ಕ್ಯಾಂಪಸ್ ಸುದ್ದಿ

‘ಸ್ಮೈಲ್ ಪ್ಲೀಸ್….’ ಫೋಟೋಗ್ರಾಫರ್ ನ ಒಂದು ಸಣ್ಣ ಕತೆ

ಸಾಂದರ್ಭಿಕ ಚಿತ್ರ (ಕೃಪೆ: ಹಿಸ್ಟರಿ ಡಾಟ್ ಕಾಮ್)

“ನಗು” ನಗು ಅನ್ನೋದು ಕೆಲವೊಂದು ಕಾರಣಗಳಿಗೆ ಪರಿಹಾರ ಇದ್ದ ಹಾಗೆ ಅಂತನೂ ಹೇಳಬಹುದು. ನಗು ಇಲ್ಲದಿದ್ದರೆ ನಮ್ಮ ಮುಖಗಳಿಗೆ ಅಂದ ಇರುವುದಿಲ್ಲ. ನಮ್ಮ ಮುಖ ಅಂದ ಕಾಣೋದೇ ನಗುವಿನಿಂದ. ಕೆಲವೊಂದು ಸಲ ನಮ್ಮ ನಗು ಭಯವನ್ನೆ ಮರೆ ಮಾಚಿಸುತ್ತೆ. ನಿಮ್ಮ ಅಳುವನ್ನು ಯಾರೂ ಇಷ್ಟಪಡಲ್ಲ ಆದರೆ, ನೀವು ಒಂದು ಕಿರು ನಗೆ ಬೀರಿದರೆ ಸಾಕು ಎಲ್ಲರೂ ಇಷ್ಟ ಪಡುತ್ತಾರೆ. ನಗುವಿಗೆ ಬೆಲೆ ಕೊಡುವವರೆ ಹೆಚ್ಚು ಬಿಟ್ಟರೆ, ನೀವು ಮುಖವನ್ನು ಕುಂಬಳಕಾಯಿಯ ಹಾಗೇ ಮಾಡಿಕೊಂಡರೆ ಯಾರೂನೂ ನಿಮಗೆ ಬೆಲೆ ಕೊಡೋದಿಲ್ಲ.

ಹೀಗಿರುವಾಗ ನಮ್ಮ ಜೊತೆ ಹೆಚ್ಚಾಗಿ ಸ್ಟೈಲ್ ಪ್ಲೀಸ್ ಅಂತ ಹೇಳೋರು ಯಾರು? ಫೋಟೋಗ್ರಾಫರ್, “ನಾವು ಇರುವ ಫೋಟೋಗಿಂತ ನಾವು ತೆಗ್ದಿರೋ ಫೋಟೋಗೆ ಜಾಸ್ತಿ ಲೈಕ್ ಬರೋದು “ಎಲ್ಲಾ ಫೋಟೋಗ್ರಾಫರ್ ಹೇಳೋ ಮಾತು ಇದೆ. ‘ನಾವು ಹುಡುಗ-ಹುಡುಗಿ, ಅಪ್ಪ-ಅಮ್ಮ, ಗಿಡ-ಮರ ಇವುಗಳ ಫೋಟೋಗಳನೆಲ್ಲ ಚೆನ್ನಾಗಿ ತೆಗಿತೇವೆ. ಆದರೆ, ನಮ್ಮ ಫೋಟೋನ ಚೆನ್ನಾಗಿ ತೆಗಿಯೋ ಒಬ್ಬ ಮಕ್ಳು ಇಲ್ಲ..’

ಈ ಹುಡುಗನಿಗೆ ಫೋಟೋ ತೆಗೆಯೋದು ಅಂದ್ರೆ ದೊಡ್ಡ ಹುಚ್ಚು. ಅವನ ಕ್ಯಾಮರಾವನ್ನು ಮಗು ಥರಾ ನೋಡಿಕೊಳ್ಳುತ್ತಾನೆ. ಎಷ್ಟು ಪ್ರೀತಿಸುತ್ತಾನೆ ಅಂದರೆ, ತನ್ನ ಕ್ಯಾಮರಾವನ್ನು ಒಬ್ಬರಿಗೂ ಮುಟ್ಟೋದಕ್ಕೆ ಬಿಡೋದಿಲ್ಲ. ಇವನು ದಿನಾಲೂ ತನ್ನ ಕ್ಯಾಮರಾವನ್ನು ಹಿಡ್ಕೊಂಡು ದೇವಸ್ಥಾನಕ್ಕೆ ಹೋಗುತ್ತಾನೆ.

