ದೇಶ-ವಿದೇಶ ಪ್ರಮುಖ ರಾಜ್ಯ

ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಕ್: 25ರೂ.ಗಳಷ್ಟು ಏರಿಕೆಯಾದ ಅಡುಗೆ ಅನಿಲ ದರ

ಹೊಸದಿಲ್ಲಿ: ಜನಸಾಮಾನ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೆ ಅನಿಲ್ ಆಘಾತ ನೀಡಿದೆ. ಅಡುಗೆ ಅನಿಲದ ಬೆಲೆ ಮಾರ್ಚ್ 1 ಅಂದರೆ ಇವತ್ತು ಮತ್ತೆ 25 ರೂಪಾಯಿಯಷ್ಟು ಏರಿಕೆ ಆಗಿದೆ. ಈ ಮೂಲಕ 1 ತಿಂಗಳ ಅವಧಿಯಲ್ಲಿ ಗ್ಯಾಸ್ ಬೆಲೆ 4 ಬಾರಿ ಏರಿಕೆ ಕಂಡಿದೆ.

ಫೆಬ್ರವರಿ 4ರಂದು 25 ರೂಪಾಯಿ, ಫೆಬ್ರವರಿ 14ರಂದು 50 ರೂಪಾಯಿ, ಫೆಬ್ರವರಿ 25ರಂದು 25 ರೂ.ಗಳಷ್ಟು ಬೆಲೆ ಏರಿಕೆ ಆಗಿತ್ತು. ಡಿಸೆಂಬರ್ ತಿಂಗಳಿಂಸ ಸಿಲಿಂಡರ್ ಬೆಲೆ 225 ರೂಪಾಯಿಯಷ್ಟು ಹೆಚ್ಚಳ ಆಗಿದೆ.

ಡಿಸೆಂಬರ್‍ನಿಂದ ತೈಲ ಕಂಪನಿಗಳು ಪ್ರತಿ 15 ದಿನಕ್ಕೊಮ್ಮೆ ಅಡುಗೆ ಅನಿಲದ ಬೆಲೆ ಬದಲಾವಣೆಯ ನಿರ್ಧಾರ ಮಾಡುತ್ತಿದ್ದವು. ಆದರೆ ಈಗ ಮೊದಲ ಮೂರು ಬೆಲೆ ಏರಿಕೆ ಕೇವಲ 10 ದಿನದ ಅಂತರದಲ್ಲಿ ಆಗಿದ್ದರೆ, ಇವತ್ತಿನ ಬೆಲೆ ಏರಿಕೆ ಕೇವಲ ಐದು ದಿನದ ಅಂತರದಲ್ಲಿ ಆಗಿದೆ.

Related posts

‘ರಾಮಾಯಣ’ದ ಶ್ರೀರಾಮ- ಅರುಣ್ ಗೋವಿಲ್ ಬಿಜೆಪಿಗೆ ಸೇರ್ಪಡೆ

Upayuktha

ಇದು ನನ್ನ ಭಾಗ್ಯ: ಭಾರತ ರತ್ನ ಪ್ರಣಬ್‌ಗೆ ಮೋದಿ ಅಭಿನಂದನೆ

Upayuktha

ಜಾರ್ಖಂಡ್‌ ಟ್ರೆಂಡ್ಸ್: ಬಿಜೆಪಿ 29, ಜೆಎಂಎಂ 23, ಕಾಂಗ್ರೆಸ್ 13, ಆರ್‌ಜೆಡಿ 5, ಜೆವಿಎಂ(ಪಿ) 4, ಎಜೆಎಸ್‌ಯುಪಿ 2

Upayuktha