ಎಲ್ಲಿ-ಏನು ಪ್ರಮುಖ ಸ್ಥಳೀಯ

ಮಚ್ಚಿನ ಗ್ರಾ. ಪಂ.: ಅಧ್ಯಕ್ಷರಾಗಿ ಚಂದ್ರಕಾಂತ ನಿಡ್ದಬೆ-ಉಪಾಧ್ಯಕ್ಷರಾಗಿ ಡೀಕಮ್ಮ ಅವಿರೋಧ ಆಯ್ಕೆ

ಮಚ್ಚಿನ : ಮಚ್ಚಿನ ಗ್ರಾಮ ಪಂಚಾಯತ್ ನ 14 ಸ್ಥಾನಗಳು  ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದ್ದು, ಅಧ್ಯಕ್ಷರಾಗಿ ಚಂದ್ರಕಾಂತ ನಿಡ್ದಬೆ ಹಾಗೂ ಉಪಾಧ್ಯಕ್ಷರಾಗಿ ಡೀಕಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಗಾದಿಗೆ ಸಾಮಾನ್ಯ ಮಹಿಳೆ ಸ್ಥಾನ ಮೀಸಲಾತಿ ನಿಗದಿಯಾಗಿದ್ದು, ಮಚ್ಚಿನ ವಾರ್ಡ್ -4 ರಿಂದ ಚಂದ್ರಕಾಂತ ಹಾಗೂ 5ನೇ ವಾರ್ಡ್ ನಿಂದ ಡೀಕಮ್ಮ ಸ್ಪರ್ಧಿಸಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಶೇಷಗಿರಿ ನಾಯಕ್ ಚುನಾವಣಾಧಿಕಾರಿ ಆಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೌರಿ ಶಂಕರ್, ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಪ್ರಶ್ನಿಸುತ್ತಾ ಕುಳಿತರೆ ಯಾವುದೇ ಸಮಸ್ಯೆ ಬಗೆಹರಿಯದು: ಟಿವಿ9 ಸುದ್ದಿ ನಿರೂಪಕಿ ಸುಕನ್ಯಾ

Upayuktha

ನಾಳೆ (ಏ.22) ಪಂಚಮಹಾಶಕ್ತಿ ಶ್ರೀ ಗಾಯತ್ರಿದೇವಿ, ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಕೋವಿಡ್-19 ಲಸಿಕೆ ಅಭಿಯಾನ

Upayuktha

ಎಫ್‌ಡಿ ಬಡ್ಡಿದರ ಕಡಿತ: 4 ಕೋಟಿ ಹಿರಿಯ ನಾಗರಿಕರಿಗೆ ಸಂಕಷ್ಟ

Upayuktha