ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಜ.14: ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಜಾಲಗೋಷ್ಠಿ, ಮಕರ ಸಂಕ್ರಾಂತಿ ವಿಶೇಷ

‘ಆಧುನಿಕ ವಿಜ್ಞಾನ, ಜ್ಯೋತಿರ್ವಿಜ್ಞಾನಗಳಲ್ಲಿ ಭಾರತೀಯ ಕಾಲಗಣನೆ’ ವಿಷಯದ ಪ್ರಸ್ತುತಿ

ಪುತ್ತೂರು: ಇಲ್ಲಿನ ಬಪ್ಪಳಿಗೆಯಲ್ಲಿರುವ ಅಂಬಿಕಾ ಪದವಿ ಮಹಾವಿದ್ಯಾಲಯದ ತತ್ವಶಾಸ್ತ್ರ, ಸಂಸ್ಕøತ ವಿಭಾಗಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಉಮ್ಮಚಗಿಯಲ್ಲಿನ ಶ್ರೀ ಶ್ರೀಮಾತಾ ಸಂಸ್ಕøತ ಮಹಾಪಾಠಶಾಲಾ ಇವುಗಳ ಜಂಟಿ ಆಶ್ರಯದಲ್ಲಿ ಜ.14ರಂದು ಮಕರ ಸಂಕ್ರಾಂತಿ ಪ್ರಯುಕ್ತ ಆಧುನಿಕ ವಿಜ್ಞಾನ ಹಾಗೂ ಜ್ಯೋತಿರ್ವಿಜ್ಞಾನಗಳ ಚಿಂತನೆಯಲ್ಲಿ ಭಾರತೀಯ ಕಾಲಗಣನೆ ಎಂಬ ವಿಷಯದ ಕುರಿತು ಅಪರಾಹ್ನ 3ಕ್ಕೆ ವೆಬಿನಾರ್ ನಡೆಯಲಿದೆ.

ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಕಾರ್ಯದರ್ಶಿ ನುಬ್ರಹ್ಮಣ್ಯ ನಟ್ಟೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಉಮ್ಮಚಗಿಯ ಶ್ರೀ ಶ್ರೀಮಾತಾ ಸಂಸ್ಕøತ ಪಾಠಶಾಲಾದ ಪ್ರಾಚಾರ್ಯೆ ವಿದುಷಿ ಶರಾವತಿ ಗಜಾನನ ಭಟ್ಟ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಎಸ್ ವ್ಯಾಸ ಸಂಸ್ಥೆಯ ವಿಶ್ರಾಂತ ಡೀನ್ ಡಾ ಗೋಪಾಲಕೃಷ್ಣ ಭಟ್ಟ ಹರಿಗಾರು ಹಾಗೂ ನಟ್ಟೋಜ ಫೌಂಡೇಶನ್ ಟ್ರಸ್ಟ್‍ನ ಖಜಾಂಚಿ ರಾಜಶ್ರೀ ನಟ್ಟೋಜ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಉಪಸ್ಥಿತರಿರುವರು.

ಈ ವೆಬಿನಾರ್ ನಲ್ಲಿ ಎರಡು ಪ್ರಬಂಧ ಮಂಡನೆ ನಡೆಯಲಿದ್ದು ಉಮ್ಮಚಗಿಯ ಸಂಸ್ಕøತ ಪಾಠಶಾಲಾದ ಜ್ಯೋತಿಶ್ಯಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾಗೇಶ ಭಟ್ಟ ಕೆ.ಸಿ ಅವರು ಜ್ಯೋತಿರ್ವಿಜ್ಞಾನ ಚಿಂತನೆಯಲ್ಲಿ ಭಾರತೀಯ ಕಾಲಗಣನೆ (ಪಂಚಾಂಗ) ಎಂಬ ವಿಷಯದ ಬಗೆಗೆ ಪ್ರಬಂಧ ಮಂಡಿಸಲಿದ್ದಾರೆ. ಹಾಗೆಯೇ ವೈಶ್ವಿಕ ವಿಜ್ಞಾನ ಚಿಂತನೆಯಲ್ಲಿ ಕಾಲಗಣನೆಯ ವಾಸ್ತವ ಲೆಕ್ಕಾಚಾರ ಎಂಬ ವಿಷಯದ ಬಗೆಗೆ ಕಾಸರಗೋಡಿನ ಭೌತಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿ ಆದರ್ಶ ಎಚ್.ಎ ಪ್ರಸ್ತುತಿಗೈಯಲಿದ್ದಾರೆ.

ಈ ವೆಬಿನಾರ್ ಗೂಗಲ್ ಮೀಟ್ ಮಾಧ್ಯಮದ ಮೂಲಕ ನಡೆಯಲಿದ್ದು ಭಾಗವಹಿಸಲು ಇಚ್ಚಿಸುವವರು ಅಂಬಿಕಾ ಪದವಿ ಮಹಾವಿದ್ಯಾಲಯದ 08251 295688 ಸಂಖ್ಯೆಯನ್ನು ಸಂಪರ್ಕಿಸಿ ವೆಬಿನಾರ್ ಸಂಪರ್ಕ ಕೊಂಡಿಯನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಮಂಗಳೂರು ನಗರದಲ್ಲಿ ನಾಳೆ ಕಸ ಒಯ್ಯುವವರು ಬರಲ್ಲ; ಬೇಡಿಕೆ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ

Upayuktha

ವಿವೇಕಾನಂದ ಕಾಲೇಜು: 50ನೇ ವರ್ಷದ ಎನ್ನೆಸ್ಸೆಸ್ ದಿನಾಚರಣೆ

Upayuktha

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಮಾನವ ಸಂಪನ್ಮೂಲ ವಿಭಾಗದ ಯೂಟ್ಯೂಬ್ ಚಾನೆಲ್‌ ಉದ್ಘಾಟನೆ

Upayuktha