ್ ನಟ ಸಂಜಯ್ ದತ್

ಮುಂಬೈ : ಜೀವಕ್ಕೆ ಕುತ್ತು ತರುವ ಮಾರಕ ರೋಗವಾದ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿರುವ ಬಾಲಿವುಡ್ ನಟ ಸಂಜಯ್ ದತ್ ಇದೀಗ ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಅಚ್ಚರಿ ಮೂಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಆರೋಗ್ಯದ ಬಗ್ಗೆ ಶುಭ ಸುದ್ದಿ ನೀಡಿ, ಸಂಜು ಬಾಬಾ ಮುದ್ದು ಮಕ್ಕಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.

ಹಾಗು ಫ್ಯಾಮಿಲಿ ಜೊತೆಗಿನ ಸಂತಸದ ಕ್ಷಣಗಳನ್ನು ಕಳೆಯುತ್ತಿರುವ ಅವರು ಹೊಸದೊಂದು ಹೇರ್ ಸ್ಟೈಲ್ ಮೂಲಕ ಅಭಿಮಾನಿಗಳ ಮನಸೆಳೆದಿದ್ದಾರೆ.

61 ವರ್ಷ ಪ್ರಾಯದ ಸಂಜಯ್ ದತ್ platinum blonde ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಹೊಸ ಗೆಟಪ್ ನಲ್ಲಿ ಮಿಂಚುತ್ತಿರುವ ಅವರು ಫೋಟೋವನ್ನು ಆತ್ಮೀಯ ಗೆಳೆಯ ಹಾಗೂ ಹೇರ್ ಸ್ಟೈಲಿಸ್ಟ್ ಆಲಿಮ್ ಹಕಿಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಕ್ಯಾನ್ಸರ್ ಖಾಯಿಲೆ ವಿರುದ್ಧ ಹೋರಾಡಿ ಗೆದ್ದ ‘ಅಧೀರ’ ಸಂಜಯ್ ದತ್ ಫೋಟೋ ಶೇರ್ ಮಾಡಿ ಗೆಳೆಯ ಹಕಿಮ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹೊಸ ಹೇರ್ ಸ್ಟೈಲ್ ಮಾಡಿದ್ದು ಶರೀಖ್ ಮತ್ತು ರಿಯಾ. ಗೆಳೆಯನಾದ ಹಕೀಮ್ ಅವರ ಸೆಲೂನ್ ನಲ್ಲೇ ಈ ಹೊಸ ಹೇರ್ ಸ್ಟೈಲ್ ಮಾಡಲಾಗಿದೆ.

ಕ್ಯಾನ್ಸರ್ ನಿಂದ ಗುಣಮುಖರಾಗಿರುವುದಾಗಿ ಸಂಜಯ್ ದತ್ ಪತ್ರ ಬರೆದಿದ್ದರು. ಮಕ್ಕಳ ಹುಟ್ಟುಹಬ್ಬಕ್ಕೆ ನನ್ನ ಆರೋಗ್ಯವೇ ಗಿಫ್ಟ್ ಎಂದು ತಿಳಿಸಿದ್ದರು.

ನನಗೆ ಹಾಗೂ ನನ್ನ ಕುಟುಂಬಕ್ಕೆ ಕೆಲವು ದಿನಗಳು ಬಹಳ ಕಠಿಣವಾಗಿದ್ದವು, ಆದರೆ ದೇವರು, ತನ್ನ ವೀರ ಸೈನಿಕನಿಗೆ ಕಠಿಣವಾದ ಯುದ್ಧವನ್ನು ನೀಡುತ್ತಾನೆ. ನಾನು ಆ ಯುದ್ಧ ಗೆದ್ದಿದ್ದೇನೆ. ಮಕ್ಕಳ ಹುಟ್ಟುಹಬ್ಬಕ್ಕೆ ನಾನು ಆರೋಗ್ಯವಾಗಿ ಬಂದಿರುವುದು ನಾನು ನೀಡುತ್ತಿರುವ ಉಡುಗೊರೆ’ ಎಂದು ಹೀಗೆ ಪತ್ರ ಬರೆದಿದ್ದರು.

Related posts

ಟಿಕ್‌ಟಾಕ್ ಸಹಿತ ಚೀನೀ ಆ್ಯಪ್‌ ಗಳ ನಿಷೇಧಕ್ಕೆ ಮುಂದಾದ ಅಮೆರಿಕ

Upayuktha

ಆಹಾರ ಪದಾರ್ಥಗಳ ಬೆಲೆ ಇನ್ನೂ ಹೆಚ್ಚಳ

Harshitha Harish

ಕೊರೊನಾ ಸಮರದಲ್ಲಿ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಿರಲಿ: ಪ್ರಧಾನಿ ಸೂಚನೆ

Upayuktha

Leave a Comment