ಪ್ರಮುಖ ಸ್ಥಳೀಯ

ಕಾಸರಗೋಡು: ಅಡ್ಕತ್ತಬೈಲ್ ಬಳಿ ಟ್ಯಾಂಕರ್ ಲಾರಿ ಪಲ್ಟಿ, ಅನಿಲ ಸೋರಿಕೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಡ್ಕತ್ತಬೈಲು ಸಮೀಪ ಗ್ಯಾಸ್ ಹೇರಿಕೊಂಡು ತೆರಳುತ್ತಿದ್ದ ಟ್ಯಾಂಕರ್ ಲಾರಿ ಬುಧವಾರ ಮುಂಜಾನೆ ಮಗುಚಿ ಬಿದ್ದಿದೆ. ಅನಿಲ ಸೋರಿಕೆಯಾಗಿರುವ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಸುತ್ತಮುತ್ತಲೂ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಬೆಂಕಿ ಉರಿಸಬಾರದೆಂದು ಅಗ್ನಿಶಾಮಕ ದಳ ಎಚ್ಚರಿಕೆ ನೀಡಿದೆ. ಈ ಭಾಗದಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿದೆ.

ಮಂಗಳೂರಿನಿಂದ ಗ್ಯಾಸ್ ಹೇರಿಕೊಂಡು ಕೊಚ್ಚಿಗೆ ತೆರಳುತ್ತಿದ್ದ ಲಾರಿ ಹೆದ್ದಾರಿಯಲ್ಲಿ ಮಗುಚಿ ಬಿದ್ದಿದೆ. ಸೋರಿಕೆ ತಡೆಯುವ ಕಾರ್ಯಾಚರಣೆ ಆರಂಭಗೊಂಡಿದೆ. ಸಮೀಪದಲ್ಲಿರುವ ಅಡ್ಕತ್ತಬೈಲು ಯುಪಿ ಸರಕಾರಿ ಶಾಲೆಗೆ ರಜೆ ನೀಡಲಾಗಿದೆ.

(ಉಪಯುಕ್ತ ನ್ಯೂಸ್ ಸುದ್ದಿಜಾಲ)

Related posts

ಬಂಟ್ವಾಳ ಸಜಿಪನಡು ಗ್ರಾಮದ 10 ತಿಂಗಳ ಮಗುವಿಗೆ ಕೊರೊನಾ ಸೋಂಕು

Upayuktha

ಕರಾವಳಿಯಲ್ಲಿ ತಗ್ಗಿದ ಕೊರೊನಾ ಅಬ್ಬರ: ಮೂರೂ ಜಿಲ್ಲೆಗಳಲ್ಲಿ ಇಂದು ಕೋವಿಡ್ ನೆಗೆಟಿವ್

Upayuktha

ವಿವೇಕಾನಂದ ಕಾಲೇಜಿನಲ್ಲಿ ಸಾಹಿತ್ಯ ಮಂಟಪ ಕಾರ್ಯಕ್ರಮ

Upayuktha