ಸಾಧಕರಿಗೆ ನಮನ

ಮುದ್ದಣ ಜಯಂತಿ: ಅಜ್ಞಾತವಾಗಿಯೇ ಉಳಿದ ಮಹಾಕವಿ

ಅಜ್ಞಾತವಾಗಿ ಬದುಕಿದ ಮಹಾಕವಿಯ ಜನ್ಮದಿನ ಇಂದು (ಜನವರಿ 24). 31 ವರ್ಷ ಮಾತ್ರ ಬದುಕಿದ್ದ ಮುದ್ದಣ ಬದುಕಿನ ಉದ್ದಕ್ಕೂ ಬಡತನ, ಹಸಿವು ಉಂಡವರು. ಮುದ್ದಣ ಬರೆದದ್ದೆಲ್ಲವೂ ಮಹಾನ್ ಕೃತಿಗಳೇ. ಒಂದಕ್ಕಿಂತ ಒಂದು ಶ್ರೇಷ್ಟವೆ ಆಗಿವೆ. ಅದ್ಭುತ ರಾಮಾಯಣ, ಶ್ರೀ ರಾಮಾಶ್ವಮೇಧ, ಶ್ರೀ ರಾಮ ಪಟ್ಟಾಭಿಷೇಕ, ಯಕ್ಷಗಾನ ಕೃತಿಗಳಾದ ರತ್ನಾವತಿ ಕಲ್ಯಾಣ, ಕುಮಾರ ವಿಜಯ ಎಲ್ಲವೂ ವಿಶ್ವವಂದ್ಯ ಕೃತಿಗಳೇ ಆಗಿವೆ. ಮುದ್ದಣ ಮನೋರಮೆಯರ ಸಲ್ಲಾಪ ನಿತ್ಯ ನೂತನ.

ತಾನು ದೊಡ್ಡ ಪದವಿಯನ್ನು ಪಡೆದವನಲ್ಲ, ಆದ್ದರಿಂದ ಈ ಕೃತಿಗಳನ್ನು ತಾನು ಬರೆದೆ ಎಂದರೆ ಯಾರು ನಂಬುತ್ತಾರೆ? ಎಂಬ ಕೀಳರಿಮೆಯಿಂದ ತಾನು ಬರೆದ ಅಷ್ಟೂ ಕೃತಿಗಳು ತನ್ನದಲ್ಲ, ತನಗೆ ಪುರಾತನ ತಾಳೆಗರಿಯ ಗ್ರಂಥಗಳಿಂದ ದೊರೆತದ್ದು. ಅವುಗಳು ಪ್ರಕಟ ಆದರೆ ಸಾಕು ಎಂದು ಹೇಳಿದ್ದ ಮಹಾಕವಿ ಮುದ್ದಣ! ಈ ನೋವು ನಮಗೆ ಅರ್ಥ ಆದರೆ ಸಾಕು! ಈ ಕಾರಣಕ್ಕೆ ಅವರ ಎಲ್ಲಾ ಕೃತಿಗಳು ಪ್ರಕಟ ಆದರೂ ಅವುಗಳ ರಾಯಧನವನ್ನು ಕೂಡ ಪಡೆಯಲಾಗದ ಅಸಹಾಯಕತೆ ಮತ್ತು ಬಡತನದ ಸಂಕಟ ನಮಗೆ ಅರ್ಥ ಆದರೆ ಸಾಕು! ಮುದ್ದಣ ಅಂತಹ ಕವಿ ಬೇರೆ ಯಾವ ರಾಷ್ಟ್ರದಲ್ಲಿ ಜನಿಸಿದರೂ ಆತನನ್ನು ಅಲ್ಲಿನವರು ತಲೆಯ ಮೇಲೆ ಹೊತ್ತು ಮೆರೆಯುತ್ತಿದ್ದರು ಎಂದಿದ್ದಾರೆ ಶಿವರಾಮ ಕಾರಂತರು. ಸಿರಿಗನ್ನಡಂ ಗೆಲ್ಗೆ ಎಂದು ಕನ್ನಡವನ್ನು ಮೆರೆಸಿದ ಮಹಾಕವಿ ನನ್ನ ಕಾರ್ಕಳ ತಾಲೂಕಿನ ನಂದಳಿಕೆ ಎಂಬ ಸುಗ್ರಾಮದವರು ಎನ್ನುವ ಹೆಮ್ಮೆ ನನಗಿರಲಿ. ಅವರಿಗೆ ನಮ್ಮ ಶ್ರದ್ಧಾಂಜಲಿ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಇಂದಿನ ಐಕಾನ್- ಭಾರತೀಯ ರಾಜಕಾರಣದ ಅಜಾತಶತ್ರು, ಭಾರತ ರತ್ನ ವಾಜಪೇಯಿಜಿ

Upayuktha

ಸಾಧಕರಿಗೆ ನಮನ: ವೈದ್ಯಕೀಯ ಸೇವೆಗಾಗಿಯೇ ಜೀವನ ಮುಡಿಪಾಗಿಟ್ಟ ಡಾ.ಬಿ.ಸಿ.ರಾಯ್

Upayuktha

ಇಂದಿನ ಐಕಾನ್- ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ

Upayuktha