ದೇಶ-ವಿದೇಶ ಪ್ರಮುಖ

‘ಮಹಾ ನಾಟಕ’ದ ಬಳಿಕ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಕೆಲವೇ ನಿಮಿಷಗಳಲ್ಲಿ ಪ್ರಮಾಣ

ಉದ್ಧವ್ ಠಾಕ್ರೆ

ಮುಂಬಯಿ: ಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್ ಕೈಜೋಡಿಸಿ ರಚಿಸಿಕೊಂಡ ಮಹಾರಾಷ್ಟ್ರ ವಿಕಾಸ್ ಅಘಾಡಿ ಇಂದು ನೂತನ ಸರಕಾರ ರಚಿಸಿದ್ದು, ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಈ ಸಂಜೆ 6:40ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಎನ್‌ಸಿಪಿ ನಾಯಕ ಅಜಿತ್ ಪವಾರ್ ಇಂದು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿಲ್ಲ.

ಮಹಾ ವಿಕಾಸ್ ಅಘಾಡಿಯಲ್ಲಿ ಎರಡು ಸಮನ್ವಯ ಸಮಿತಿಗಳನ್ನು ರಚಿಸಲಾಗಿದ್ದು, ಮೊದಲನೆಯದು ರಾಜ್ಯ ಸಚಿವ ಸಂಪುಟದಲ್ಲೇ ಇರಲಿದೆ. ಎರಡನೆಯದು ಮೈತ್ರಿಕೂಟ ಪಾಲುದಾರ ಪಕ್ಷಗಳ ನಡುವೆ ಸಮನ್ವಯದ ಕಾರ್ಯ ಮಾಡಲಿದೆ.

ಉದ್ಧವ್‌ ಠಾಕ್ರೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಸಾವಿರಾರು ಜನತೆ ಶಿವಾಜಿ ಪಾರ್ಕ್‌ಗೆ ಆಗಮಿಸುತ್ತಿದ್ದಾರೆ.

ಪ್ರಮಾಣ ವಚನ ಸ್ವೀಕಾರದ ಬಳಿಕ ಉದ್ಧವ್ ಠಾಕ್ರೆ ಸಹ್ಯಾದ್ರಿ ಗೆಸ್ಟ್ ಹೌಸ್‌ನಲ್ಲಿ ರಾತ್ರಿ 8 ಗಂಟೆಗೆ ಮೊದಲ ಕ್ಯಾಬಿನೆಟ್ ಸಭೆ ನಡೆಲಿದ್ದಾರೆ. ಈ ಸಭೆಯಲ್ಲಿ ನನಾರ್ ರಿಫೈನರಿ ಯೋಜನೆ ಮತ್ತು ಬುಲೆಟ್ ಟ್ರೈನ್ ಯೋಜನೆ ವಿಚಾರ ಚರ್ಚೆಗೆ ಬರಲಿದೆ ಎಂದು ಶಿವಸೇನೆ ನಾಯಕ ಶಕನಾತ್ ಶಿಂದೆ ಹೇಳಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಉದ್ಧವ್ ಠಾಕ್ರೆಗೆ ಶುಭ ಹಾರೈಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ.

ಎನ್‌ಸಿಪಿ ಮತ್ತು ಶಿವಸೇನೆಯಿಂದ ತಲಾ ಇಬ್ಬರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶಿವಾಜಿ ಪಾರ್ಕ್‌ನಲ್ಲಿ ಉದ್ಧವ್ ಠಾಕ್ರೆ ಪ್ರಮಾಣವಚನಕ್ಕೆ ಸಾಕ್ಷಿಯಾಗಲು ಈಗಾಗಲೇ ಲಕ್ಷಾಂತರ ಮಂದಿ ನೆರೆದಿದ್ದಾರೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಎಸ್​​ಎಸ್​​ಎಲ್​​ಸಿ ಫಲಿತಾಂಶ ದಿನಾಂಕ ಇನ್ನೂ ನಿಗದಿಯಾಗಿಲ್ಲ: ಸಚಿವ ಸುರೇಶ್​ ಕುಮಾರ್​

Harshitha Harish

ರಾಜಸ್ಥಾನ: ಶ್ಯಾಮ ಪ್ರಸಾದ ಮುಖರ್ಜಿ ಪ್ರತಿಮೆ ಧ್ವಂಸ

Upayuktha

ಮತ್ತೆ ಚೀನಾದ ಆ್ಯಪ್ ನಿಷೇಧಿಸಿದ ಭಾರತ

Harshitha Harish