ಗ್ರಾಮಾಂತರ ಸ್ಥಳೀಯ

ಸಚಿವ ಎಸ್ ಅಂಗಾರರಿಗೆ ಮದರು ಮಹಾಮಾತೆ ಮೊಗೇರ ಸಮಾಜದ ಗೌರವಾಭಿನಂದನೆ

ಬದಿಯಡ್ಕ: ಭಾರತದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಭೂಮಿಪುತ್ರರಾದ ಮೊಗೇರ ಸಮಾಜದಿಂದ ಸಚಿವರಾಗಿ ಕರ್ನಾಟಕ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡ ಎಸ್.ಅಂಗಾರ ಅವರಿಗೆ ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ವತಿಯಿಂದ ಗೌರವಾಭಿನಂದನೆ ನೀಡಲಾಯಿತು.

ಸುಬ್ರಹ್ಮಣ್ಯ ಕ್ಷೇತ್ರದ ಅತಿಥಿಗೃಹದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಸಂತ ಅಜಕ್ಕೋಡು ಹೂ ಗುಚ್ಛ ನೀಡಿ ಶಾಲು ಹೊದೆಸಿ ಅಭಿನಂದಿಸಿದರು. ಗೌರವ ಸಲಹೆಗಾರ ರಾಮಪ್ಪ ಮಂಜೇಶ್ವರ, ಪ್ರಧಾನ ಕಾರ್ಯದರ್ಶಿ ಡಿ.ಶಂಕರ ದರ್ಭೆತ್ತಡ್ಕ, ಉಪಾಧ್ಯಕ್ಷ ಸುರೇಶ್ ಅಜಕ್ಕೋಡು, ಸಾಂಸ್ಕೃತಿಕ ಸಂಚಾಲಕ ರಾಮಪಟ್ಟಾಜೆ, ರವಿ ದರ್ಬೆತ್ತಡ್ಕ ಮೊದಲಾದವರು ಜೊತೆಗಿದ್ದರು.

ತನ್ನದೇ ಸಮುದಾಯದ ವತಿಯಿಂದ ಮೊದಲ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವರು ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಹುಸಂಖ್ಯಾತರಾದ ಮೂಲನಿವಾಸಿ ಮೊಗೇರರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಮಧೂರು ದೇವಸ್ಥಾನದ ಮೂಲಸ್ಥಾನ ಅಭಿವೃದ್ಧಿಯ ಕುರಿತು ವಸಂತ ಅಜಕ್ಕೋಡು ವಿವರಣೆ ನೀಡಿದರು. ಮದರುವಿಗೆ ಸ್ಥಾನಮಾನ ಕಲ್ಪಿಸಲು ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಮದರು ಮಹಾಮಾತೆ ಮೊಗೇರ ಸಮಾಜದ ಚಟುವಟಿಕೆಗಳನ್ನು ಸಚಿವರು ಶ್ಲಾಘಿಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಶ್ರೀರಾಮಚಂದ್ರಾಪುರ ಮಠದಿಂದ ವಿಶ್ವಕ್ಕೇ ಮಾದರಿ ಎನಿಸುವ ವಿಷ್ಣುಗುಪ್ತ ವಿವಿ: ರಾಘವೇಶ್ವರ ಶ್ರೀ

Upayuktha

ಸೆ.10: ಶಕ್ತಿನಗರ ತುಳುನಾಡ ಅಟ್ಟೆಮಿಯಲ್ಲಿ ‘ಬೀರದ ಬೊಲ್ಪು’ ಸುಗಿಪು- ದುನಿಪು

Upayuktha

ನಾಳೆ ಮೂಡಬಿದ್ರೆ ಕಂಬಳ: ಮುಖ್ಯಮಂತ್ರಿ ಆಗಮನ

Upayuktha