ದೇಶ-ವಿದೇಶ ಪ್ರಮುಖ

ಜಾರ್ಖಂಡ್‌: ಚುನಾವಣೆ ಹೊಸ್ತಿಲಲ್ಲಿ ವಿಪಕ್ಷಗಳಿಗೆ ಆಘಾತ, 6 ಶಾಸಕರು ಬಿಜೆಪಿ ಸೇರ್ಪಡೆ

ಜಾರ್ಖಂಡ್‌ನಲ್ಲಿ ಬಿಜೆಪಿ ಸೇರಿದ ಪ್ರತಿಪಕ್ಷ ಶಾಸಕರು (ಚಿತ್ರ ಕೃಪೆ: ಪ್ರಭಾತ್‌ ಖಬರ್)

ರಾಂಚಿ:

ಜಾರ್ಖಂಡ್‌ನ ವಿರೋಧ ಪಕ್ಷಗಳ ಆರು ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದು, ವಿಧಾನಸಬೆ ಚುನಾವಣೆಯ ಹೊಸ್ತಿಲಿನಲ್ಲೇ ಪ್ರತಿಪಕ್ಷಗಳಿಗೆ ಭಾರೀ ಹಿನ್ನಡೆಯಾಗಿದೆ.

ಮುಖ್ಯಮಂತ್ರಿ ರಘುಬರ ದಾಸ್‌ ಅವರ ಸಮ್ಮುಖದಲ್ಲಿ ಶಾಸಕರು ಬಿಜೆಪಿ ಸೇರಿದ್ದಾರೆ.

ಜಾರ್ಖಂಡ್‌ ಮುಕ್ತಿ ಮೋರ್ಚಾದ (ಜೆಎಂಎಂ) ಕುನಾಲ್‌ ಸಾರಂಗಿ, ಜೆಪಿ ಭಾಯಿ ಪಟೇಲ್‌ ಮತ್ತು ಚಮ್ರಾ ಲಿಂಡಾ, ಕಾಂಗ್ರೆಸ್‌ನ ಸುಖ್‌ದೇವ್‌ ಭಗತ್‌ ಮತ್ತು ಮನೋಜ್‌ ಯಾದವ್‌ ಹಾಗೂ ನವಜವಾನ್‌ ಸಂಘರ್ಷ ಮೋರ್ಚಾದ ಭಾನು ಪ್ರತಾಪ್‌ ಸಾಹಿ ಬಿಜೆಪಿ ಸೇರಿದವರು.

ಈ ಪಕ್ಷಾಂತರದಿಂದ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಮುನ್ನವೇ ಪ್ರತಿಪಕ್ಷಗಳು ದುರ್ಬಲಗೊಂಡಿವೆ.

ಆಡಳಿತಾರೂಢ ಬಿಜೆಪಿ ಈಗಾಗಲೇ ಚುನಾವಣೆಗೆ ಬಿರುಸಿನ ಸಿದ್ಧತೆ ನಡೆಸುತ್ತಿದೆ. ಮುಖ್ಯಮಂತ್ರಿ ರಘುಬರ ದಾಸ್‌ ವಾರು ಜನ ಆಶೀರ್ವಾದ ಯಾತ್ರೆ ಆರಂಭಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸುಖ್‌ದೇವ್‌ ಭಗತ್‌ ಮತ್ತು ಮನೋಜ್‌ ಯಾದವ್‌ ಕೆಲವು ಸಮಯದಿಂದ ಬಿಜೆಪಿ ಜತೆ ನಿಕಟ ಸಂಪರ್ಕದಲ್ಲಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ರಾಮೇಶ್ವರ್‌ ಓರೋನ್‌ ಅವರೇ ಕಾರಣರೆಂದು ದೂಷಿಸಿರುವ ಭಗತ್‌, ಕಾಂಗ್ರೆಸ್‌ನಲ್ಲಿ ತೀವ್ರ ಅಸಮಾಧಾನ ಹೊಂದಿದ್ದರು.

ಮನೋಜ್‌ ಯಾದವ್‌ ಕೂಡ ಕಳೆದ ಚುನಾವಣೆಯಲ್ಲಿ ಚಾತ್ರಾ ಲೋಕಸಭಾ ಸ್ಥಾನದಿಂದ ಸ್ಪರ್ಧಿಸಿ ಬಿಜೆಪಿ ಎದುರು ಸೋತಿದ್ದರು.

Related posts

ಭಾವನೆಗಳ ಸಾಗರದಲ್ಲಿ ಮಿಂದೆದ್ದ ರಾಮಾಯಣದ ‘ರಾವಣ’ ಪಾತ್ರಧಾರಿ ಅರವಿಂದ್ ತ್ರಿವೇದಿ: ವೀಡಿಯೋ ವೈರಲ್

Upayuktha

ಕ್ಯಾಮೆರಾ ಕಣ್ಣಿನಲ್ಲಿ ಮೈಸೂರು ದಸರಾ ವರ್ಣ ವೈಭವ

Upayuktha

ಚೀನಾದಲ್ಲಿ ಡಿಜಿಟಲ್ ಕರೆನ್ಸಿ ಪ್ರಾಯೋಗಿಕ ಬಳಕೆ ಆರಂಭ: ಡಾಲರ್‌ ಪ್ರಾಬಲ್ಯ ತಡೆಗೆ ಡ್ರ್ಯಾಗನ್‌ ಸಜ್ಜು

Upayuktha