ಒಂದು ದಿನ ದೇವಸ್ಥಾನದಲ್ಲಿ ಗಿಡಗಳ ಫೋಟೋ ತೆಗೀತಾ ಇರಬೇಕಾದರೆ ಅಲ್ಲೊಂದು ಹುಡುಗಿ ಹಲೋ ಸರ್, ನನ್ನ ಫೋಟೋ ತೆಗಿಯಬಹುದಾ ಅಂತ ಹೇಳುತ್ತಾಳೆ. ಅದಕ್ಕೆ ಅವನು ಕಿರು ನಗೆ ಮಾಡುತ್ತಾ ಓಕೆ ನಿಂತುಕೊಳ್ಳಿ ಅಂತ ಹೇಳುತ್ತಾನೆ. ಹುಡುಗಿ ಅವನ ಜೊತೆ ಕೇಳುತ್ತಾಳೆ ಸರ್ ನಂಗೆ ಆ ಫೋಟೋ ಬೇಕಿತ್ತು ಅಂತ ಅದಕ್ಕೆ ಹುಡುಗ, ನಾನು ದಿನಾಲೂ ಈ ದೇವಸ್ಥಾನಕ್ಕೆ ಬರುತ್ತೇನೆ ನೀವು ನಾಳೆ ಒಂದು ದಿನ ಬರ್ತೀರಾ ಅಂತ ಹೇಳಿದಾಗ ಹುಡುಗಿಯು ಮನಸಲ್ಲಿ ‘ನಾಳೆ ಒಂದು ದಿನ ಯಾಕೆ ದಿನಾಲೂ ನಿನ್ನ ನೋಡಲು ಬರುವೆನು ಇವನ ಫೋನ್ ನಂಬರ್ ಹೇಗೆ ಕೇಳೋದು’ ಅಂತ ಯೋಚನೆ ಮಾಡುತ್ತಾ ನಿಂತುಕೊಂಡು ಇದ್ದಳು. ಹುಡುಗ ಹಲೋ ನೀವು ಏನ್ ಯೋಚನೆ ಮಾಡುತ್ತಾ ಇದ್ದೀರಾ ಅಂತ ಹೇಳುವಾಗ ಹುಡುಗಿ ನಂಗೆ ಫೋಟೋ ಇವತ್ತೇ ಬೇಕು ಅಂತ ಹೇಳುತ್ತಾಳೆ. ಹಾಗಾದರೆ, ಇಲ್ಲೇ ಪಕ್ಕದಲ್ಲಿ ನಮ್ಮ ಸ್ಟುಡಿಯೋ ಇದೆ ಅಲ್ಲಿಗೆ ಬನ್ನಿ ಅಂತ ಹೇಳಿದಾಗ ಹುಡುಗಿಯು ಮತ್ತೊಮ್ಮೆ ಮನಸಲ್ಲಿ ಇವನು ನಂಬರ್ ಕೊಡಲ್ಲ ಅಲ್ವಾ, ಹೇಗೆ ಕೇಳೋದು ಅಂತ ಯೋಚನೆ ಮಾಡುತ್ತಾ ನಿಂತುಕೊಂಡು ಅವನನ್ನೇ ನೋಡುತ್ತಾಳೆ.

