ದೇಶ-ವಿದೇಶ ಪ್ರಮುಖ

ಮಧ್ಯಪ್ರದೇಶ: ಪ್ರಧಾನಿ ಮೋದಿ ಅವರಿಂದ ಇಂದು 1.75 ಲಕ್ಷ ಮನೆಗಳ ಉದ್ಘಾಟನೆ

ಪಿಎಂಎವೈ-ಜಿ ಅಡಿಯಲ್ಲಿ ನಿರ್ಮಾಣಗೊಂಡ ಮನೆಗಳು

ಚಿತ್ರ ಕೃಪೆ: ನ್ಯೂಸ್ ಆನ್ ಎಐಆರ್

ಹೊಸದಿಲ್ಲಿ:

ಪ್ರಧಾನ ಮಂತ್ರಿ ಆವಾಸ್ ಯೋಜನಾ- ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ ಮಧ್ಯಪ್ರದೇಶದಲ್ಲಿ ನಿರ್ಮಿಸಲಾದ 1.75 ಲಕ್ಷ ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉದ್ಘಾಟಿಸಲಿದ್ದಾರೆ.

ಈ ಎಲ್ಲ ಮನೆಗಳು ಕೋವಿಡ್ 19 ಸವಾಲಿನ ಅವಧಿಯಲ್ಲಿ ನಿರ್ಮಾಣಗೊಂಡಿವೆ ಅಥವಾ ಪೂರ್ಣಗೊಂಡಿವೆ.

ಪ್ರಧಾನಿ ಮೋದಿ ಅವರು ಒಂದು ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಭಾಗವಹಿಸುತ್ತಾರೆ.

20222ರ ಒಳಗೆ ಎಲ್ಲರಿಗೂ ವಸತಿ ಒದಗಿಸಬೇಕೆಂಬ ಮೋದಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಅನುಸಾರ ಈ ವರ್ಷ ಇದುವರೆಗೆ ದೇಶಾದ್ಯಂತ ಒಟ್ಟು 1.14 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ.

ಮಧ್ಯಪ್ರದೇಶದಲ್ಲಿ 17 ಲಕ್ಷ ಬಡ ಕುಟುಂಬಗಳು ಈ ವರೆಗೆ ಯೋಜನೆಯ ಲಾಭ ಪಡೆದಿವೆ. ಪಿಎಂಎವೈ-ಜಿ ಅಡಿಯಲ್ಲಿ ಪ್ರತಿಯೊಬ್ಬ ಫಲಾನುಭವಿಗೆ ಶೇ 100ರಷ್ಟು ಅನುದಾನವನ್ನು ಸರಕಾರವೇ ನೀಡುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು 60:40ರ ಅನುಪಾತದಲ್ಲಿ ವೆಚ್ಚವನ್ನು ಹಂಚಿಕೊಳ್ಳುತ್ತವೆ. 2022ರ ವೇಳೆಗೆ ಯೋಜನೆ ಅಡಿಯಲ್ಲಿ 2.95 ಕೋಟಿ ಮನೆಗಳನ್ನು ನಿರ್ಮಾಣ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕನ್ನಡನಾಡು ಮರೆಯದ ಮಾಣಿಕ್ಯ, ‘ಬಂಗಾರದ ಮನುಷ್ಯ’ ಡಾ. ರಾಜ್‌ಕುಮಾರ್

Upayuktha

ಗೋಡ್ಸೆ ಪರ ಹೇಳಿಕೆ: ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಬಿಜೆಪಿ ಶಿಸ್ತುಕ್ರಮ

Upayuktha

ಮಾಜಿ ರಾಷ್ಟ್ರಪತಿ, ಶ್ರೇಷ್ಠ ಮುತ್ಸದ್ದಿ ಪ್ರಣಬ್ ಮುಖರ್ಜಿ ಇನ್ನಿಲ್ಲ

Upayuktha

Leave a Comment

error: Copying Content is Prohibited !!