ಆಗ ಅವಳು ಸರ್ ನಂಗೆ ಸ್ಟುಡಿಯೋಗೆ ಬರೋದಕ್ಕೆ ಆಗಲ್ಲ ನಂಗೆ ಕೆಲಸಕ್ಕೆ ಲೇಟ್ ಆಯ್ತು ಅಂತ ಹೇಳ್ತಾಳೆ. ಆಗ ಅವನು ಇನ್ನು ಏನ್ ಮಾಡೋದ್ ನಾಳೆ ನೀವು ಈ ದೇವಸ್ಥಾನಕ್ಕೆ ಬನ್ನಿ ಇಲ್ಲೇ ಕೊಡ್ತಿನಿ ಅಂತ ಹೇಳುತ್ತಾನೆ. ಈ ಹುಡುಗಿ ಇವನು ಏನ್ ಹುಡುಗನೋ ಒಂದು ನಂಬರ್ ಕೊಡೊದಕ್ಕೆ ಆಗಲ್ಲ ಅಲ್ವಾ ಅಂತ ಮನಸಲ್ಲಿಯೇ ಹೇಳ್ತಾ ಇದ್ದಾಳೆ. ಮತ್ತೊಮ್ಮೆ ಅವಳು ಅವನನ್ನು ಸರ್…. ನಂಗೆ….. ನಿಮ್ಮ… ನಂ…. ಅಂತ ಹೇಳುವಾಗ ಆ ಹುಡುಗನ ಫ್ರೆಂಡ್ ಕರೆಯುತ್ತಾನೆ. ಬಾರೋ ಹೋಗುವ ಲೇಟ್ ಆಯ್ತು ಅಂತ ಅದ್ದಕ್ಕೆ ಅವನು ಸರಿ ನಾಳೆ ಸಿಗ್ತೀನಿ ಅಂತ ಹೇಳಿ ಹೊರಟು ಹೋಗುತ್ತಾನೆ.

ಮಾರನೇ ದಿನ ಬೇಟಿ ಅವಳು ದೇವಸ್ಥಾನಕ್ಕೆ ಬರುತ್ತಾಳೆ. ಆಗ ಅವನು ಅಲ್ಲಿ ಎಲ್ಲಿಯೋ ಕಾಣ ಸಿಗುದಿಲ್ಲ. ಅವಳು ಅವನು ಬರುತ್ತಾನೆ ಎಂದು ಕಾದು ಕೂತಿರುವಳು. ಸಮಯ ಕಳೆದು ಹೋಯ್ತು ಕೆಲಸಕ್ಕೆ ಹೋಗಬೇಕು ಎಂದು ಎದ್ದು ನಿಲ್ಲುವಗ ಅಲ್ಲಿ ದೇವಸ್ಥಾನದಲ್ಲಿ ಇದ್ದ ಸಮಿತಿಯವರು ಬಂದು ಹೇಳುತ್ತಾರೆ. ಯಾಕಮ್ಮ ಯಾರಿಗೆ ಕಾಯುತ್ತಾ ಕೂತಿರುವೆ. ಅದಕ್ಕೆ ಅವಳು ಈ ದೇವಸ್ಥಾನಕ್ಕೆ ದಿನಾಲೂ ಒಬ್ಬ ಫೋಟೋಗ್ರಾಫರ್ ಬರುತ್ತಾರೆ ಅಲ್ವಾ ಅವರು ಇವತ್ತು ಬಂದಿಲ್ಲವ. ಅದಕ್ಕೆ ಅವರು ಆ ಹುಡುಗನ ಅವನು ಆವಾಗಲೇ ಹೋಗಿದ್ದಾನೆ. ಅವನು ಒಂದು ಫೋಟೋ ಕೊಟ್ಟು ಹೋಗಿದ್ದಾನೆ. ಒಂದು ಹುಡುಗಿ ಬಂದು ಫೋಟೋ ಕೇಳಿದರೆ ಕೊಟ್ಟು ಬಿಡಿ ಅಂತ ಆಗ ಅವಳು ಆ ಫೋಟೋ ನೋಡುವ ಅಂತ ಹೇಳುತ್ತಾಳೆ. ಆ ಫೋಟೋ ಅದು ಇವಳ ಫೋಟೋನೆ ಆಗಿರುತ್ತದೆ. ಆಮೇಲೆ ಇವಳು ಕೆಲಸಕ್ಕೂ ಹೋಗದೆ ತನ್ನ ರೂಮ್ ಗೆ ಹೋಗುತ್ತಾಳೆ.

ಪ್ರೀತಿ ಎಂಬುದು ಎಲ್ಲರ ಮೇಲೆ ಹುಟ್ಟಲು ಸಾಧ್ಯವಿಲ್ಲ. ಇಬ್ಬರ ಮನಸ್ಸಿಗೆ ಇಷ್ಟವಾಗಿದ್ದಲ್ಲಿ ಅಲ್ಲೊಂದು ಪ್ರೀತಿ ಹುಟ್ಟಲು ಸಾಧ್ಯ. ಆ ಹುಡುಗ ಮಾರನೆ ದಿನ ದೇವಸ್ಥಾನಕ್ಕೆ ಹೋಗಿ ಅಲ್ಲಿದ್ದ ಸಮಿತಿಯವರ ಜೊತೆ ಕೇಳುತ್ತಾನೆ. ನಿನ್ನೆ ಒಂದು ಫೋಟೋ ಕೊಟ್ಟಿದ್ದೆ ಅಲ್ವಾ, ಆ ಹುಡುಗಿ ಬಂದಿದ್ದಳ ಅದ್ದಕ್ಕೆ ಅವರು ಆ ಹುಡುಗಿ ಇಲ್ಲಿ ತುಂಬ ಸಮಯ ಇಲ್ಲೇ ಕಾಯುತ್ತಾ ಇದ್ದಳು. ಆಮೇಲೆ ನಾನು ಬಂದು ಕೇಳಿದೆ ಯಾರಿಗೆ ಕಾಯುತ್ತಿರುವೆ ಎಂದು ಆಗ ಅವಳು ಈ ದೇವಸ್ಥಾನಕ್ಕೆ ಒಬ್ಬ ಫೋಟೋಗ್ರಾಫರ್ ಬರುತ್ತಾರೆ ಅಲ್ವಾ ಅವರು ಇವತ್ತು ಬಂದಿಲ್ಲವಾ ಎಂದು ಹೇಳಿದಳು. ಆ ಸಮಯಕ್ಕೆ ಅವಳು ಬರುತ್ತಾಳೆ. ಆಗ ಇಬ್ಬರ ಮುಖದಲ್ಲೂ ಒಂದು ಕಿರು ನಗೆ ಮೂಡಲು ಆರಂಭವಾಯ್ತು.

ಪ್ರೀತಿಯ ಆರಂಭದಲ್ಲಿ ಮೊದಲು ಪ್ರೇಮಿಗಳ ನಡುವೆ ಮೂಡೂದು ಸಣ್ಣ ಕಿರು ನಗೆ. ಆ ಕಿರು ನಗೆಯೇ ಪ್ರೀತಿ ಬೆಳೆಯಲು ಕಾರಣವಾಗುತ್ತದೆ. ಹೀಗೆ ಇವರ ಮಧ್ಯ ಪ್ರೀತಿ ಬೆಳೆಯುತ್ತಾ ಹೋಗುತ್ತಾದೆ. ಮುಂದೆ ಒಂದು ದಿನ ಇಬ್ಬರ ಸುತ್ತಾಡಲು ಹೋಗುತ್ತಾರೆ. ಆಗ ಅವನ ಜೊತೆ ಒಂದು ಸಣ್ಣ ಹಳೆಯ ಕಾರು ಇರುತ್ತದೆ. ಆ ಕಾರಿನಲ್ಲಿಯೇ ಹೋಗುತ್ತಾರೆ. ಆಗ ಈ ಹುಡುಗನ ಫ್ರೆಂಡ್ ಕೂಡ ಬಂದಿರುತ್ತಾನೆ. ಅವನ ಜೊತೆ ಇವಳು ಹೇಳುತ್ತಾಳೆ ನಮ್ಮ ಇಬ್ಬರ ಫೋಟೋ ತೆಗಿ ಅಂತ ತೆಗೆದ ಮೇಲೆ ತೋರಿಸು ಅಂತ ಹೇಳುತ್ತಾಳೆ. ಅವಾಗ ಅವಳು ನಮ್ಮಿಬ್ಬರ ಫೋಟೋ ಚೆನ್ನಾಗಿ ಬಂದಿದೆ ಆದರೆ ಇವನ ಡಬ್ಬ ಕಾರ್ ಎದುರು ನಿಂತು ಸ್ವಲ್ಪ ಚಂದ ಬಂದಿಲ್ಲ ಅಂತ ಹೇಳುತ್ತಾಳೆ. ಆಮೇಲೆ ಇವರು ಹೊರಡುತ್ತಾರೆ. ಆಗ ಅವನ ಕಾರು ಸ್ಟಾರ್ಟ್ ಆಗೋದಿಲ್ಲ. ಅದಕ್ಕೆ ಅವಳು ಹೇಳುತ್ತಾಳೆ. ನೀನು ನಮ್ಮ ಮನೆಗೆ ಹೆಣ್ಣು ನೋಡೋದಕ್ಕೆ ಬರುವಾಗ ಆ ಒಂದು ಕ್ಯಾಮರಾ ಮತ್ತೆ ಈ ಡಬ್ಬ ಹಳೆಯ ಕಾರ್ ಅನ್ನು ಇಡ್ಕೊಂಡು ಬಂದರೆ ನಮ್ಮ ಮನೆಯಲ್ಲಿ ಖಂಡಿತ ಒಪ್ಪಿಕೊಳ್ಳೋದಿಲ್ಲ ಅಂತ ಹೇಳಿ ಅವಳು ಹೋಗುತ್ತಾಳೆ. ನೀನು ಹೊಸ ಕಾರ್ ತೆಗೆದ ಮೇಲೆನೆ ನನ್ನ ಜೊತೆ ಮಾತಾಡಬೇಕು ಇಲ್ಲಾಂದ್ರೆ ಇಲ್ಲಿಯೇ ಬಿಟ್ಟು ಬಿಡು ಅಂತ ಹೇಳಿ ಹೊರಟು ಹೋಗುತ್ತಾಳೆ. ಅವನು ಆ ಲವ್ ವಿಷಯವನ್ನು ಅಲ್ಲಿಯೇ ಬಿಟ್ಟು ಬಿಡುತ್ತಾನೆ. ಆಮೇಲೆ ಆ ಹುಡುಗಿಗೆ ಕಾಲ್ ಮಾಡೋದಕ್ಕೆ ಆಗಲಿ ಮಾತಾಡೋದು ಆಗಲಿ ಹೋಗೋದಿಲ್ಲ. ಹೀಗೆ ಒಂದು ವರ್ಷ ಕಳೆದು ಹೋದ ಮೇಲೆ ಒಂದು ಕಾರ್ ತೆಗೀತಾನೆ. ಇವನು ಒಳ್ಳೆ ಫೋಟೋಗ್ರಾಫರ್ ಆಗಿರುವ ಕಾರಣ ಎಲ್ಲರು ಇವನನ್ನೆ ಹೆಚ್ಚಾಗಿ ಫೋಟೋ ಶೂಟಿಂಗ್ ಗೆ ಎಲ್ಲರೂ ಕರೆಯುತ್ತಾ ಇದ್ದರು. ಒಂದು ದಿನ ಒಂದು ಹುಡುಗ ಕಾಲ್ ಮಾಡುತ್ತಾನೆ.

ಫೋಟೋ ಶೂಟಿಂಗ್ ಇದೆ ಬರಬೇಕು ಅಂತ ಅದಕ್ಕೆ ಇವನು ಆಯ್ತು ಅಂತ ಹೇಳಿ ಇವನು ಮತ್ತು ಇವನ ಫ್ರೆಂಡ್ ಕಾರ್ ಅಲ್ಲಿ ಹೋಗುತ್ತಾರೆ. ಇವರು ಬಂದು ಕಾಯುತ್ತಾ ಇರಬೇಕಾದರೆ ಅವರು ಶೂಟಿಂಗ್ ಗೆ ಮದುವೆ ಆದ ಒಂದು ಹುಡುಗ ಹುಡುಗಿ ಬರುತ್ತಾರೆ. ಆ ಹುಡುಗಿಯನ್ನು ನೋಡಬೇಕಿದ್ದಾರೆ ಅದು ಈ ಫೋಟೋಗ್ರಾಫರ್ ಲವ್ ಮಾಡಿದ ಹುಡುಗಿ ಆಗಿರುತ್ತಾಳೆ. ಈ ಫೋಟೋಗ್ರಾಫರ್ ಗೆ ಶಾಕ್ ಆಗಿ ಬಿಡುತ್ತೆ. ಕಣ್ಣಲಿ ಫುಲ್ ನೀರು ಬರುತ್ತಾದೆ. ಆ ಮದುವೆ ಆದ ಹುಡುಗ ಬಂದು ಹೇಳುತ್ತಾನೆ ಈ ಫೋಟೋಗ್ರಾಫರ್ ಜೊತೆ ನಾವು ನಿನ್ನೆ ಅಷ್ಟೇ ಮದುವೆ ಆಗಿದ್ದೇವೆ. ಇದು ನನ್ನ ಹುಡುಗಿ ಅಂತ ಆಗ ಫೋಟೋಗ್ರಾಫರ್ ಹಿಂದೆ ತಿರುಗಿ ಕಣ್ಣ ನೀರನ್ನು ಒರೆಸಿಕೊಂಡು ಹಾಯ್ ಅಂತ ಹೇಳುತ್ತಾನೆ. ಆಮೇಲೆ ಅವನು ಶೂಟಿಂಗ್ ಸುರು ಮಾಡುವನ ಅಂತ ಹೇಳಿಕೊಂಡು ನಮಗೆ ಪೋಸ್ ಎಲ್ಲ ಕೊಡಲು ಗೊತ್ತಿಲ್ಲ ನೀವೇ ಹೇಳಿ ಕೊಡಬೇಕು ಎಂದು ಹೇಳಿದಾಗ ಹಾ ಓಕೆ ರೆಡಿ ಅಂತ ಹೇಳುತ್ತಾನೆ. ಆಮೇಲೆ ಹುಡುಗಿ ತಲೆ ಕೆಳಗೆ ಹಾಕಿ ನಿಂತು ಕೊಂಡಿರುವಾಗ ಫೋಟೋಗ್ರಾಫರ್ ಹೇಳುತ್ತಾನೆ ಹಲೋ ಮೇಡಂ “ಸ್ಮೈಲ್ ಪ್ಲೀಸ್” ಅಂತ. ಇಲ್ಲಿ ಫೋಟೋಗ್ರಾಫರ್ ನ ಮನಸಲ್ಲಿ ಹೇಳಲಾಗದಷ್ಟು ನೋವು ಇರುತ್ತೆ ಆದರೂ ಅವರು ಹೇಳೋದು “ಸ್ಮೈಲ್ ಪ್ಲೀಸ್” ಈ ಸ್ಮೈಲ್ ಗೆ ದೊಡ್ಡ ಉದಾಹರಣೆ ಫೋಟೋಗ್ರಾಫರ್ ಅಂತಾನೆ ಹೇಳಬಹುದು. ಫೋಟೋಗ್ರಾಫರ್ ನ ಮನಸಲ್ಲಿ ಎಷ್ಟು ನೋವು ಇದ್ದರೂ ಅವರು ಉಳಿದವರಿಗೆ ಹೇಳೋದು ಸ್ಮೈಲ್ ಪ್ಲೀಸ್ ಅಂತನೇ. ನಮ್ಮ ಮನಸಲ್ಲಿ ಎಷ್ಟು ನೋವು ದುಃಖ ಇದ್ದರೂ ನಮ್ಮ ಹೊರಗಿನ ಮುಖ ನಗುತ್ತಾಲೆ ಇರಬೇಕು. ದಿನಾಲೂ ಹೀಗೆ ನಗುತ್ತಾನೇ ಇರಿ.
ಸ್ಮೈಲ್ ಪ್ಲೀಸ್…

-ರಸಿಕ ಮುರುಳ್ಯ
ದ್ವಿತೀಯ ಪತ್ರಿಕೋದ್ಯಮ ವಿಭಾಗ.
ವಿವೇಕಾನಂದ ಕಾಲೇಜು
ನೆಹರು ನಗರ, ಪುತ್ತೂರು.

Related posts

ಉಜಿರೆ ಎಸ್.ಡಿ.ಎಂ. ಕಾಲೇಜ್ : ರಾಷ್ಟ್ರೀಯ ಶಿಕ್ಷಣ ನೀತಿ – ಅನುಷ್ಠಾನದ ಸವಾಲುಗಳು’ ಕುರಿತು ವಿಚಾರ ಸಂಕಿರಣ

Sushmitha Jain

ಸಾಕ್ಷರತೆ ಒಂದು ಜನಾಂದೋಲನ: ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ

Upayuktha

ಆರ್ಥಿಕ ಸಂಕಷ್ಟದ ನಡುವೆಯೂ ತುಳುವಿನ ಪೋಷಣೆ ನಿಲ್ಲದು: ದಯಾನಂದ ಜಿ.ಕತ್ತಲ್‌ಸಾರ್

Upayuktha